ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ : ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು,ಡಿಸೆಂಬರ್,08.2020(www.justkannada.in) : ನಮ್ಮ ಸರ್ಕಾರದಿಂದ ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಹಿಂದೆ ಎಫ್ ಎಸ್ ಎಲ್ ನಿಂದ ಡ್ರಗ್ ಕೇಸ್ ಗಳ ವರದಿ ಬರಲು ಸಮಯ ಹಿಡಿಯುತ್ತಿತ್ತು. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ಆಧುನೀಕರಣ ಮಾಡಿದ್ದು, ಎಫ್ ಎಸ್ ಎಲ್ ಕಾಲಮಿತಿಯಲ್ಲಿ ಬರುವಂತೆ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.logo-justkannada-mysoreರಿಕ್ರಿಯೇಷನ್ ಕ್ಲಬ್ ಗಳ ಹೆಸರಿನಲ್ಲಿ ಕಲಬುರುಗಿ ಮತ್ತು ಬೀದರ್ ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಧಿವಿಜ್ಞಾನ ಪ್ರಯೋಗಾಲಯ ವಿಭಾಗ(ಎಫ್ ಎಸ್ ಎಲ್) ವರದಿಗಳು ಕೂಡ ವಿಳಂಬದ ಹಾದಿಯನ್ನು ಹಿಡಿದಿದೆ ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಆರೋಪ ಮಾಡಿದ್ದರು.

ಇದಕ್ಕೆ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು, ಆಂಧ್ರಪ್ರದೇಶ, ತೆಲಂಗಾಣ ಗಡಿಯಲ್ಲಿ ರಿಕ್ರಿಯೇಷನ್ ಕ್ಲಬ್ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಾರಾಷ್ಟ್ರದಿಂದ ಬರುವ ಡ್ರಗ್ಸ್ ಗೆ ನಿರ್ಬಂಧ ಹಾಕಿದ್ದೇವೆ ಎಂದಿದ್ದಾರೆ.

ಈಗಾಗಲೇ 20ಕ್ಕೂ ಹೆಚ್ಚು ಡಾರ್ಕ್ ವೆಬ್ ಪ್ರಕರಣಗಳನ್ನು ಭೇದಿಸಿದ್ದು, ಡ್ರಗ್ಸ್ ಪ್ರಕರಣಗಳಲ್ಲಿ ಯಾರ ಒತ್ತಡಕ್ಕೂ ನಾವು ಮಣಿಯುವುದಿಲ್ಲ. ಎಲ್ಲರನ್ನೂ ಒದ್ದು ಒಳಗೆ ಹಾಕುತ್ತೇವೆ ಎಂದು ಸಚಿವ ಬೊಮ್ಮಾಯಿ ಹೇಳಿದರು.

ಕಾಯ್ದೆಯಲ್ಲಿ ತನಿಖಾಧಿಕಾರಿಗೆ ಹಲವು ನಿರ್ಬಂಧಗಳಿವೆ

ಎನ್ ಡಿ ಪಿ ಎಸ್ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಸದ್ಯ ಈ ಕಾಯ್ದೆಯಲ್ಲಿ ತನಿಖಾಧಿಕಾರಿಗೆ ಹಲವು ನಿರ್ಬಂಧಗಳಿವೆ. ಆದರೂ, ನಮ್ಮ ವ್ಯಾಪ್ತಿಯಲ್ಲಿ ತನಿಖಾಧಿಕಾರಿಗೆ ತನಿಖೆ ಮಾಡಲು ಅನುಕೂಲವಾಗುವ ನಿಯಮಗಳನ್ನು ಅಳವಡಿಸಿದ್ದೇವೆ ಎಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Action-being-taken-control-drugs-Minister- Basavaraja Bommai

key words : Action-being-taken-control-drugs-Minister- Basavaraja Bommai