ಒಮಿಕ್ರಾನ್ ಗೆ ಭೀತಿಗೆ ಮತ್ತೆ ಮಂಕಾಯ್ತು ಮೃಗಾಲಯ.

ಮೈಸೂರು,ಡಿಸೆಂಬರ್,21,2021(www.justkannada.in): ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ಭೀತಿ ಎದುರಾಗಿದ್ದು, ಈಗಾಗಲೇ ಸರ್ಕಾರ ಕೆಲ ಕೋವಿಡ್ ನಿಯಮಗಳನ್ನ ಜಾರಿ ಮಾಡಿದೆ.  ಈ ಮಧ್ಯೆ ಒಮಿಕ್ರಾನ್ ಭೀತಿ ಪರಿಣಾಮ ಮೃಗಾಲಯದ ಮೇಲೆ ತಟ್ಟಿದೆ.

ಹೌದು, ಮೃಗಾಲಯಕ್ಕೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಕಡಿಮೆ ಪ್ರವಾಸಿಗರು  ಭೇಟಿ ನೀಡಿದ್ದಾರೆ. 2020ರ ಡಿಸೆಂಬರ್‌ ನಲ್ಲಿ  1,24,347 ಜನರು ಮೃಗಾಲಯ ವೀಕ್ಷಣೆ ಮಾಡಿದ್ದರು. ಆದರೆ 2021ರ  ಡಿಸೆಂಬರ್‌ ನ ಇಲ್ಲಿಯತನಕ 7,10,000 ಮಾತ್ರ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.corona-2nd-wave-zoos-hardship-appeal-cooperation

ಮೃಗಾಲಯಗಳಲ್ಲಿ ಪ್ರತಿನಿತ್ಯ ಸರಿಸುಮಾರು 6 ಸಾವಿರ ಮಂದಿ ವೀಕ್ಷಿಣೆ ಮಾಡುತ್ತಿದ್ದು, ಒಮಿಕ್ರಾನ್ ಅತಂಕಕ್ಕೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿದ್ದ ಮೃಗಾಲಯಕ್ಕೆ ನಿರಾಸೆಯುಂಟಾಗಿದೆ. ಇದೀಗ ಹೊಸ ವರ್ಷಕ್ಕೆ ನಿರ್ಬಂಧ ಹೇರಿದ್ರೆ ಮತ್ತಷ್ಟು ಪ್ರವಾಸಿಗರ ಸಂಖ್ಯೆ ಕ್ಷೀಣಿಸಲಿದೆ ಎಂದು ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.

Key words: Omicron- mysore-Zoo-visit-tourist