ರಾಜ್ಯದಲ್ಲಿ ಶಾಲೆ ಬಂದ್ ಮಾಡಲ್ಲ: ಸಾಧ್ಯವಿರುವ ಕಡೆಗಳಲ್ಲಿ ಶಾಲೆಗಳು ನಡೆಯಲಿವೆ – ಶಿಕ್ಷಣ ಸಚಿವ ಬಿ.ಸಿ ನಾಗೇಶ್.

kannada t-shirts

ಬೆಂಗಳೂರು,ಜನವರಿ,12,2022(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಶಾಲೆಗಳನ್ನ ಬಂದ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ರಾಜ್ಯದಲ್ಲಿ ಶಾಲೆ ಬಂದ್ ಮಾಡಲ್ಲ. ಸುರಕ್ಷಿತ ಕ್ರಮದೊಂದಿಗೆ ಶಾಲೆ ನಡೆಸಲು ನಿರ್ಧಾರ ಮಾಡಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ಶಾಲೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಬಿಸಿ ನಾಗೇಶ್, ಸಾಧ್ಯವಿರುವ ಕಡೆಗಳಲ್ಲಿ ಶಾಲೆಗಳು ನಡೆಯಲಿದೆ. ಶಾಲೆ ರಜೆ ನಿರ್ಧಾರ ಆಯಾ ಡಿಸಿಗಳಿಗೆ ಅಧಿಕಾರ ನೀಡಲಾಗಿದೆ. ರಾಜ್ಯದಲ್ಲಿ ಕೊರೋನಾ ಜಾಸ್ತಿಯಾಗ್ತಿದೆ ನಿಜ ಆದರೆ ಮಕ್ಕಳ ಶಿಕ್ಷಣ ತುಂಬಾ ಮುಖ್ಯ. ಒಂದು ವರ್ಷದಿಂದ ಮಕ್ಕಳ ಮೇಲೆ ಶಿಕ್ಷಣದ ಮೇಲೆ ತುಂಬಾ ಪ್ರಭಾವ ಬೀರಿದೆ, ಹೀಗಾಗಿ ಶಾಲೆಗಳನ್ನ ನಡೆಸಲೇಬೇಕು. ಆದರೆ ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ನಾವು ಆಯಾ ಪ್ರದೇಶಗಳ ಅಂಕಿಅಂಶಗಳನ್ನ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಪಾಸಿಟಿವಿಟಿ ರೇಟ್ ನೋಡಿಕೊಂಡು, ಪರಿಸ್ಥಿತಿಗೆ ಅನುಗುಣವಾಗಿ ಶಾಲೆ ಬಂದ್ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದರು.

ನಿನ್ನೆ ಸಿಎಂ‌ ಸಭೆ ಮಾಡಿದ್ದಾರೆ, ಹೀಗಾಗಿ ಮುಂದಿನ ಕ್ರಮ ಕೈಗೊಳ್ಳಬೇಕು. ಇಂದು‌ ಶಾಲೆಗಳಿಗೆ ಕೊರೊನಾ ಯಾವ ರೀತಿ ಪ್ರಭಾವ ಬೀರಿದೆ ಎಂದು ಅಧಿಕಾರಿಗಳೊಂದಿಗೆ ಸಭೆ ಮಾಡ್ತಿದ್ದೀನಿ. ಎಲ್ಲೆಲ್ಲಿ ಸಾಧ್ಯ ಇದೆ ಅಲ್ಲಿ ಸ್ಕೂಲ್ ಆರಂಭ ಮಾಡ್ತೇವೆ. ಸಧ್ಯಕ್ಕಂತು, ರಾಜ್ಯದಲ್ಲಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾದರೆ ಮಾತ್ರ ಶಾಲೆಗಳು ಬಂದ್ ಆಗುತ್ತವೆ ಎಂದು ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದರು.

Key words: school- no -bandh – state- Minister- BC Nagesh.

website developers in mysore