ಕೊರೋನಾ ಹೆಚ್ಚಳ ಹಿನ್ನೆಲೆ: ದೆಹಲಿಯಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ.

kannada t-shirts

ನವದೆಹಲಿ,ಜನವರಿ,4,2022(www.justkannada.in):  ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ  ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ.

ಈ ಕುರಿತು ದೆಹಲಿ ಸರ್ಕಾರ ಆದೇಶ ಹೊರಡಿಸಿದ್ದು ವೀಕೆಂಡ್ ಶನಿವಾರ ಮತ್ತು ಭಾನುವಾರ ಫುಲ್ ಲಾಕ್ ಆಗಲಿದೆ.  ಹಾಗೆಯೇ ದೆಹಲಿಯಲ್ಲಿ 50:50 ನಿಯಮ ಜಾರಿ ಮಾಡಲಾಗಿದ್ದು,  ವಾಣಿಜ್ಯ  ಚಟುವಟಿಕೆಗಳು ಹಾಗೂ ಸರ್ಕಾರಿ ಕಚೇರಿಗ:ಳಿಗೂ ಶೇ.50% ನಿಯಮ ಅನ್ವಯವಾಗಲಿದೆ. ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಲಾಗಿದೆ.Night curfew – tomorrow- Guidelines - State Government

ಶನಿವಾರ ಭಾನುವಾರ  ವೀಕೆಂಡ್ ಲಾಕ್ ಡೌನ್ ಹಿನ್ನೆಲೆ ಪಬ್ ಬಾರ್ ರೆಸ್ಟೋರೆಂಟ್ ಎಲ್ಲವೂ  ಬಂದ್ ಆಗಲಿದ್ದು ಈ ಮೂಲಕ ಕೊರೋನಾ ತಡೆಗಾಗಿ ದೆಹಲಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ.

Key words: Corona-increase-Weekend-curfew –enforced-again – Delhi.

website developers in mysore