ನಂದಿನಿ ತುಪ್ಪ ಕಲಬೆರೆಕೆ ಹಗರಣವನ್ನ ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಡಿ.30 ರಂದು ಪ್ರತಿಭಟನೆ

ಮೈಸೂರು,ಡಿಸೆಂಬರ್,28,2021(www.justkannada.in): ನಂದಿನಿ ತುಪ್ಪ ಕಲಬೆರೆಕೆ ಹಗರಣವನ್ನ ಸಿಬಿಐಗೆ ವಹಿಸುವಂತೆ ಒತ್ತಾಯ‌ ಹಾಗೂ  ಡೈರಿಗಳಲ್ಲಿ ಕಚ್ಚಾ ಹಾಲು ಮಾರಾಟ ನಿರ್ಬಂಧ ವಿರೋಧಿಸಿ ಡಿಸೆಂಬರ್ 30 ರಂದು  ಪ್ರತಿಭಟನೆ ನಡೆಸಲು  ರಾಜ್ಯ ರೈತ ಸಂಘ ಕರೆ ನೀಡಿದೆ.

ಡಿಸೆಂಬರ್ 30 ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ  ಮುಂದೆ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಯಲಿದೆ.  ನಂದಿನಿ ತುಪ್ಪ ಕಲಬೆರಕೆ ಆಗಿರೋದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹಗರಣದಲ್ಲಿ ಹಲವು ಮೈಮುಲ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಹಾಗಾಗಿ ಕೂಡಲೇ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು.

ಅಲ್ಲದೇ ಜನವರಿ 1ರಿಂದ ಡೈರಿಗಳಲ್ಲಿ ಸ್ಥಳೀಯ ಕಚ್ಚಾ ಹಾಲು ಮಾರಾಟಕ್ಕೆ ನಿಷೇಧ ಮಾಡಿರೋದು ಖಂಡನೀಯ. ಇದರಿಂದ ಹಾಲು ಉತ್ಪಾದಕರಿಗೆ ಹೊಡೆತ ಬೀಳಲಿದೆ. ಹಾಗಾಗಿ ಈ ಎಲ್ಲಾ ವಿಚಾರಗಳ ಕುರಿತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾಹಿತಿ ನೀಡಿದರು.

Key words:  March 30 -Nandini Ghee- Adulteration-case –CBI-protest-mysore