ಗಣಿತ,ವಿಜ್ಞಾನ ವಿಷಯಗಳಲ್ಲಿ ಶೇ.100ರಷ್ಟು ಪಠ್ಯ ಮಾಡ್ತೇವೆ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

kannada t-shirts

ಬೆಂಗಳೂರು,ನವೆಂಬರ್,18,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾದ ಬೆನ್ನಲ್ಲೆ ಹಂತ ಹಂತವಾಗಿ ಶಾಲಾ ಕಾಲೇಜುಗಳು ಆರಂಭವಾಗಿವೆ. ಈ ಮಧ್ಯೆ ಜೂನ್ ನಲ್ಲಿ ಆರಂಭವಾಗಬೇಕಿದ್ದ ಶಾಲೆಗಳು ಕೋವಿಡ್ ನಿಂದಾಗಿ ಎರಡು ತಿಂಗಳು ವಿಳಂಬವಾಗಿ ಆರಂಭವಾಗಿದ್ದು ಪಠ್ಯ ಕಡಿತ ಕುರಿತು ಚರ್ಚೆಯಾಗುತ್ತಿದೆ.

ಈ  ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ಬಿಸಿ ನಾಗೇಶ್, ಗಣಿತ, ವಿಜ್ಞಾನದಲ್ಲಿ ಮಾತ್ರ ಶೇ.100 ರಷ್ಟು ಪಠ್ಯ ಮಾಡ್ತೇವೆ.ಉಳಿದ ವಿಷಯಗಳಲ್ಲಿ ಶೇ.100 ರಷ್ಟು ಪಠ್ಯಕ್ಕೆ ಒತ್ತು ಕೊಡಲ್ಲ . ಎರಡು ಭಾಷೆಗಳಲ್ಲಿ ಪಠ್ಯ ಪೂರೈಸದಿದ್ದರೇ ಮುಂದಿನ ತರಗತಿಗೆ ತೊಂದರೆಯಾಗುತ್ತೆ  ಎಂದಿದ್ದಾರೆ.

Key words:  Mathematics – Science- 100% – text-Education Minister -BC Nagesh.

website developers in mysore