ಧ್ರುವ ಫ್ಯಾನ್ಸ್’ಗೆ ಗುಡ್ ನ್ಯೂಸ್: ಸಂಕ್ರಾಂತಿ ಹಬ್ಬ ‘ಪೊಗರು’ ರಿಲೀಸ್

ಬೆಂಗಳೂರು, ನವೆಂಬರ್ 25, 2019 (www.justkannada.in): ಇದೀಗ ಪೊಗರು ನಿರ್ದೇಶಕ ನಂದ ಕಿಶೋರ್​ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ.

ಪೊಗರು ನಿರ್ದೇಶಕ ನಂದ ಕಿಶೋರ್​ ಅವರು ಧ್ರುವ ಮತ್ತು ಪ್ರೇರಣಾ ಶಂಕರ್​ ವಿವಾಹದ ಶುಭ ಸಂದರ್ಭದಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಡಿಸೆಂಬರ್​ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದು, ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ (ಜ.14) ಸಿನಿಮಾ ರಿಲೀಸ್​ ಮಾಡುವುದಾಗಿ ಹೇಳಿದ್ದಾರೆ. ಕಳೆದ ಅಕ್ಟೋಬರ್​ ತಿಂಗಳಿನಲ್ಲಿ ಪೊಗರು ಚಿತ್ರದ ಡೈಲಾಗ್​ ಟ್ರೈಲರ್​ ಅನ್ನು ಬಿಡುಗಡೆ ಮಾಡಿದ್ದರು