ಡೇ ಕೇರ್ ಸೆಂಟರ್  ನಲ್ಲಿ ಮಾಜಿ ಪೊಲೀಸ್ ಅಧಿಕಾರಿಯಿಂದ ಶೂಟೌಟ್: 22 ಮಕ್ಕಳು ಸೇರಿ 34 ಮಂದಿ ಸಾವು.

Promotion

ಥಾಯ್ಲೆಂಡ್, ಅಕ್ಟೋಬರ್,6,2022(www.justkannada.in): ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಡೇ ಕೇರ್ ಸೆಂಟರ್ ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಪರಿಣಾಮ 22 ಮಕ್ಕಳು ಸೇರಿ 34 ಮಂದಿ ಸಾವನ್ನಪ್ಪಿರುವ ಘಟನೆ ಥಾಯ್ಲೆಂಡ್ ನಲ್ಲಿ ನಡೆದಿದೆ.

ಥಾಯ್ಲೆಂಡ್‍ನಲ್ಲಿ ಮಕ್ಕಳ ಡೇ ಕೇರ್ ಸೆಂಟರ್‍’ನಲ್ಲಿ ಗುಂಡಿನ ದಾಳಿಯಲ್ಲಿ 34 ಜನ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.  ಶೂಟೌಟ್ ಮುನ್ನ ಮಾಜಿ ಪೊಲೀಸ್ ಅಧಿಕಾರಿ ತನ್ನ ಪತ್ನಿ ಹಾಗೂ ಮಗುವನ್ನಕೊಂದಿದ್ದಾನೆ. ನಂತರ ಡೇ ಕೇರ್ ಗೆ ನುಗ್ಗಿ 34 ಜನರ ಪ್ರಾಣ ಬಲಿ ಪಡೆದಿದ್ದಾನೆ ಎನ್ನಲಾಗಿದೆ.

ಬಳಿಕ ತಾನೂ ಶೂಟೌಟ್ ಮಾಡಿಕೊಂಡು ಅಸುನೀಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Shootout – former- police -officer -day –care- center