ದೇಶದಲ್ಲಿ ಕಾರ್ಬೆವ್ಯಾಕ್ಸ್​, ಕೊವಾವ್ಯಾಕ್ಸ್ ಲಸಿಕೆ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ.

ನವದೆಹಲಿ,ಡಿಸೆಂಬರ್,28,2021(www.justkannada.in): ಭಾರತದಲ್ಲಿ ಕೊವಿಡ್ 19 ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ   ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಹೊಸದಾಗಿ ಕಾರ್ಬೆವ್ಯಾಕ್ಸ್​, ಕೊವಾವ್ಯಾಕ್ಸ್ ಕೊರೊನಾ ಲಸಿಕೆಗಳು ಮತ್ತು ಮೊಲ್ನುಪಿರವಿರ್ ಆಯಂಟಿ ವೈರಲ್​ ಔಷಧಿಗಳ ತುರ್ತು ಮತ್ತು ನಿಯಂತ್ರಿತ ಬಳಕೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದನೆ  ನೀಡಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಒಂದೇ ದಿನ ಅನುಮೋದನೆ ನೀಡಿದ್ದು ವಿಶೇಷವಾಗಿದೆ.

ಭಾರತದಲ್ಲಿ ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್​ ಲಸಿಕೆಗಳ ತುರ್ತು ಬಳಕೆಗೆ, ಷರತ್ತು ಬದ್ಧ ಅನುಮತಿ ನೀಡಬೇಕು ಎಂದು ಕೊವಿಡ್​ 19 ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. ಹಾಗೇ, ರೋಗದ ಅಪಾಯ ತೀವ್ರವಾಗಿದ್ದು, ಅಪಾಯದಲ್ಲಿರುವ ರೋಗಿಗಳ ಚಿಕಿತ್ಸೆಗೆ ಮೊಲ್ನುಪಿರವಿರ್ ಔಷಧ ತುರ್ತು ಬಳಕೆಗೆ ಅನುಮತಿ ನೀಡಬೇಕು ಎಂದೂ ಈ ಸಮಿತಿ ಹೇಳಿತ್ತು. ಈ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯ ಮಾನ್ಯ ಮಾಡಿದೆ. ಅಲ್ಲಿಗೆ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳು ತುರ್ತು ಬಳಕೆಗೆ ಅನುಮೋದನೆ ಪಡೆದಂತಾಗಿದೆ.

Key words: Central government -approves – urgent -use – carbavax vaccine – country.