ಪ್ರತಿಭಟನೆಗೆ ಮಣಿದ ಸ್ಪೀಕರ್ : ಸುರ್ವಣಸೌಧಕ್ಕೆ ಹಿಂದಿನಂತೆಯೇ ಮಾಧ್ಯಮಗಳ ಪ್ರವೇಶಕ್ಕೆ ಅವಕಾಶ.

ಬೆಳಗಾವಿ,ಡಿಸೆಂಬರ್,22,2021(www.justkannada.in):  ಮತಾಂತರ ನಿಷೇಧ ಕಾಯ್ದೆ ಮೇಲೆ ವಿಧಾನಸಭೆಯಲ್ಲಿ ಚರ್ಚೆ ಹಿನ್ನೆಲೆ ಮಾಧ್ಯಮಗಳ ಪ್ರವೇಶಕ್ಕೆ  ನಿರ್ಬಂಧ ವಿಧಿಸಲಾಗಿತ್ತು. ಸ್ಪೀಕರ್ ಅವರ ಈ ನಡೆಯನ್ನ ಪ್ರಶ್ನಿಸಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜತೆ ಮಾಧ್ಯಮ ಪ್ರತಿನಿಧಿಗಳು ಚರ್ಚಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ,  ಯಾವುದೋ ಒಂದು ಹಂತದಲ್ಲಿ ಗೊಂದಲ ಸೃಷ್ಟಿಯಾಗಿದೆ. ಪೊಲೀಸರು ಮಾರ್ಷೆಲ್ ಗಳಿಗೆ ಈಗಲೇ ಸೂಚಿಸುವೆ. ನಿರ್ಬಂಧ ಹೇರಿದ್ದು ನನ್ನ ಗಮನಕ್ಕೆ ಬಂದಿಲ್ಲ. ನಾನು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿಯೇ ಇಲ್ಲ. ಮಾಧ್ಯಮಗಳಿಗೆ ಹಿಂದಿನಂತೆಯೇ  ಪ್ರವೇಶಕ್ಕೆ ಅವಕಾಶ ನೀಡುತ್ತೇವೆ ಎಂದರು.

ಈ ನಡುವೆ ಸ್ಪೀಕರ್ ಕಾಗೇರಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಚರ್ಚೆ ನಡೆಸಿದ್ದು, ಮಿಸ್ ಕಮ್ಯುನಿಕೇಷನ್ ನಿಂದ ಹೀಗೆ ಆಗಿದೆ. ಎಲ್ಲಾ ಗೇಟ್ ಗಳಲ್ಲೂ ಮಾಧ್ಯಮಗಳಿಗೆ ಅವಕಾಶವಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
key words: Speaker – protest- media -access – Survanasuddha.