ಮೈಸೂರು ಜಿಲ್ಲೆಯಲ್ಲಿ ಮಳೆಹಾನಿ: 500 ಹೆಕ್ಟೇರ್ ಬೆಳೆ ನಾಶ- ಸಚಿವ ಎಸ್.ಟಿ  ಸೋಮಶೇಖರ್.

ಮೈಸೂರು,ನವೆಂಬರ್,20,2021(www.justkannada.in):  ಮೈಸೂರು ಜಿಲ್ಲಾದ್ಯಾಂತ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದು ಅಪಾರ ಮಳೆಹಾನಿ ಮಳೆ  ಸಂಭವಿಸಿದೆ. ಈ ಮಧ್ಯೆ ಮಳೆಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಾಹಿತಿ ನೀಡದ್ದಾರೆ.

ಮಳೆಯಿಂದಾಗಿ ಜಿಲ್ಲೆಯಲ್ಲಿ  ಐನೂರು ಹೆಕ್ಟೇರ್ ಬೆಳೆ ನಾಶವಾಗಿದೆ. 1994 ಮನೆಗಳಿಗೆ ಹಾನಿಯಾಗಿದ್ದು, 1907 ಮನೆಗಳು ಭಾಗಶಃ ಹಾನಿ ಉಂಟಾಗಿದೆ. 87 ಮನೆಗಳು ಸಂಪೂರ್ಣ ಹಾನಿಯಾಗಿವೆ. ನಗರ ಪ್ರದೇಶದಲ್ಲಿ 500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 67 ಶಾಲೆಗಳು,33 ಪ್ರಾರ್ಥಮಿಕ ಅರೋಗ್ಯ ಕೇಂದ್ರ ಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಮೂರು ಜನ ಸಾವು ಸಂಭವಿಸಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಇನ್ನು ಪರಿಹಾರ ಕಾರ್ಯಕ್ಕೆ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ವಿಶೇಷ ಅನುದಾನಕ್ಕೆ ಮನವಿ ಮಾಡುತ್ತೇವೆ ಎಂದು ಉಸ್ತುವಾರಿ ಸಚಿವ ಸೋಮಶೇಖರ್ ‌ಹೇಳಿದರು.

Key words: Rain -Mysore District-500 hectares- crop- destruction – Minister -ST Somashekhar.

ENGLISH SUMMARY…

Rain havoc in Mysuru District: 500 hectare crop loss – Minister S.T. Somashekar
Mysuru, November 20, 2021 (www.justkannada.in): The people of Mysuru District are suffering a lot due to the incessant rain, which is lashing the city for the last one week, causing havoc. The Mysuru District In-charge Minister S.T. Somashekar has provided the details of the loss incurred due to the rains.
About 500 hectares of crop loss is reported in the district due to the rains. As many as 1994 houses are damaged, out of which 1907 houses are partially, and 87 completely damaged. While 500 km road in the city area is damaged, 67 schools and 33 primary health care center buildings are damaged. Three people have lost their lives, as informed by the District In-charge Minister S.T. Somashekar.
“Instructions have been given to the Deputy Commissioner to assess the exact loss in monetary terms and provide compensation. The Deputy Commissioner Mysuru has already provided complete details to the Chief Minister and we have requested to provide special grants,” the District In-charge Minister added.
Keywords: Mysuru District In-charge Minister/ S.T. Somashekar/ press meet/ details of rain loss