ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಎವಿಜಿಸಿ ನೀತಿ-ಸಚಿವ  ಅಶ್ವತ್ ನಾರಾಯಣ್

kannada t-shirts

ಬೆಂಗಳೂರು,ಜನವರಿ,20,2022(www.justkannada.in):  ಡಿಜಿಟಲ್ ಮನೋರಂಜನಾ ಕ್ಷೇತ್ರವು ಅಗಾಧವಾಗಿ ಬೆಳೆಯುತ್ತಿದ್ದು, ಒಂದು ವರ್ಷದಲ್ಲಿ ನೂತನ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ನೀತಿ’ (ಎವಿಜಿಸಿ ಪಾಲಿಸಿ)ಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ಇಲ್ಲಿನ ಮಹದೇವಪುರದಲ್ಲಿ ದೇಶದ ಪ್ರಪ್ರಥಮ ಮತ್ತು ಏಷ್ಯಾದ ಅತಿದೊಡ್ಡ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಉತ್ಕೃಷ್ಟತಾ ಕೇಂದ್ರಕ್ಕೆ (ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್) ಗುರುವಾರದಂದು ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ `ಡಿಜಿಟಲ್ ಮಾಧ್ಯಮ ಮನೋರಂಜನಾ ಪ್ರದೇಶವನ್ನು ಕೂಡ ಇನ್ನು ಒಂದು ವರ್ಷದಲ್ಲಿ ಮಹದೇವಪುರದ ಸಮೀಪವೇ ಸ್ಥಾಪಿಸಲಾಗುವುದು. ಇದಕ್ಕೆ ಅಗತ್ಯ ಭೂಮಿಯನ್ನು ಗುರುತಿಸುವಂತೆ ಕೈಗಾರಿಕಾ ಇಲಾಖೆಗೆ ಹೇಳಲಾಗುವುದು ಎಂದರು.

ಇದರೊಂದಿಗೆ, ರಾಜ್ಯವು ಎವಿಜಿಸಿ ವಲಯದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿದ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯವು 2012ರಲ್ಲೇ ಎವಿಜಿಸಿ ನೀತಿಯನ್ನು ಜಾರಿಗೆ ತಂದ ಹಿರಿಮೆಯನ್ನು ಕೂಡ ಹೊಂದಿರುವುದನ್ನು ಇಲ್ಲಿ ನೆನೆಯಬಹುದು. ಈ ಉತ್ಕೃಷ್ಟತಾ ಕೇಂದ್ರವನ್ನು `ಅಭಯ್’ ಸಂಸ್ಥೆಯು (ಹಿಂದಿನ `ಅಸೋಸಿಯೇಶನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ’) ನಿರ್ವಹಿಸಲಿದೆ.

ಈ ಉತ್ಕೃಷ್ಟತಾ ಕೇಂದ್ರದೊಂದಿಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೆಲ್ಲವೂ ಒಡಂಬಡಿಕೆ ಮಾಡಿಕೊಳ್ಳುವಂತೆ ಮಾಡಲಾಗುವುದು. ಇದರ ಜೊತೆಗೆ ರಾಜ್ಯದ ವಿ.ವಿ.ಗಳಲ್ಲಿ ಸಣ್ಣ ಪ್ರಮಾಣದ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಆಸಕ್ತಿಕರಗೊಳಿಸಿ, ಹೆಚ್ಚುಹೆಚ್ಚು ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣ ಒದಗಿಸಬಹುದು ಎಂದು ಸಚಿವ ಅಶ್ವಥ್ ನಾರಾಯಣ್ ನುಡಿದರು.

ದಕ್ಷಿಣ ಏಷ್ಯಾದ ಅತ್ಯಾಧುನಿಕ ಡಿಜಿಟಲ್ ಮಾಧ್ಯಮ ತಾಣವಾಗಿರುವ ಈ ಎವಿಜಿಸಿ ಉತ್ಕೃಷ್ಟತಾ ಕೇಂದ್ರಕ್ಕೆ ರಾಜ್ಯ ವಿದ್ಯುನ್ಮಾನ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು `ಇನ್ನೋವೇಟ್ ಕರ್ನಾಟಕ’ ಉಪಕ್ರಮದಡಿ ಅಗತ್ಯ ಹಣಕಾಸು ನೆರವು ನೀಡಲಾಗಿದೆ ಎಂದರು.

`ದಕ್ಷಿಣ ಕೊರಿಯಾದಂತಹ ಸಣ್ಣ ದೇಶ ಇಂದು ಟ್ರಿಲಿಯನ್ ಮೌಲ್ಯದ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಮನೋರಂಜನೆ ಮತ್ತು ಅದಕ್ಕೆ ಪೂರಕವಾಗಿರುವ ಇತರ ಕ್ಷೇತ್ರಗಳನ್ನು ನಮ್ಮ ಚಿತ್ರೋದ್ಯಮ, ಫೋಟೋಗ್ರಫಿ ಜಾಹೀರಾತು, ಮಾಧ್ಯಮಲೋಕ, ಅನಿಮೇಷನ್ ಮತ್ತು ಗ್ರಾಫಿಕ್ಸ್ ವಲಯಗಳು ಸಹ ಗರಿಷ್ಠ ಮಟ್ಟದಲ್ಲಿ ಬೆಳೆಸಿಕೊಳ್ಳಬೇಕು. ಹೀಗಾದರೆ, 2030ರ ಹೊತ್ತಿಗೆ ಕರ್ನಾಟಕ ಕೂಡ ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯಬಹುದು’ ಎಂದು ಅವರು ಸೂಚಿಸಿದರು.

ಇಲ್ಲಿರುವ `ಫಿನಿಶಿಂಗ್ ಸ್ಕೂಲ್’ನಲ್ಲಿ ಭವಿಷ್ಯದ ತಂತ್ರಜ್ಞಾನಗಳಾದ ವರ್ಚುಯಲ್ ರಿಯಾಲಿಟಿ, ಡಿಜಿಟಲ್ ಕಂಪ್ರೆಷನ್, ಫೋಟೋಗ್ರಾಮಿಟ್ರಿ, ಶೈಕ್ಷಣಿಕ ಗೇಮಿಫಿಕೇಶನ್ ಮುಂತಾದವುಗಳಲ್ಲಿ ವಿಶಿಷ್ಟ ಕೋರ್ಸುಗಳನ್ನು ಕಲಿಸಲಾಗುವುದು ಎಂದು ಸಚಿವರು ನುಡಿದರು.

ಎವಿಜಿಸಿ ಉತ್ಕೃಷ್ಟತಾ ಕೇಂದ್ರವು ಜಾಗತಿಕ ಮಟ್ಟದ ಅತ್ಯಾಧುನಿಕ ಮೂಲಸೌಲಭ್ಯಗಳನ್ನು ಹೊಂದಿದೆ. ವೈಯಕ್ತಿಕ ಮಟ್ಟದಲ್ಲಿ ಇದು ಸಾಧ್ಯವಿಲ್ಲ. ಆದ್ದರಿಂದ, ಎವಿಜಿಸಿ ವೃತ್ತಿಪರರಿಗೆ ಒಂದೇ ಕಡೆ ಅಗತ್ಯ ಸೌಲಭ್ಯಗಳು ಸಿಗಬೇಕೆನ್ನುವ ದೃಷ್ಟಿಯಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯುನ್ಮಾನ, ಐಟಿ ಮತ್ತು ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, `ಈ ಕೇಂದ್ರದಿಂದಾಗಿ ರಾಜ್ಯದಲ್ಲಿರುವ ಎವಿಜಿಸಿ ವಲಯದ ಕಾರ್ಯ ಪರಿಸರಕ್ಕೆ ಮತ್ತಷ್ಟು ಲಾಭವಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿದರು. ವಿದ್ಯುನ್ಮಾನ. ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕಿ ಸಿ.ಎನ್. ಮೀನಾ ನಾಗರಾಜ್, ಬೆಂಗಳೂರು ಅನಿಮೇಷನ್ ಉದ್ಯಮ ಒಕ್ಕೂಟದ ಅಧ್ಯಕ್ಷ ಬೀರೇನ್ ಘೋಷ್, ಕಾರ್ಯದರ್ಶಿ ಬಿ.ಎಸ್. ಶ್ರೀನಿವಾಸ್ ಉಪಸ್ಥಿತರಿದ್ದರು.

Key words: AVGC-policy -another -year – state-Minister- Ashwath Narayan

ENGLISH SUMMARY…

Karnataka launches country’s Asias biggest AVGC CoE in Bengaluru

Bengaluru: The AVGC Center of Excellence (The Animation, Visual Effects, Gaming, and Comics CoE), termed as pioneering high technology digital media hub, funded by the Department of Electronics, IT, Bt as an initiative of ‘Innovate Karnataka’, was launched on Thursday.

Through this, the Karnataka Government which owns the credit of the first State in India to introduce an AVGC policy way back in 2012, has also become the country’s first to set up such a center of excellence which is also coveted to be the biggest in Asia.

Launching the Center, Dr. C.N.Ashwath Narayan. Minister for Electronics, IT, Bt and Higher Education said, “This CoE brings digital excellence to creative industries. India now commands around 10% of the global AVGC market and has the potential to reach 20-25% by 2027. The State of Karnataka has been driving the AVGC sector in the country. Our government is proud of this CoE and this Center will take us to greater prominence in the sector”.

The Centre also has a FINISHING SCHOOL which offers unique courses based on emerging technology such as virtual reality, digital compression, photogrammetry, gamification of education, real-time virtual production, and other emerging technologies, he told.

“The state will come out with the new AVGC policy within one year and required land will be provided within a year to set up dedicated ‘Digital Media Entertainment Area’. More Small CoEs will be set up across the state particularly on campuses of universities and collaborations will be made with more number of fine arts institutions,” Minister pointed out.

At present only 35% of students are getting quality education in our system and to fill this shortfall the National Education Policy (NEP-2020) aspires to make ‘storytelling’ the basis of education. Blended learning will also be supportive of this. By relying on AVGC, learning can be made more curious to achieve the target of providing quality education to all the students”, he opined.

Karnataka accounts for a 20% share of the Indian Entertainment & AVGC industry. A total of over 300 animation, VFX & gaming studios operate in Karnataka employing over 15,000+ professionals. With the launch of this CoE, the AVGC ecosystem will be further benefitted said Dr. E.V. Ramana Reddy, ACS, Department of Electronics, IT/BT, and S&T.

The objective of the COE is to syndicate and make available the best facilities and technologies to start-ups, AVGC studios, and professionals who find it difficult to fund or access such a high-technology stack individually, he opined

“This co-working space can help studios to focus more on the creation and developing the content. The GoK has provided industry a great lever by supporting this unique project with a grant and such a  facility does not exist in any country as a shared resource.” Said Biren Ghose, Past President, ABAI (Formerly called Association of Bangalore Animation Industry) & Country Head, Technicolor India.

Sri Aravind Limbavali, MLA presided over. Mrs Meena Nagaraj. C.N, Director, Dept. of Electronics, IT/BT and S&T, Beluru Sudarshan, Advisor, E-governance, Gok, B.S. Srinivas, Secretary, ABAI, Champa E, General Manager, KITS were among a few who were present.

Tech stack in the CoE:
NCAM enabling Virtual production through real-time camera tracking, Photogrammetry-3D Scans generating ultra-detailed 3d rendering, Full Body Performance Capture, country’s best 24 Optical Motion Capture systems with the necessary control room, support infrastructure with studio space; a WITNESS CAMERA, a four-head camera system with removable lenses; DUAL CAMERA HEAD MOTION CAPTURE used for real-time Head Motion Capture & a Green Screen Studio, all this backed up by a robust RENDER FARM specialized in rendering 3D projects.

website developers in mysore