ತಿಪ್ಪರಲಾಗ ಹೊಡೆದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ- ಆರ್.ಅಶೋಕ್.

Promotion

ಬೆಂಗಳೂರು,ಮೇ,11,2023(www.justkannada.in): ರಾಜ್ಯದಲ್ಲಿ ತಿಪ್ಪರಲಾಗ ಹೊಡೆದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಹೆಚ್ಚು ಕಡಿಮೆ ಆದರೇ ಕೇಂದ್ರದ ನಾಯಕರು ಇದ್ದಾರೆ. ಸರ್ಕಾರ ಮಾಡಲು ಏನು ಕಸರತ್ತು ಮಾಡಬೇಕೋ ಅದನ್ನ ಮಾಡುತ್ತೇವೆ ಎಂದರು.

ನಾವು ಮಾಡಿದರೇ ಮಾತ್ರವೇ ಅಪರೇಷನ್ ಕಮಲನಾ..? ಕಾಂಗ್ರೆಸ್ ಜೆಡಿಎಸ್ ಮಾಡಿದ್ರೆ ಅದು ಏನು…? ಎಂದು ಪ್ರಶ್ನಿಸಿದ ಆರ್.ಅಶೋಕ್, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೇ  ಸರ್ಕಾರ ರಚನೆ ಮಾಡುತ್ತೇವೆ. . ಮೇ 13ರ ಬಳಿಕ ತಂತ್ರಗಾರಿಕೆ ಜಾರಿ ಮಾಡುತ್ತೇವೆ. ಕೇಂದ್ರದ ನಾಯಕರು ಕೊಡುವ ಸೂಚನೆ ಪಾಲಿಸುತ್ತೇವೆ ಎಂದು ತಿಳಿಸಿದರು.

Key words: BJP-Candidate-R.Ashok-Assembly election