ಅಕ್ಷರ ಸಂಗಾತ : ಕಥಾ ಸ್ಪರ್ಧೆಯ ಬಹುಮಾನ ಪ್ರಕಟ.

Promotion

ಧಾರವಾಡ,ಅಕ್ಟೋಬರ್,26,2021(www.justkannada.in):  ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯಲ್ಲಿ ಕಥಾ ಬಹುಮಾನವನ್ನು ಇಬ್ಬರು ಸಮಾನವಾಗಿ ಹಂಚಿಕೊಂಡಿದ್ದು, ಸುವರ್ಣ ಚೆಳ್ಳೂರು ಅವರ ‘ಕಂಬದ ಹಕ್ಕಿ’ ಮತ್ತು ಪ್ರವೀಣ್ ಕುಮಾರ್ ಜಿ ಅವರ ‘ಗುಟ್ಟು’ ಕಥಾ ಬಹುಮಾನ ಪಡೆದುಕೊಂಡಿವೆ.

ನಾಗರಾಜ ಕೋರಿ ಅವರ ‘ಮಲ್ಲಯ್ಯನ ಮೈಕು’, ಝಬೈರ್ ಅಹ್ಮದ್ ಪರಪ್ಪು ಅವರ ‘ಒಂದು ತಿರುವಿನ ಕರಾಮತ್ತು’ ಒಪ್ಪಿತ ಕತೆಗಳಾಗಿ ಆಯ್ಕೆಯಾಗಿವೆ.

ನಾಲ್ಕೂ ಕಥೆಗಳಿಗೂ ತಲಾ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಕಥೆಗಳು ‘ಅಕ್ಷರ ಸಂಗಾತ’ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. 2022 ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ‘ಅಕ್ಷರ ಸಂಗಾತ’ ಪತ್ರಿಕೆಯ ನಾಲ್ಕನೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.  ಹಿರಿಯ ಕಥೆಗಾರರಾದ ಬಾನು ಮುಷ್ತಾಕ್ ಹಾಗೂ ಜಿ.ವಿ. ಆನಂದಮೂರ್ತಿ ತೀರ್ಪುಗಾರರಾಗಿದ್ದರು ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words:  akshara sangatha- Story Competition- Prize Announcement.