‘ಜನಸೇವಕ’ ಕಾರ್ಯಕ್ರಮ ಬೆಂಗಳೂರಿನಲ್ಲಿ ಯಶಸ್ವಿಯಾದ್ರೆ ಜ.26ರಿಂದ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ನವೆಂಬರ್,1,2021(www.justkannada.in):  ಜನಸೇವಕ ಕಾರ್ಯಕ್ರಮ ಬೆಂಗಳೂರಲ್ಲಿ ಯಶಸ್ವಿಯಾಗಬೇಕು.  ಬೆಂಗಳೂರಿನಲ್ಲಿ ಯಶಸ್ವಿಯಾದರೆ ಇತರೇ ಜಿಲ್ಲೆಗಳಿಗೆ ವಿಸ್ತರಿಸುವುದು ಸುಲಭ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.

ಜನಸ್ಪಂದನ, ಜನಸೇವಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕ್ರಾಂತಿಕಾರಿ ಬದಲಾವಣೆ ಆಗುವ ದಿನ ಇದು. ಬೆಂಗಳೂರಲ್ಲಿ ಮಾಡುತ್ತಿರುವ ಈ ಪ್ರಯೋಗ ಯಶಸ್ವಿ ಆಗಬೇಕು. ಶಕ್ತಿಕೇಂದ್ರದ ಹತ್ತಿರವೇ ಮಾಡುತ್ತಿರುವ ಈ ಯೋಜನೆ ಯಶಸ್ವಿ ಆಗಲೇಬೇಕು. ಜನವರಿ 26ರಿಂದ ಗ್ರಾಮೀಣ ಪ್ರದೇಶಕ್ಕೂ ಈ ಜನಸೇವಕ ಕಾರ್ಯಕ್ರಮ ವಿಸ್ತರಣೆ ಮಾಡುತ್ತೇವೆ ಎಂದರು.

ಕೇವಲ ರಾಜ್ಯೋತ್ಸವ ಮಾಡಿದ್ರೆ ಸಾಲದು ಅದು ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ಆದಾಗ ರಾಜ್ಯೋತ್ಸವ ಜನೋತ್ಸವ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ ಬಂದ ಕಡೆ ಮಾತ್ರ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ರೀತಿ ಏನೂ ಇಲ್ಲ. ಮಳೆ ಬಂದ ಕಾರಣ ಗುಂಡಿ ಮುಚ್ಚುವುದು ತಡವಾಗ್ತಿದೆ. 28 ಕ್ಷೇತ್ರಗಳಲ್ಲೂ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ‌. ವಾರ, ಹದಿನೈದು ದಿನಗಳ ಕಾಲ ಟೈಮ್ ಕೊಟ್ಟಿದ್ದೇನೆ. ಅದಾದ ಮೇಲೆ ನಾನೇ ಹೋಗಿ ಮತ್ತೆ ವೀಕ್ಷಣೆ ಮಾಡ್ತೇನೆ ಎಂದು ತಿಳಿಸಿದರು.

Keu words: Janasewaka program – success – Bengaluru- CM- Basavaraja Bommai