ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಸಂಘ ತೆರೆಯುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ.

kannada t-shirts

ಬೆಂಗಳೂರು, ನವೆಂಬರ್ 18,2021(www.justkannada.in): ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಸಂಘ ತೆರೆಯುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಉಬುಂಟು ಒಕ್ಕೂಟ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ವತಿಯಿಂದ ಲಲಿತ್ ಅಶೋಕ ಹೊಟೇಲ್ ನಲ್ಲಿ  ಆಯೋಜಿಸಿದ್ದ ಒಟ್ಟಾಗಿ ಬೆಳೆಯೋಣ (TOGETHER WE GROW) ಮತ್ತು ಅಂತರಾಷ್ಟ್ರೀಯ ಮಹಿಳಾ ಉದ್ದಿಮೆಗಳ ದಿನಾಚರಣೆಯ ಉದ್ಘಾಟನಾ ಕಾರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು.

ಈ ನಡುವೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಳ್ಳಿಗಳಲ್ಲಿ ಸ್ವಸಹಾಯ ಸಂಘ ಮಾದರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಸಂಘ ತೆರೆಯಲಾಗುತ್ತದೆ. ಆರ್ಥಿಕವಾಗಿ ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ನೆರವು ನೀಡಲು ಸಂಘ ತೆರೆಯಲಾಗುತ್ತದೆ. ದೃಷ್ಟಿಚೇತನ, ವಿಕಲಚೇತನ ಮಹಿಳೆಯರಿಗೆ ವಿಶೇಷ ಯೋಜನೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

Key words: CM -Basavaraja Bommai -announces – opening – separate-association – women entrepreneurs.

ENGLISH SUMMARY…

CM Basavaraj Bommai announces opening of separate associations for women entrepreneurs
Bengaluru, November 18, 2021 (www.justkannada.in): Chief Minister Basavaraj Bommai today announced that a separate association would be opened for the benefit of women entrepreneurs.
He inaugurated the ‘Together We Grow’ and the International Women Entrepreneurs Day celebrations held at the Lalith Ashok Hotel, jointly organized by the Ubuntu Federation and the Department of Industries and Commerce.
In his address, he informed that a separate association online with the self-help groups in rural areas would be opened for women entrepreneurs. The State government has decided to open separate associations to provide necessary financial help to women entrepreneurs. “We will also introduce special programs for the benefit of visually impaired and physically challenged women,” he added.
Keywords: Chief Minister/ Basavaraj Bommai/ separate associations/ women entrepreneurs

website developers in mysore