ಸಿನಿಮಾ ಶೂಟಿಂಗ್ ವೇಳೆ ದುರಂತ: ವಿದ್ಯುತ್ ತಂತಿ ತಗುಲಿ ಫೈಟರ್ ಸಾವು.

Promotion

ರಾಮನಗರ,ಆಗಸ್ಟ್,9,2021(www.justkannada.in):  ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ಸಾವನ್ನಪ್ಪಿರುವ ಘಟನೆ ರಾಮನಗರ ತಾಲ್ಲೂಕಿನ ಜೋಗನದೊಡ್ಡಿಯಲ್ಲಿ ನಡೆದಿದೆ.

ಲವ್ ಯೂ ರಚ್ಚು ಸಿನಿಮಾ  ಶೂಟಿಂಗ್ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ತಮಿಳುನಾಡು ಮೂಲದ ಫೈಟರ್ ವಿವೇಕ್ ಮೃತಪಟ್ಟವರು.

ಈ ಕುರಿತಂತೆ ಲವ್ ಯೂ ರಚ್ಚು ಸಿನಿಮಾ ನಿರ್ಮಾಪಕ ಗುರು ದೇಶಪಾಂಡೆ ಮಾಹಿತಿ ನೀಡಿದ್ದು, ಶೂಟಿಂಗ್ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿದ್ದರಿಂದಾಗಿ ಸಿನಿಮಾದಲ್ಲಿ ಫೈಟರ್ ಆಗಿ ಕೆಲಸ ಮಾಡುತ್ತಿದ್ದ ಫೈಟರ್ ವಿವೇಕ್ ( 28 ) ಎಂಬುವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಅಂದಹಾಗೇ ರಾಮನಗರ ಜಿಲ್ಲೆಯ ಜೋಗನದೊಡ್ಡಿ ಬಳಿಯಲ್ಲಿ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಫೈಟರ್ ಆಗಿ ವಿವೇಕ್ ಕೆಲಸ ಮಾಡುತ್ತಿದ್ದರು.

Key words: Electronic -cinema shooting- fighter-death