ಕರ್ನಾಟಕದಲ್ಲಿ ಮುಖ್ಯಸ್ಥರಿಲ್ಲದಿರುವಂತಹ ಆಯೋಗಗಳ ಮುಂದೆ ಬಿದ್ದಿವೆ ಆರ್‌ ಟಿಐ ಅರ್ಜಿಗಳ ಗುಡ್ಡೆ.

ಬೆಂಗಳೂರು, ಡಿಸೆಂಬರ್ 22, 2022 (www.justkannada.in): ಕರ್ನಾಟಕದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಒಟ್ಟು 31 ಸಾವಿರ ಅರ್ಜಿಗಳು ವಿಲೇವಾರಿಗಾಗಿ ಬಾಕಿ ಉಳಿದಿವೆ. ಆ ಪೈಕಿ ೧೯,೧೩೧ ಅರ್ಜಿಗಳು ಬೆಳಗಾವಿ ಹಾಗೂ ಕಲಬುರಗಿಯಲ್ಲಿರುವ ಮಾಹಿತಿ ಆಯೋಗ ಪೀಠಗಳಿಗೆ ಸೇರಿವೆ.

ಈ ವರ್ಷದ ಏಪ್ರಿಲ್ ತಿಂಗಳಿಂದ ಬೆಳಗಾವಿ ಪೀಠದಲ್ಲಿ ಮಾಹಿತಿ ಆಯುಕ್ತರಿಲ್ಲ. ಕಲಬುರಗಿ ಪೀಠದಲ್ಲಿ ಮಾಹಿತಿ ಆಯುಕ್ತರಿದ್ದಾರೆ, ಆದರೆ ರಾಜ್ಯ ಸರ್ಕಾರಕ್ಕೆ ಅಲ್ಲಿ ಆಯುಕ್ತರ ಕಚೇರಿಗೆ ಸೂಕ್ತ ಕಟ್ಟಡ ಸಿಗದ ಕಾರಣದಿಂದಾಗಿ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದೆ.

ಏಪ್ರಿಲ್ ತಿಂಗಳಲ್ಲಿ ಬೆಳಗಾವಿಯ ಪೀಠದ ಮಾಹಿತಿ ಆಯುಕ್ತೆ ಗೀತಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಆಗ ಅಲ್ಲಿ ೭,೭೮೩ ಅರ್ಜಿಗಳಿದ್ದವು. ಆ ಸಂಖ್ಯೆ ನವೆಂಬರ್ 30ರ ವೇಳೆಗೆ ೧೨,೪೩೪ ತಲುಪಿವೆ. ರಾಜ್ಯ ಮಾಹಿತಿ ಆಯುಕ್ತಾಲಯದ ಮೂಲಗಳ ಪ್ರಕಾರ ಬೆಳಗಾವಿ ಪೀಠಕ್ಕೆ ಪ್ರತಿ ತಿಂಗಳು ಸರಾಸರಿ ೫೦೦ ರಿಂದ ೭೦೦ ಅರ್ಜಿಗಳು ಬರುತ್ತವೆ.

ಅರ್ಜಿದಾರರು ಆರ್‌ಟಿಐ ಕಾಯ್ದೆಯಡಿ ಅಗತ್ಯ ಮಾಹಿತಿ ಪಡೆಯುವಲ್ಲಿ ವಿಫಲವಾದಾಗ ಪ್ರಕರಣಗಳು ಈ ಪೀಠಗಳ ಬಳಿಗೆ ಬರುತ್ತವೆ. ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ಒದಗಿಸುವಂತೆ ಹಾಗೂ ದಂಡ ವಿಧಿಸುವ ಅಥವಾ ದುರುದ್ದೇಶಪೂರಿತ ಕಾರಣದಿಂದಾಗಿ ಅಧಿಕಾರಿಯು ಮಾಹಿತಿ ನೀಡದಿರುವ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನೂ ಸಹ ವಿಧಿಸುವ ಅಧಿಕಾರ ಆಯುಕ್ತರಿಗಿದೆ.

ರಾಜ್ಯದಲ್ಲಿ ಒಟ್ಟು 10 ಈ ರೀತಿಯ ಪೀಠಗಳಿದ್ದು, ಈ ಪೈಕಿ ೯ ಪೀಠಗಳು (ಎಲ್ಲವೂ ಬೆಂಗಳೂರಿನಲ್ಲಿರುವುದು) ಕಾರ್ಯನಿರ್ವಹಿಸುತ್ತಿವೆ (ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ಪೀಠವೂ ಒಳಗೊಂಡಂತೆ). ವಿಧಾನಸಭೆಯ ವಿರೋಧಪಕ್ಷದ ನಾಯಕರು ಒಳಗೊಂಡಂತೆ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿಯಲ್ಲಿ, ಮುಖ್ಯಮಂತ್ರಿಗಳ ಆಯ್ಕೆಯ ಓರ್ವ ಸಚಿವರು ಮಾಹಿತಿ ಆಯುಕ್ತರನ್ನು ಆಯ್ಕೆ ಮಾಡುತ್ತಾರೆ.

ಕರ್ನಾಟಕ ಮಾಹಿತಿ ಆಯುಕ್ತಾಲಯದ ಉನ್ನತ ಮಟ್ಟದ ಮೂಲಗಳ ಪ್ರಕಾರ, ಅರ್ಜಿಗಳನ್ನು ಪಡೆಯುವ ಪ್ರಕ್ರಿಯೆ, ಅಭ್ಯರ್ಥಿಗಳ ಪರಿಶಿಲನೆ ಪ್ರಕ್ರಿಯೆಗಳು ಪೂರ್ಣಗೊಂಡಿವೆಯಂತೆ. ” ಮುಖ್ಯಮಂತ್ರಿಗಳೊಂದಿಗೆ ಒಂದು ಸಭೆ ನಡೆಸಬೇಕಾಗಿದ್ದು, ಎಲ್‌ ಓಎ ಖಾಲಿಯಿರುವ ಪೀಠಗಳಿಗೆ ಆಯ್ಕೆ ಮಾಡಿರುವ ಆಯುಕ್ತರ ಹೆಸರುಗಳಿಗೆ ಅನುಮೋದನೆಯೊಂದು ಬಾಕಿಯಿದೆ.” ಮಾಹಿತಿ ಆಯುಕ್ತರ ಹುದ್ದೆ ಬಹಳ ದೀರ್ಘ ಕಾಲದಿಂದ ಖಾಲಿ ಇರುವುದು ಆರ್‌ ಟಿಐ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎನ್ನುವುದು ಆರ್‌ಟಿಐ ಕಾರ್ಯಕರ್ತರೊಬ್ಬರ ಅಭಿಪ್ರಾಯವಾಗಿದೆ.

ಬಹುಪಾಲು ಅಧಿಕಾರಿಗಳು ತಮ್ಮ ಲೋಪದೋಷಗಳನ್ನು ಮುಚ್ಚಿಡುವ ಉದ್ದೇಶದಿಂದ ಸರಿಯಾದ ಮಾಹಿತಿಯನ್ನು ನೀಡಲು ನಿರಾಕರಿಸುತ್ತಾರೆ. ಹಾಗಾಗಿ ಬಹುತೇಕ ಅರ್ಜಿಗಳೂ ಆರ್‌ಟಿಐ ಇತ್ಯರ್ಥ ಪೀಠಗಳ ಮುಂದೆ ಹೋಗುತ್ತವೆ ಎನ್ನುವುದು ಬೆಳಗಾವಿಯ ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸಗೌಡ ಪಾಟೀಲ್ ಅವರ ಅಭಿಪ್ರಾಯವಾಗಿದೆ. ” ರಾಜ್ಯ ಮಾಹಿತಿ ಆಯುಕ್ತಾಲಯವೊಂದೇ ಬೆಳಗಾವಿಯ ಸುವರ್ಣ ಸೌಧದಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಟ್ಟದ ಕಚೇರಿಯಾಗಿದೆ. ಆದರೆ ಅಲ್ಲಿಯೂ ಸಹ ಕಳೆದ ಏಳು ತಿಂಗಳಿಂದ ಮುನ್ನಡೆಸುವವರಿಲ್ಲ. ಪ್ರಕರಣಗಳ ಶೀಘ್ರ ವಿಲೇವಾರಿ ನಿರಾಕರಿಸುವ ಮೂಲಕ, ಆಡಳಿತ ಹಾಗೂ ವಿರೋಧಪಕ್ಷ ಎರಡೂ ಕಡೆಯ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ,” ಎಂದಿದ್ದಾರೆ.

ನ್ಯಾಯ ನಿರಾಕರಣೆ

ಕಲಬುರಗಿಯ ಆರ್‌ಟಿಐ ಕಾರ್ಯಕರ್ತ ದಿಪಕ್ ಗಲ ಅವರ ಪ್ರಕಾರ, ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ಕಲಬುರಗಿಯ ಪೀಠ ಕಲ್ಯಾಣ ಕರ್ನಾಟಕ ಪ್ರಾಂತ್ಯದ ಜನರಿಗೆ ಸಹಾಯವಾಗುವುದು ಬಹಳ ಕಡಿಮೆ. “ಕಲಬುರಗಿ ಪೀಠವನ್ನು ಆರಂಭಿಸಿದ ಉದ್ದೇಶವೇ ಅಗತ್ಯವಿರುವವರಿಗೆ ಶೀಘ್ರವಾಗಿ ನ್ಯಾಯ ದೊರಿಕಿಸಿಕೊಡುವುದಾಗಿದೆ. ಆದರೆ ಕಲಬುರಗಿಯಲ್ಲಿ ಆಯುಕ್ತರ ಕಚೇರಿಗೆ ಸೂಕ್ತವಾದಂತಹ ಕಟ್ಟಡ ಅಥವಾ ಸ್ಥಳವನ್ನು ಹುಡುಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದರೆ ಅದು ನಾಚಿಕೆಗೇಡಿನ ಸಂಗತಿ. ಜೊತೆಗೆ, ಬೆಂಗಳೂರಿನಿಂದ ಆರ್‌ಟಿಐ ವಿಚಾರಣೆಗಳನ್ನು ಆನ್‌ ಲೈನ್ ಮೂಲಕ ನಡೆಸಲಾಗುತ್ತಿದೆಯಾದರೂ ಸಹ ಇಲ್ಲಿ ನಷ್ಟ ಅನುಭವಿಸುವವರು ಗ್ರಾಮೀಣ ಭಾಗದ ಜನರು. ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ ವರ್ಕ್ ಗುಣಮಟ್ಟ ಚೆನ್ನಾಗಿರುವುದಿಲ್ಲ ಹಾಗೂ ಅನೇಕರಿಗೆ ಆ ಪ್ರಕ್ರಿಯೆ ಕುರಿತು ಯಾವುದೇ ಜ್ಞಾನವೂ ಇಲ್ಲ, ಎಂದು ವಿವರಿಸಿದರು.

ರಾಜ್ಯ ಮಾಹಿತಿ ಆಯುಕ್ತಾಲಯದ ಮೂಲಗಳು ತಿಳಿಸಿದಂತೆ, ರಾಜ್ಯ ಸರ್ಕಾರವು, ಕಲಬುರಗಿಯಲ್ಲಿ ಆರ್‌ಟಿಐ ಪೀಠಕ್ಕಾಗಿ ಹಳೆಯ ಪಿಡಬ್ಲ್ಯುಡಿ ಕಚೇರಿಯನ್ನು ಗುರುತಿಸಿತ್ತು. ಆದರೆ ನಂತರದಲ್ಲಿ ತನ್ನ ಆದೇಶವನ್ನು ಹಿಂಪಡೆಯಿತು. ಹಾಗಾಗಿ, ಇನ್ನೂ ಸಹ ಹೊಸ ಕಟ್ಟಡಕ್ಕಾಗಿ ಹುಡುಕಾಟ ಮುಂದುವರೆದಿದದೆ, ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಂಬಂಧ ಮಾತನಾಡಲು ಕಾನೂನು ಸಚಿವ ಜೆ. ಮಾಧುಸ್ವಾಮಿಯರನ್ನು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ (ಡಿಪಿಎಆರ್) ಅಧಿಕಾರಿಗಳನ್ನು ಸಂಪರ್ಕಿಸುವ ಮಾಧ್ಯಮದ ಪ್ರಯತ್ನ ಫಲ ನೀಡಲಿಲ್ಲ. ಏಕೆಂದರೆ ಎಲ್ಲರೂ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ನಿರತರಾಗಿದ್ದಾರಂತೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: RTI applications – headless- commissions -Karnataka