ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ.

Promotion

ನವದೆಹಲಿ,ಡಿಸೆಂಬರ್,16,2021(www.justkannada.in):  ದೇಶದಲ್ಲಿ ಹೆಣ್ಣುಮಕ್ಕಳ ವಯಸ್ಸನ್ನ 18 ರಿಂದ 21ಕ್ಕೆ ಏರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ದೇಶದಲ್ಲಿ ಯುವತಿಯರಿಗೆ ಕನಿಷ್ಠ 18ವರ್ಷ ಆದ ವಿನಃ ಮದುವೆ ಮಾಡುವಂತೆ ಇಲ್ಲ ಎಂಬ ಕಾನೂನು ಇತ್ತು. ಅದನ್ನೀಗ ಬದಲಿಸಿ, ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿಯನ್ನು 21ಕ್ಕೆ ಏರಿಸುವ ಪ್ರಸ್ತಾಪವನ್ನು ಕೇಂದ್ರ ಸಂಪುಟ ಅಂಗೀಕರಿಸಿದೆ.

ದೇಶದಲ್ಲಿ ಇರುವ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸುವುದರಿಂದ,ಸಹಜವಾಗಿಯೇ ತಾಯ್ತನದ ವಯಸ್ಸಿನ ಮಿತಿಯೂ ಏರುತ್ತದೆ.

ಹೀಗಾಗಿ ಒಂದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಒಂದು ಟಾಸ್ಕ್​ಫೋರ್ಸ್ ರಚಿಸಿತ್ತು. ಈ ಟಾಸ್ಕ್ ಫೋರ್ಸ್​ನ ಶಿಫಾರಸ್ಸಿನ ಅನ್ವಯ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Key words: Union Cabinet – agreed – increase – marriage- age – girls.

ENGLISH SUMMARY…

Union Cabinet approves proposal to increase marriage age of girls
New Delhi, December 16, 2021 (www.justkannada.in): The Union Cabinet has approved the proposal to increase the wedding age of girls from 18 to 21 years.
Till now, girls below 18 years of age were not allowed to marry as per law in our country. It has been changed now. Accordingly, the minimum age to get married for girls will be 21 years.
This measure is said to have been taken not only to mitigate the lactating-infant mortality rate, eradicate lack of nutrition but also it helps the girls in attaining motherhood at an appropriate age.
The Government of India had formed a task force keeping all these problems in the mind. Now, approval has been given to the proposal based on the recommendations of the task force.
Keywords: Marriage age/ grils/ increase/ 21 years/ Union Cabinet/ approves