ಜೂ.3ರಿಂದ ನಟ ಉಪೇಂದ್ರ ನಿರ್ದೇಶನದ ಹೊಸ  ಸಿನಿಮಾ ಶೂಟಿಂಗ್ ಆರಂಭ.

Promotion

 

ಬೆಂಗಳೂರು,ಮೇ,23,2022(www.justkannada.in): ಜೂನ್ 3ರಿಂದ ನಟ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ  ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಬಹುಭಾಷಾ ಪ್ರಾಜೆಕ್ಟ್ ಆಗಿರುವ ಈ ಸಿನಿಮಾ ಟೈಟಲ್ ಸಂಚಲನ ಮೂಡಿಸಿದೆ. ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್ ಬ್ಯಾಂಕ್ರೋಲ್ ಮಾಡಿದೆ.

ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ ಪ್ರಾಜೆಕ್ಟ್ ಕಿಕ್‌ ಸ್ಟಾರ್ಟ್ ಮಾಡಲು ನಿರ್ದೇಶಕರು ಯೋಜಿಸುತ್ತಿದ್ದಾರೆ. ‘ಈ ಯೋಜನೆಯ ಬಗ್ಗೆ ನಾವು ಒಂದು ತಂಡವಾಗಿ ಉತ್ಸಾಹದಿಂದ ಇದ್ದೇವೆ, ಅದರಲ್ಲೂ ವಿಶೇಷವಾಗಿ ನಾವು ‘ಮಾಸ್ಟರ್ ಆಪ್ ಡೈರೆಕ್ಟರ್ಸ್ ‘ ಎಂದು ಪರಿಗಣಿಸುವ ಉಪೇಂದ್ರ ಅವರು ಇದನ್ನು ನಿರ್ದೇಶಿಸುತ್ತಿದ್ದಾರೆ ಎಂದು ಕೆಪಿ ಶ್ರೀಕಾಂತ್ ಹೇಳಿದ್ದಾರೆ.