ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ: ಬೆಂಗಳೂರು ಮೆಟ್ರೋಗೆ ಸಚಿವ ಸುನೀಲ್ ಕುಮಾರ್ ನೋಟಿಸ್ .

ಬೆಂಗಳೂರು,ಸೆಪ್ಟಂಬರ್,1,2021(www.justkannada.in):  ಇತ್ತೀಚೆಗೆ ನಡೆದ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಬಳಿಕೆಯನ್ನು ಕಡೆಗಣಿಸಿರುವ ಹಿನ್ನೆಲೆ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಮತ್ತು ಈ ಬಗ್ಗೆ  ವಿವರಣೆ ನೀಡಬೇಕೆಂದು ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ನೋಟಿಸ್ ನೀಡಿದ್ದಾರೆ.

ದಿನಾಂಕ 29.08.2021 ರಂದು ನಾಯಂಡಹಳ್ಳಿ – ಕಂಗೇರಿ ನಡುವಿನ ಮೆಟ್ರೋ ರೈಲು ಸಂಚಾರದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯ ಕಡಗಣನೆಯನ್ನು ಗಮನಿಸಲಾಗಿರುತ್ತದೆ.

ಸಮಾರಂಭದ ಮುಖ್ಯ ವೇದಿಕೆಯ ಫಲಕಗಳಲ್ಲಿ ಹಾಗೂ ಹಿಂಬದಿಯ ಪರದೆಯಲ್ಲಿ ಕನ್ನಡ ಭಾಷೆಯನ್ನು ಬಳಸಿರಲಿಲ್ಲ. ಎಂಬುದು ನಿಜಕ್ಕೂ ಗಂಭೀರವಾದ ಸಂಗತಿ. ರಾಜ್ಯದ ರಾಜಧಾನಿಯಲ್ಲಿ ನಡದ ಈ ಕಾರ್ಯಕ್ರಮದಲ್ಲಿ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಕಡೆಗಣಿಸಿದ್ದು, ಗಂಭೀರವಾದ ಲೋಪವಾಗಿದೆ.

ಈಗಾಗಲೇ ಆಡಳಿತ ಭಾಷೆಯಾಗಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅದಶ ಹೊರಡಿಸಿದ್ದರೂ ಲೋಪವಾಗಿರುವುದು ನಿಜಕ್ಕೂ ದುರದೃಷ್ಟ್ಯಕರ, ಇಂತಹ ಕರ್ತವ್ಯ ಬಗ್ಗೆ. ಗಮನ ಹರಿಸಬೇಕಾದದ್ದು ನಿಮ್ಮ ಹಾಗೂ ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳ ಕರ್ತವ್ಯವಾಗಿದೆ.

ಆದರೂ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವುದನ್ನು ಸಹಿಸಲಾಗದು. ಭಾಷೆ ಒಂದು ಭಾವನಾತ್ಮಕ ವಿಚಾರ, ಅದರಲ್ಲಿಯೂ ಆಡಳಿತ ಭಾಷೆಯ ಬಗ್ಗೆ ನಿರ್ಲಕ್ಷ ತೋರಿದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕಾದ ಸರ್ಕಾರದ ಇಲಾಖೆಗಳು ಈ ರೀತಿಯ ಲೋಪವೆಸಗವುದು. ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಲ್ಪಡುತ್ತದೆ.

ಆದ್ದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ತಾವು ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಇದಕ್ಕೆ ಸೂಕ್ತ ವಿವರಣೆ ನೀಡಬೇಕೆಂದು ಸಚಿವ ಸುನೀಲ್ ಕುಮಾರ್ ನೋಟಿಸ್ ನಲ್ಲಿ ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.

Key words: Ignoring- Kannada Language – Metro- Inauguration –Program-minister- Sunil Kumar