‘ಮಾತನಾಡುವವರು ತೀಟೆಗೆ ಮಾತನಾಡಬೇಕು’- ಸಿಎಂ ಬದಲಾವಣೆ ವಿಚಾರದ ಬಗ್ಗೆ ಹೆಚ್.ವಿಶ್ವನಾಥ್ ನುಡಿ.

ಮೈಸೂರು,ಡಿಸೆಂಬರ್,3,2021(www.justkannada.in): ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರ ಸದ್ಧು ಮಾಡುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಮುಂದಿನ ಚುನಾವಣೆಯಲ್ಲೂ ಬಸವರಾಜ ಬೊಮ್ಮಾಯಿ ನೇತೃತ್ವ ವಹಿಸುತ್ತಾರೆ ಎಂದು ನುಡಿದಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಯಡಿಯೂರಪ್ಪ ಬೆಂಬಲ‌ ಇಲ್ಲ ಅನ್ನೋದು ಸುಳ್ಳು. ಅವರೇ ಬೊಮ್ಮಾಯಿಯನ್ನು ಸಿಎಂ ಮಾಡಿರುವುದು. ಮಾತನಾಡುವವರು ತೀಟೆಗೆ ಮಾತನಾಡಬೇಕು ಎಂದು ಹೇಳಿದರು.

ಸಚಿವ ಎಸ್ ಟಿ ಸೋಮಶೇಖರ್ ವಿರುದ್ದ ವಾಗ್ದಾಳಿ

ಇದೇ ವೇಳೆ ಸಚಿವ ಎಸ್ ಟಿ ಸೋಮಶೇಖರ್ ವಿರುದ್ದ ವಾಗ್ದಾಳಿ ನಡೆಸಿದ ಎಚ್ ವಿಶ್ವನಾಥ್, ಚುನಾವಣೆ ವಿಚಾರದಲ್ಲಿ ವೈಯಕ್ತಿಕ ಟೀಕೆ ಸರಿಯಲ್ಲ. ಒಬ್ಬ ಮಂತ್ರಿಯಾದವರಿಗೆ ಇದು ಶೋಭೆ ತರುವುದಿಲ್ಲ. ಇದರಿಂದ ಬಾಬು ಅವರ ಮನೆಯವರಿಗೆ ಎಷ್ಟು ನೋವಾಗಿದೆ. ಮೈಸೂರು ಜೆಡಿಎಸ್ ಅಭ್ಯರ್ಥಿಗೂ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಗೋಪಾಲಕೃಷ್ಣ ವಿಶ್ವನಾಥ್ ಇಬ್ಬರು ರಿಯಲ್ ಎಸ್ಟೇಟ್ ಗಿರಾಕಿಗಳು. ಅವರಿಬ್ಬರದು ಏನೇನು ಇದೆಯೋ ಯಾರಿಗೆ ಗೊತ್ತು ? ಅದನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದರು.

ಕೋವಿಡ್ ರೂಪಾಂತರ ಎಮಿಕ್ರಾನ್ ಪತ್ತೆ ವಿಚಾರ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್, ತಜ್ಞರು ಇದರ ತೀವ್ರತೆ ಬಗ್ಗೆ ಹೇಳಿದ್ದಾರೆ. ಆದರೆ ಶಾಲಾ ಕಾಲೇಜುಗಳಲ್ಲಿ ದನ ತುಂಬಿದಂತೆ ತುಂಬಲಾಗುತ್ತಿದೆ. ಶಿಕ್ಷಣ ಸಚಿವರು ಏನು‌ ಮಾಡುತ್ತಿದ್ದಾರೆ ? ಹೆಚ್ಚು ಕಡಿಮೆಯಾದರೆ ದೊಡ್ಡ ಅನಾಹುತವಾಗುತ್ತದೆ. ಇದು ಮಕ್ಕಳ ವಿಚಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಹೊಸ ವೈರಸ್ ರಾಪಿಡ್ ಆಗಿ ಹರಡುತ್ತಿದೆ. ಇದರಿಂದ ಮಕ್ಕಳಿಗೆ ಅನಾಹುತ ಆಗದಂತೆ ಎಚ್ಚರವಹಿಸಬೇಕು. 1 ಟು 7 ಮಕ್ಕಳಿಗೆ ಮನೆಯಲ್ಲೇ ಪಾಠ ಆಗಬೇಕು. ಮೊದಲ ರ್ಯಾಂಕ್ ಬರುವವರು ಶಾಲೆಯಿಂದ ಕಲಿತು ಬರುವುದಿಲ್ಲ. ಅವಸರದಲ್ಲಿ ಶಾಲಾ ಕಾಲೇಜುಗಳ ಬಗ್ಗೆ ನಿರ್ಧಾರ ಬೇಡ. ಸರ್ಕಾರ ಈ‌ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಎಂದರು.

Key words:  CM-Change-issue-MLC- H. Vishwanath-reaction