ನಂಜನಗೂಡಿನಲ್ಲಿ ಸಿಎಂ ಪುತ್ರ ವಿಜಯೇಂದ್ರ ಪೂಜೆ: ಕಠಿಣ ಕ್ರಮಕ್ಕೆ ಹೈಕೋರ್ಟ್ ಸೂಚನೆ.

ಬೆಂಗಳೂರು,ಜೂನ್,18,2021(www.justkannada.in): ಮಾರ್ಗಸೂಚಿ ಉಲ್ಲಂಘಿಸಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ನಂಜನಗೂಡಿನಲ್ಲಿ ಪೂಜೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.jk

ನಿಯಮ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಎಂ ಪುತ್ರ ವಿಜಯೇಂದ್ರ ವಿರುದ್ಧದ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. ವಿಜಯೇಂದ್ರ ದೇವಾಲಯ ಪ್ರವೇಶಿಸಿದ್ದಾಗಿ ಹಾಗೂ ವಿಶೇಷ ದರ್ಶನಕ್ಕೆ  ಅವಕಾಶ ನೀಡಿರಲಿಲ್ಲವೆಂದು ವರದಿ ಸಲ್ಲಿಕೆಯಾಗಿದೆ. ವಿಜಯೇಂದ್ರ ಉದ್ದೇಶಪೂರ್ವಕವಾಗಿ ಭೇಟಿ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿದ್ದಾರೆ. ಕೇವಲ ಐದು ಹತ್ತು ನಿಮಿಷವಷ್ಟೇ  ಇದ್ದರು ಎಂದು ಹೈಕೋರ್ಟ್ ಗೆ ಎಜಿ ಪ್ರಭುಲಿಂಗ್ ನಾವದಗಿ ಸ್ಪಷ್ಟನೆ ನೀಡಿದರು.

ಬ್ಯಾನ್ ಇದ್ದರೂ ಜನರು ದೇವಾಲಯಕ್ಕೆ ಹೋಗಬಹುದೇ..? ಹಾಗಿದ್ದರೆ ಜನಸಾಮಾನ್ಯರಿಗೂ ಆ ಅವಕಾಶ ನೀಡಿ. ಅರ್ಚಕರದಷ್ಟೇ ಹೊಣೆಯೇ, ಹೋದವರದ್ದಲ್ಲವೇ ಎಂದು ಸರ್ಕಾರಕ್ಕೆ  ಹೈಕೋರ್ಟ್ ಸಿಜೆ. ಎ.ಎಸ್.ಒಕಾ ನೇತೃತ್ವದ ಪೀಠ ಪ್ರಶ್ನೆಸಿತು.

ಈ ವೇಳೆ ಉತ್ತರಿಸಿದ ಹೈಕೋರ್ಟ್ ಗೆ ಅಡ್ವೊಕೆಟ್ ಜನರಲ್,  ರಾಜಕಾರಣಿಗಳಿಗೂ ಹೆಚ್ಚು ಹೊಣೆಗಾರಿಕೆಯಿರುತ್ತದೆ. ವಿಜಯೇಂದ್ರರಿಂದಲೂ ಕೋರ್ಟ್ ವಿವರಣೆ ಪಡೆಯಬಹುದು ಎಂದು ತಿಳಿಸಿದರು.

ಈ ಪ್ರಕರಣ ಸಂಬಂಧಪಟ್ಟವರೆಲ್ಲರ ಕಣ್ತೆರೆಸಬೇಕು. ಅಧಿಕಾರಿಗಳು, ರಾಜಕಾರಣಿಗಳಿಗೆ ಅರಿವಾಗಬೇಕು. ಸಾರ್ವಜನಿಕರಿಗೆ ದೇವಾಲಯ ಪ್ರವೇಶವಿಲ್ಲವೆಂದರೆ ಇಲ್ಲ. ನಿಯಮ  ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಜರಾಯಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ  ಸೂಚನೆ ನೀಡಿತು.

ENGLISH SUMMARY…

CM’s son Vijendra performs pooja at Nanjangud: HC orders strict action
Bengaluru, June 18, 2021 (www.justkannada.in): The Hon’ble High Court of Karnataka has issued orders to initiate strict action against Chief Minister B.S. Yedyurappa’s son Vijendra, who offered pooja at Nanjangud temple violating guidelines.
The hearing of the appeal in the High Court against the case involving the Chief Minister’s Son Vijendra who offered pooja at the temple in Nanjangud violating rules was held. AG Prabhuling Navadagi who is arguing on behalf of Vijendra explained to the Hon’ble Court that, “It is reported that Vijendra was not given the opportunity to enter the temple and have darshan of the deity. Vijendra had not visited the temple purposefully. He entered the temple as the priests asked him to do so. He stayed there only for 5 or 10 minutes.”
The High Court Bench led by Chief Justice A.S. Oka however questioned that can he go to a temple even if there is a curfew? Can only the priest be held responsible? Didn’t he go?
In his reply, the Advocate General said politicians will also have a lot of responsibility and explained however the Hon’ble Court can get clarification from Vijendra too.
The Hon’ble HC Divisional bench has stated that this incident should become an eye-opener for all others, especially the bureaucrats and politicians. When the general public is prohibited all of them should follow it. Strict action should be initiated against any of them who violate the rule.
Keywords: Chief Minister B.S. Yedyurappa/ Son Vijendra/ HC orders strict action/ Nanjangud temple

Key words: CM’s- son- Vijayendra-worship –Nanjangud-high court- action.