ನಾಳೆಯಿಂದ ಮೂರು ದಿನಗಳ ಕಾಲ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯಾ 43ನೇ ಅಂತಾರಾಷ್ಟ್ರೀಯ ಸಮ್ಮೇಳನ

ಮೈಸೂರು,ಡಿಸೆಂಬರ್,20,2021(www.justkannada.in):ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ಪುಣೆಯ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯಾ (ಎಲ್ಎಸ್ಐ)ದ ಸಹಯೋಗದಲ್ಲಿ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆನ್ ಲೈನ್ ಮೂಲಕ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯಾ 43ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು 21-23 ಡಿಸೆಂಬರ್, 2021ರ ವರೆಗೆ 3 ದಿನಗಳ ಕಾಲ ಆಯೋಜಿಸಿದೆ.

ಈ ಸಮ್ಮೇಳನದಲ್ಲಿ ಹಲವಾರು ರಾಷ್ಟ್ರಗಳು ಮತ್ತು ಭಾರತದ ಎಲ್ಲಾ ಭಾಷಾವಿಜ್ಞಾನ ಅಧ್ಯಯನ ಸಂಸ್ಥೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್‌ಎಸ್ ಐ ಅಧ್ಯಕ್ಷ ಪ್ರೊ.ಜಿ. ಉಮಾಮಹೇಶ್ವರ ರಾವ್ ಉದ್ಘಾಟನಾ ಭಾಷಣ ಮಾಡಲಿದ್ದು, ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿಯ ಪ್ರೊ.ಮಾರ್ಟಿನ್ ಹಾಸ್ಪೆಲ್ ಮಟ್ ಆಶಯ ನುಡಿಗಳನ್ನಾಡುವರು, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ.ಶೈಲೇಂದ್ರ ಮೋಹನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸೂಚನೆ : ಈ ಸಮ್ಮೇಳನವು ಆನ್ ಲೈನ್ ಮುಖಾಂತರ ಜರುಗಲಿದ್ದು ಎಲ್ಲಾ ಪ್ರಬಂಧ ಮಂಡನೆಗಳನ್ನು  ವರ್ಚ್ಯುವಲ್ ಆಗಿ ಪ್ರಸರಿಸಲಾಗುತ್ತದೆ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಮಾಹಿತಿಗಳಿಗಾಗಿ ಈ https://meet.google.com/qus-qmqk-bwh ಕೊಂಡಿಯನ್ನು ಕ್ಲಿಕ್ಕಿಸುವುದು.

Online link: https://meet.google.com/qus-qmqk-bwh

Date: 21st December 2021 Time: 10 am,

Venue: online

Key words: Linguistic Society of India- 43rd International Conference – three days – tomorrow