ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಪಿನ್ನರ್ ಹರ್ಭಜನ್ ಸಿಂಗ್.

ಮುಂಬೈ,ಡಿಸೆಂಬರ್,24,2021(www.justkannada.in)   ಭಾರತದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ವಿದಯ  23 ವರ್ಷಗಳ  ಕ್ರಿಕೆಟ್ ಪಯಣಕ್ಕೆ ಗುಡ್ ಬೈ ಹೇಳಿದ್ದಾರೆ. ಹೌದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಬಜ್ಜಿ ವಿದಾಯ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ  ಟ್ವೀಟ್ ಮಾಡಿರುವ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು, ಇಂದು ನಾನು ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯಗೊಳಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಹೃತ್ಪೂರ್ವಕ ಧನ್ಯವಾದಗಳು, ಕೃತಜ್ಞತೆ ಎಂಬುದಾಗಿ ತಿಳಿಸಿದ್ದಾರೆ.

1998ರಲ್ಲಿ ಟೆಸ್ಟ್ ಕ್ರಿಕೆಟ್ ಗೆ  ಪಾದಾರ್ಪಣೆ ಮಾಡಿದ್ದ ಹರ್ಭಜನ್ ಸಿಂಗ್ ಭಾರತೀಯ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.  ಇವರು  2007ರ ಟಿ-20 ಮತ್ತು 2011ರ  ಏಕದಿನ ವಿಶ್ವಕಪ್ ಜಯಸಿದ ಭಾರತ ತಂಡದಲ್ಲಿ ಆಡಿದ್ದರಿದ್ದರು.

ಹರ್ಭಜನ್ ಸಿಂಗ್ 2016 ರಲ್ಲಿ ಟಿ-20 ವಿಶ್ವಕಪ್ ನಲ್ಲಿ ಕೊನೆಯ ಬಾರಿ ಆಡಿದ್ದರು. 103 ಟೆಸ್ಟ್ ಗಳಲ್ಲಿ 417 ವಿಕೆಟ್ ಗಳನ್ನು ಪಡೆದಿರುವ ಇವರು ಇದೀಗ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಬಜ್ಜಿ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆಯೇ ಎಂಬ ಕುತೂಹಲ ಉಂಟಾಗಿದೆ.

Key words: Harbhajan Singh – goodbye -all forms – cricket.