ಮಹಿಳೆ ಮೃತಪಟ್ಟರೂ ಗರ್ಭದಲ್ಲಿದ್ಧ ಶಿಶುವಿನ ಜೀವ ಉಳಿಸಿದ ವೈದ್ಯರಿಗೆ ಸಚಿವ ಸಿ .ಸಿ .ಪಾಟೀಲ್ ಅಭಿನಂದನೆ.

ಗದಗ,ನವೆಂಬರ್,12,2021(www.justkannada.in):  ಮಹಿಳೆ ಮೃತಪಟ್ಟರೂ ಸಹ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭದಲ್ಲಿದ್ಧ ಶಿಶುವಿನ ಜೀವವನ್ನ ಉಳಿಸಿರುವ ಘಟನೆ ಗದಗ ಜಿಲ್ಲೆಯ ದಂಡಪ್ಪ  ಮಾನೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆ ಸಲ್ಲಿಸಿರುವ ಸಚಿವ ಸಿಸಿ ಪಾಟೀಲ್,  ಸಿಮಹಿಳೆಯೊಬ್ಬರು  ಮೃತಪಟ್ಟರೂ ಸಹ ಅತ್ಯಂತ ಕಾಳಜಿಯಿಂದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಅವರ ಉದರದಲ್ಲಿ ಶಿಶುವನ್ನು ಬದುಕಿಸಿ ಮಾನವೀಯತೆ ಮೆರೆದ ಗದಗ ಜಿಲ್ಲೆಯ ದಂಡಪ್ಪ  ಮಾನೆ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಅನ್ನಪೂರ್ಣ ಎಂಬವರು ಇತ್ತೀಚೆಗೆ ಹೆರಿಗೆ ನಿಮಿತ್ತ ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಆರೋಗ್ಯ ಕ್ಷೀಣಿಸಿ ಮೃತಪಟ್ಟರೂ ಸಹ  ಅವರ ಗರ್ಭದಲ್ಲಿರುವ ಮಗು ಜೀವಂತವಾಗಿರುವುದನ್ನು ವೈದ್ಯರು ಪತ್ತೆಹಚ್ಚಿ ತಕ್ಷಣ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಪ್ರಾಣ ಉಳಿಸಿರುವುದು ಪ್ರಶಂಸನೀಯವಾಗಿದೆ.

ಇದೊಂದು ಅಪರೂಪದ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿದ್ದು, ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ವೈದ್ಯರ ತಂಡದಲ್ಲಿದ್ದ ಬಸನಗೌಡ ಕರಿಗೌಡರ್ , ಡಾ. ಶೃತಿ, ಡಾ. ವಿನೋದ್, ಡಾ. ಜಯರಾಜ್, ಡಾ. ಅಜಯ್, ಡಾ. ಕೀರ್ತನ್ ಅವರನ್ನು ಈ ಬಗ್ಗೆ ಅಭಿನಂದಿಸುತ್ತೇನೆ ಎಂದಿದ್ದಾರೆ.

ಇಂತಹ ವಿಶಿಷ್ಟ ಮಾನವೀಯ ಸೇವೆಯಿಂದ ನಮ್ಮ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚುವುದಲ್ಲದೆ , ಸಾರ್ವಜನಿಕರಲ್ಲಿ ಸರ್ಕಾರಿ ವೈದ್ಯರುಗಳ ಕುರಿತು ವಿಶ್ವಾಸಾರ್ಹತೆಯೂ ವೃದ್ಧಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಇದೊಂದು ನಿಜಕ್ಕೂ ಮಾದರಿ ಸೇವೆಯಾಗಿದೆ ಎಂದು ಸಚಿವ ಸಿ.ಸಿ ಪಾಟೀಲ್ ನುಡಿದರು.

Key words: Minister -C. C Patil -congratulates -doctor –saving- life – infant

ENGLISH SUMMARY…

Woman dies: Doctor saves unborn infant – Minister C.C. Patil thanks doctor
Gadag, November 12, 2021 (www.justkannada.in): A doctor who saved the life of an unborn infant after the death of the mother is receiving praises from several people.
The incident took place at the Dandappa Maane Government Hospital in Gadag District. Minister C.C. Patil has thanked and praised the doctor who saved the life of the infant from the womb of the dead mother.
A woman by the name Annapurna, a resident of the Mushigeri Village in Rona Taluk, Gadag District was admitted to the Government hospital with labour pains. Unfortunately, the health of the pregnant woman decline and died. Though the mother died the doctors at the government hospital left no stone unturned to save the infant from the womb of the dead woman. The doctor came to know that the infant was alive. He successfully conducted an operation and removed the infant from the womb leaving the staff and others at the hospital mesmerized.
Of course, it is a rare kind of operation. The team of doctors who conducted successful operation included Basanagowda Karigowdar, Dr. Shruthi, Dr. Vinod, Dr. Jairaj, Dr. Ajay, and Dr. Keerthan.
Minister C.C. Patil has thanked the team of doctors and has praised them for their feat. “This kind of honest effort will increase the confidence among the people about government hospitals,” he observed.
Keywords: Gadag/ Government Hospital/ life of infant saved/ Doctors/ mother died