‘ಸಿಎಂ ಕಚೇರಿ’ಗೆ ‘ಕಡತ ಸಲ್ಲಿಕೆ’ಗೆ ಈ ನಿಮಯಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಆದೇಶ…

kannada t-shirts

ಬೆಂಗಳೂರು,ಮಾರ್ಚ್,4,2021(www.justkannada.in):   ಮುಖ್ಯಮಂತ್ರಿಗಳ ಕಚೇರಿಗೆ ಕಡತ ಸಲ್ಲಿಕೆಯ ಸಂದರ್ಭದ ನಿಯಮಗಳನ್ನ ಬದಲಾವಣೆ ಮಾಡಲಾಗಿದೆ.jk

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಕಚೇರಿಗೆ ಸಲ್ಲಿಕೆಯಾಗುವ ಕಡತಗಳ ಸಲ್ಲಿಕೆಯ ಸಂದರ್ಭದ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ. ಈ ನಿಯಮಗಳನ್ನು ಪಾಲಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೇ ಸರ್ಕಾರಿ ನೌಕರರ ವರ್ಗಾವಣೆಗೂ ತಮ್ಮ ಸೂಚನೆಯಿಲ್ಲದೆ ನಡೆಸದಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಟಿಪ್ಪಣಿ ಹೊರಡಿಸಿದ್ದು, ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳನ್ನು ತುಂಬುವುದಕ್ಕೆ ಹೊರತಾಗಿ, ಬೇರೆ ಯಾವುದೇ ವರ್ಗಾವಣೆಗಳನ್ನು 2021ನೇ ಸಾಲಿನ ಸಾಮಾನ್ಯ ವರ್ಗಾವಣೆವರೆಗೆ ಮಾಡಬಾರದೆಂದು ಸರ್ಕಾರವು ನಿರ್ಧರಿಸಿದೆ. ಅಂತಹ ವರ್ಗಾವಣೆಗಳನ್ನು ಕೂಡ ಇಲಾಖೆ ಮಟ್ಟದಲ್ಲಿ, ಹಂತದಲ್ಲಿ ಮಾಡದೇ, ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿ, ಆದೇಶ ಪಡೆದ ನಂತ್ರವೇ, ಮಾಡತಕ್ಕದ್ದೆಂದು ತಿಳಿಸಲು ನಿರ್ದೇಶಿಸಿದ್ದಾರೆ.

ಈಗಾಗಲೇ ಇಲಾಖೆಗಳಲ್ಲಿ ಕಡತದ ಟಿಪ್ಪಣಿ, ನಡವಳಿ, ಸ್ವೀಕೃತಿ ಮೇಲಿನ ಷರಾ ರೂಪದಲ್ಲಿ ಮುಖ್ಯಮಂತ್ರಿಯವರಿಂದ ಸ್ವೀಕೃತವಾದ ವರ್ಗಾವಣೆ ಆದೇಶಗಳನ್ನು ಸಹ ಕಡತದಲ್ಲಿ ಸಲ್ಲಿಸಿ, ಮುಖ್ಯಮಂತ್ರಿಯವರ ಆದೇಶವನ್ನು ಕಡತದಲ್ಲಿ ಪಡೆದು, ನಂತ್ರವೇ ಜಾರಿಗೊಳಿಸುವುದು.

ಈ ಮೇಲಿನ ಸೂಚನೆಗಳನ್ನು ಪಾಲಿಸದೇ ಜಾರಿಗೊಳಿಸಿದ ವರ್ಗಾವಣೆಗಳ ಬಗ್ಗೆ ಸಂಬಂಧಪಟ್ಟ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳೇ ಜವಾಬ್ದಾರರಾಗುತ್ತಾರೆಂದು ಖಡಕ್ ಸೂಚನೆಯಲ್ಲಿ ತಿಳಿಸಿದ್ದಾರೆ.

ಹಾಗೆಯೇ ಮುಖ್ಯಮಂತ್ರಿಯವರ ಕಚೇರಿಗೆ ಸಲ್ಲಿಸುವ ಎಲ್ಲಾ ಇ-ಕಡತಳನ್ನು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರ ಲಾಗ್-ಇನ್-ಐಡಿಗೆ ಮತ್ತು ಭೌತಿಕ ಕಡತಗಳನ್ನು ಕೊಠಡಿ ಸಂಖ್ಯೆ 326ಎ ಗೆ ಮಾತ್ರ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ. submissions - mandatory – file- CM's office-order 

ಮುಖ್ಯಮಂತ್ರಿಯವರಿಗೆ ಸಲ್ಲಿಸುವ ಕಡತಗಳನ್ನು ಗುರುತು ಮಾಡುವಾಗ ಮುಖ್ಯಮಂತ್ರಿಯವರ ಕಚೇರಿಯ ಯಾವುದೇ ಅಧಿಕಾರಿಗೆ ಗುರುತು ಮಾಡದೇ, ನೇರವಾಗಿ ಮುಖ್ಯಮಂತ್ರಿಯವರಿಗೆ ಗುರುತು ಮಾಡತಕ್ಕದ್ದು. ಕಡತಗಳನ್ನು ಸಲ್ಲಿಸುವಾಗ ಯಾವ ಅಂಶಗಳಿಗೆ, ವಿಷಯಕ್ಕೆ ಅನುಮೋದನೆ ಕೋರಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು ಎಂಬುದಾಗಿಯೂ ರಮಣರೆಡ್ಡಿ ಸೂಚಿಸಿದ್ದಾರೆ.

Key words: submissions – mandatory – file- CM’s office-order

 

website developers in mysore