ಕೆಂಚೇನಹಳ್ಳಿ ಆಂಜನೇಯ ಸೇವಾ ಸಮಿತಿಯಿಂದ ಹನುಮ ಜಯಂತಿ ಆಚರಣೆ.

ಬೆಂಗಳೂರು,ಡಿಸೆಂಬರ್,16,2021(www.justkannada.in): ರಾಜರಾಜೇಶ್ವರಿ ನಗರದಲ್ಲಿರುವ ಕೆಂಚೇನಹಳ್ಳಿ ಆಂಜನೇಯ ಸೇವಾ ಸಮಿತಿ ವತಯಿಂದ ಅದ್ದೂರಿಯಾಗಿ  ಹನುಮ ಜಯಂತಿ ಆಚರಿಸಲಾಯಿತು.

ಈ ವೇಳೆ ದೇವಸ್ಥಾನದ ಅಧ್ಯಕ್ಷರು ಹಾಗೂ ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ ಅಶೋಕ್ ಅವರು ಮಾತನಾಡಿ,   ಪ್ರಸಿದ್ಧವಾದ ಆಂಜನೇಯ ದೇವಸ್ಥಾನದಲ್ಲಿ ಪ್ರತಿವರ್ಷವೂ ಅದ್ದೂರಿಯಾಗಿ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸುತ್ತ ಬಂದಿದ್ದೇವೆ. ಬೇರೆ ಬೇರೆ ಭಾಗಗಳಿಂದ ಭಗವಂತನ ದರ್ಶನ ಮಾಡಲು ಭಕ್ತಾದಿಗಳು ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.

ದೇವಸ್ಥಾನದ ಟ್ರಸ್ಟಿಗಳಾದ ಆರ್.ಸುರೇಶ್ ರಾವ್, ಎಸ್.ಶಶಿಕಾಂತ್ ರಾವ್, ಕೆ.ಟಿ. ಪ್ರಕಾಶ್, ಪ್ರಸಾದ್, ಹಾಗೂ ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರು ಕೆ.ಎನ್ ಸುರೇಶ್,  ಖಜಾಂಚಿ ರಮೇಶ್ ಮತ್ತಿತರು ಪಾಲ್ಗೊಂಡಿದ್ದರು. ಕೆಂಚನಹಳ್ಳಿ ಶ್ರೀ ಆಂಜನೇಯ ದೇವಸ್ಥಾನ ಸೇವಾ ಸಮಿತಿ ಹಾಗೂ ಕೆಂಚೇನಹಳ್ಳಿ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರು ಶ್ರೀ ಟಿ.ಅಶೋಕ್ ಹಾಗೂ  ಪದಾಧಿಕಾರಿಗಳು ಉಪಸ್ಥಿತರಿದ್ದರು.

key words: Celebration – Hanuma Jayanti – Kenchenahalli Anjaneya Seva Samiti