ಮೈಸೂರಿನಲ್ಲಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಉದ್ಯಮಕ್ಕೆ ಇಂಬು.

kannada t-shirts

 

ಮೈಸೂರು, ಜನವರಿ ೩, ೨೦೨೨ (www.justkannada.in): ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಹಾಗೂ ತಯಾರಿಕಾ ಉದ್ಯಮಕ್ಕೆ ಅತ್ಯುತ್ತಮ ಬೇಡಿಕೆ ದೊರೆಯುವ ನಿರೀಕ್ಷೆಯಿದ್ದು, ಈ ಕ್ಷೇತ್ರದಲ್ಲಿ ಕೌಶಲ್ಯವುಳ್ಳ ಮಾನವಸಂಪನ್ಮೂಲಕ್ಕೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ.

ಕೇಂದ್ರ ಸರ್ಕಾರ ಮೈಸೂರು ಜಿಲ್ಲೆಯಲ್ಲಿ ವೈದ್ಯಕೀಯ ಉಪಕರಣಗಳ ಪಾರ್ಕ್ ಹಾಗೂ ಸರ್ಕ್ಯೂಟ್ ಬೋರ್ಡ್ಗಳು ಮತ್ತು ಚಿಪ್ಗಳ ತಯಾರಿಕಾ ಕ್ಲಸ್ಟರ್ ಅನ್ನು ಸ್ಥಾಪಿಸಲು ರೂಪುರೇಷೆಗಳನ್ನು ರಚಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ವಿಎಲ್ಎಸ್ಐ ವಿನ್ಯಾಸದಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಪ್ರೊಸೆಲೆರಾ, ಎಸ್ಜೆಸಿಇ ಸ್ಟೆಪ್ ಇನ್ಕ್ಯೂಬೇಷನ್ ಕೇಂದ್ರದಲ್ಲಿ ತನ್ನ ವಿನ್ಯಾಸ ಕೇಂದ್ರವೊಂದನ್ನು ಆರಂಭಿಸಲಿದ್ದು, ಇದರಿಂದ ಜಿಲ್ಲೆಯಲ್ಲಿ ಚಿಪ್ ವಿನ್ಯಾಸ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದ ಶಕ್ತಿ ದೊರೆಯಲಿದೆ. ಈ ಕೇಂದ್ರವು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಎಲ್ಎಸ್ಐ ವಿನ್ಯಾಸದಲ್ಲಿ ಅನುಭವವನ್ನು ಒದಗಿಸುವುದಲ್ಲದೆ ಆಸಕ್ತರನ್ನು ಉದ್ಯಮಸಜ್ಜುಗೊಳಿಸಿ ಉದ್ಯೋಗಾವಕಾಶಗಳು, ಯೋಜನೆಗಳು ಹಾಗೂ ವೃತ್ತಿಪರ ತರಬೇತಿಗಳನ್ನು ಒದಗಿಸುವ ಮೂಲಕ ಮೈಸೂರಿನ ಮೊಟ್ಟ ಮೊದಲ ಚಿಪ್ ವಿನ್ಯಾಸಗೊಳಿಸುವ ಕಂಪನಿ ಎನಿಸಿಕೊಳ್ಳಲಿದೆ.

ಹೂಡಿಕೆಯಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ಹೊರಹೊಮ್ಮುತ್ತಿರುವ ಪಾರಂಪರಿಕ ನಗರಿಗೆ, ಈ ಉದ್ಯಮವು ಮೈಸೂರು ನಗರದ ಮುಕುಟದಲ್ಲಿ ಒಂದು ಗರಿಯಾಗಲಿದೆ.

ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಹಾಗೂ ತಯಾರಿಕಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಈ ಕೇಂದ್ರವು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಂಶೋಧಕರಿಗೆ ಈ ಉದ್ಯಮಕ್ಷೇತ್ರದ ತಜ್ಞರಿಂದ ಅತ್ಯುತ್ತಮ ಕಲಿಕಾ ಅವಕಾಶವನ್ನೂ ಸೃಷ್ಟಿಸಲಿದೆ.

 

ಈ ನವೋದ್ಯಮವನ್ನು ಎಸ್ಜೆಸಿಇ-ಸ್ಟೆಪ್ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮೂಲಕ ಮೈಸೂರನ್ನು ಪ್ರವೇಶಿಸಿದೆ.
ಮೈಸೂರಿನ ಎಸ್ಜೆಸಿಇ-ಸ್ಟೆಪ್ ನ ಸಿಇಒ ಶಿವಶಂಕರ್ ಬಿ. ಅವರು ಈ ಸಂಬಂಧ ಮಾತನಾಡಿ, ಕೇಂದ್ರ ಸಚಿವಾಲಯವು ಸೆಮಿಕಂಡಕ್ಟರ್ ಉದ್ಯಮ ಕ್ಷೇತ್ರಕ್ಕೆ ರೂ.೭೬,೦೦೦ ಕೋಟಿ ಮೊತ್ತದ ಪಿಎಲ್ಐ ಯೋಜನೆಯನ್ನು ಇತ್ತೀಚೆಗೆ ಅನುಮೋದಿಸಿರುವುದಾಗಿ ತಿಳಿಸಿದ್ದಾರೆ. ಈ ಕೇಂದ್ರವು ತಯಾರಿಕೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿರುವಂತಹ ಚಿಪ್ ವಿನ್ಯಾಸ ಪರಿಹಾರಗಳನ್ನು ಒದಗಿಸಲಿದೆ. ಇಂಜಿನಿಯರಿAಗ್ ಪದವೀಧರರು ಇಲ್ಲಿ ಲಭ್ಯವಾಗುವಂತಹ ಉದ್ಯಮ ಪರಿಣತರೊಂದಿಗೆ ಕೆಲಸ ನಿರ್ವಹಿಸಿ, ಆ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಯ ಕುರಿತು ಅನುಭವವನ್ನು ಗಳಿಸಲಿದ್ದು, ದೇಶದಾದ್ಯಂತ ಹರಡಿರುವ ಈ ಕ್ಷೇತ್ರದ ಉದ್ಯಮಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಅಲಂಕರಿಸಲಿದ್ದಾರೆ ಎಂದು ವಿವರಿಸಿದರು.

ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಬಳಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ಟಿಪಿಐ) ಸ್ಥಾಪನೆಯಾಗುತ್ತಿದ್ದು, ಬಹುಪಾಲು ಕಾಮಗಾರಿಗಳು ಪೂರ್ಣಗೊಂಡಿದೆ. ಈ ಮೂಲಕ ಮೈಸೂರು ನಗರ ಐಟಿ ಹಾಗೂ ಐಟಿಇಎಸ್ ಉದ್ಯಮದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ.

key words : Semiconductor chip- design – Mysuru -gets a boost

Semiconductor chip design in Mysuru gets a boost

The semiconductor chip designing and manufacturing sector is expected to witness a boom in the coming days and generate huge employment opportunities for skilled manpower. With the Central government working on setting up a medical devices park and Integrated Circuit Board and Chips Manufacturing cluster in the district, a lot of job opportunities are likely to be created locally too.

 

website developers in mysore