ಆಗಸ್ಟ್’ಗೆ ಬಾಲಿವುಡ್ ‘ಬೆಲ್ ಬಾಟಂ’ ಶೂಟಿಂಗ್ ಶುರು !

ಮುಂಬೈ, ಜುಲೈ 07, 2020 (www.justkannada.in): ಅಕ್ಷಯ್ ಕುಮಾರ್ ಮತ್ತು ವಾನಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಬೇಹುಗಾರಿಕೆ ಥ್ರಿಲ್ಲರ್ ಚಿತ್ರ ಬೆಲ್ ಬಾಟಂ ಆಗಸ್ಟ್‌ನಲ್ಲಿ ಯುಕೆಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

ಭಾರತದ ಮರೆತು ಹೋದ 1980ರ ವೀರರ ಕಥೆ ಹೇಳುವ ಬೆಲ್​ ಬಾಟಂ ಚಿತ್ರವನ್ನು ರಂಜಿತ್ ಎಂ. ತಿವಾರಿ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಗೂಢಚಾರಿ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ.

ವಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಿಶ್ಕಾ ದೇಶ್ಮುಖ್, ಮೋನಿಷಾ ಅಡ್ವಾಣಿ, ಮಧು ಭೋಜ್ವಾನಿ ಮತ್ತು ನಿಖಿಲ್ ಅಡ್ವಾಣಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.