ಪತ್ನಿಯನ್ನ ಚುಡಾಯಿಸಿದ ಆರೋಪ: ಸೆಕ್ಯೂರಿಟಿ ಗಾರ್ಡ್ ಮೇಲೆ ಪತಿಯಿಂದ ಹಲ್ಲೆ.

Promotion

ಬೆಂಗಳೂರು,ಡಿಸೆಂಬರ್,11,2021(www.justkannada.in):  ತನ್ನ ಪತ್ನಿಯನ್ನ ಚುಡಾಯಿಸಿದನೆಂದು ಆರೋಪಿಸಿ ಪತಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಯತೀಶ್ ಎಂಬುವವರ ಮೇಲೆ ವಾಸು ಎಂಬುವವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು ಪ್ರತಿದೂರು ನೀಡಿದ್ದಾರೆ. ವಾಸು ಹಲ್ಲೆ ಮಾಡಿರುವುದಾಗಿ ಯತೀಶ್ ದೂರು ನೀಡಿದ್ದು, ತನ್ನ ಹೆಂಡತಿಯನ್ನು ಚುಡಾಯಿಸಿದ್ದಾಗಿ ವಾಸು ದೂರು ನೀಡಿದ್ದಾರೆ.  ಈ ಕುರಿತು  ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪತ್ನಿಯನ್ನ ಯತೀಶ್  ಚುಡಾಯಿಸಿದ್ದಾನೆಂದು ಯತೀಶ್ ಶರ್ಟ್ ಬಿಚ್ಚಿ ಹಾಕಿ ಸ್ಟಿಕ್ ನಿಂದ ವಾಸು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Key words: wife–accusation-Husband- assaulting- security guard