ಮೈಸೂರು, ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 60 ಜೊತೆ ಹಳ್ಳಿಕಾರ್ ಎತ್ತುಗಳೊಂದಿಗೆ ಆಗಮಿಸಿದ ನೂರಾರು ರೈತರು ದಸರಾ ಉಪ ಸಮಿತಿಯ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
12 ಗಂಟೆಯಾದರೂ ರೈತರಿಗೆ ಉಪಹಾರ ನೀಡಿಲ್ಲ, ರೈತರನ್ನು ಕಡೆಗಣಿಸಲಾಗಿದೆ. ಹಳ್ಳಿಕಾರ್ ಎತ್ತುಗಳಿಗೆ ನೀರು ಮೇವು ಸರಿಯಾಗಿ ಒದಗಿಸಿಲ್ಲ ಎಂದು ಆರೋಪಿಸಿ ನೂರಾರು ರೈತರು ಕುಕ್ಕರಹಳ್ಳಿ ಕೆರೆ ಪಕ್ಕದ ಕಾಂತರಾಜ ಅರಸು ರಸ್ತೆ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ರೈತ ದಸರಾದಲ್ಲಿ ಹಳ್ಳಿಕಾರ್ ಎತ್ತುಗಳ ಪ್ರದರ್ಶನಕ್ಕೆ ಕರೆಸಲಾಗಿತ್ತು, ಆದರೇ, ರೈತರು ಮಕ್ಕಳಂತೆ ಜೋಪಾನ ಮಾಡಿ ಸಾಕುವ ಎತ್ತುಗಳಿಗೆ ಕನಿಷ್ಠ ಉತ್ತಮವಾದ ಕುಡಿಯುವ ನೀರು ಒದಗಿಸಿಲ್ಲ, ಕಲುಷಿತ ನೀರು ಕೊಡಲಾಗುತ್ತಿದೆ. ಉತ್ತಮವಾದ ಮೇವು ನೀಡಿಲ್ಲ, ಶುಕ್ರವಾರ ರಾತ್ರಿ ನಾವು ರಾಸುಗಳಿಂದ ಬಂದಿರುವ ರೈತರಿಗೆ ಇಲ್ಲಿಯ ತನಕ ಉಪಹಾರವನ್ನೂ ಒದಗಿಸಿಲ್ಲ, ಈ ಸರ್ಕಾರ ಮತ್ತು ಜಿಲ್ಲಾಡಳಿತ, ದಸರಾ ಸಮಿತಿ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಕೇವಲ ಮನರಂಜನೆ ನೀಡುವ ಕಂಬಳಕ್ಕೆ ಆದ್ಯತೆ ನೀಡುತ್ತಿದೆ. ಆದರೇ, ಲೋಕಕ್ಕೆ ಅನ್ನ ನೀಡುವ ನಿಜವಾದ ರೈತರಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಕಿಡಿಕಾರಿದರು.
.ಜಿಲ್ಲಾಡಳಿತದ ವಿರುದ್ಧ ರೈತರು ದಿಢೀರ್ ರಸ್ತೆ ತಡೆ ನಡೆಸಿದ ಪರಿಣಾಮ ರಸ್ತೆ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಯಿತು.  ಈ ವೇಳೆ ಸ್ಥಳಕ್ಕೆ ಡಿಸಿಪಿ ಸುಂದರರಾಜು ಆಗಮಿಸಿ ರೈತರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು. ಒಬ್ಬ ಶಾಸಕ ಬಂದರೆ ನೀವು ಮತ್ತು ಅಧಿಕಾರಿಗಳು ಕೈಕಟ್ಟಿ ನಿಲ್ಲುತ್ತೀರಿ, ರೈತರನ್ನು ದಸರಾಕ್ಕೆ ಕರೆಸಿ ಅವರಿಗೆ ಅವಮಾನ ಮಾಡಿರುವ ಜಿಲ್ಲಾಡಳಿತ ಸ್ಥಳಕ್ಕೆ ಬರುವ ತನಕ ನಾವು ಎದ್ದೇಳುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದು ಘೋಷಣೆ ಕೂಗಿದರು, ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಪೊಲೀಸರ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕರ್ನಾಟಕ ರಾಜ್ಯ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಚಿನಕುರಳಿ ಸಿ.ಎಸ್.ಸೋಮೇಗೌಡ, ಬೇವಿನಕುಪ್ಪೆ ಅನೀಲ್ ಇತರರು ಇದ್ದರು.
ನೃಪತುಂಗ ರಸ್ತೆಯಲ್ಲಿರುವ ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರ ಜೊತೆ ಚರ್ಚಿಸಿ ಮನವಿ ಸಲ್ಲಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಎಲ್ಲಾ ವಿಷಯಗಳ ಬಗ್ಗೆ ಡಿಜಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಕಿಂಗ್ ಪಿನ್ ಬಗ್ಗೆ ಸಂಪೂರ್ಣ ಮಾಹಿತಿ ಡಿಜಿ&ಐಜಿಪಿಗೆ ಸಲ್ಲಿಸಿದ್ದೇನೆ ಎಂದರು.
ಸಿದ್ದರಾಮಯ್ಯ ನವರ ಹೆಸರು ಹಾಳು ಮಾಡುವುದಕ್ಕೆ ಸ್ಟಿಂಗ್ ಮಾಡಿದ್ದಾರೆ ಸಿದ್ದರಾಮಯ್ಯನವರು ಅದರಲ್ಲಿ ಭಾಗಿಯಾಗಿಲ್ಲ ಕೇಸ್ ನ ಕಿಂಗ್ ಪಿನ್ ನಿವೃತ್ತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಕಿಂಗ್ ಪಿನ್ ಜೊತೆ ಇಬ್ಬರು ಮೂವರು ನಾಯಕರು ಚರ್ಚಿಸಿದ್ದಾರೆ ಸಿದ್ದರಾಮಯ್ಯನವರಿಗಾದ್ರೂ ರಕ್ತ ಕುದಿಯುತ್ತಿಲ್ವಾ ಎಂದು ಹೆಚ್ ಡಿಕೆ ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಸೌಮ್ಯರೆಡ್ಡಿ, ತಮ್ಮ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ . ಇದೇ ವೇಳೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರೇ ಒಬ್ಬ ಮಹಿಳಾ ಸಚಿವರೂ ಇಲ್ಲದಿರುವ ಬಗ್ಗೆ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
20-08-2026ರಂದೇ ಈ ಸಂಬಂಧ ಸೌಮ್ಯರೆಡ್ಡಿ ಅವರು ಪತ್ರ ಬರೆದಿದ್ದು  ನಾನು ಈ ಹುದ್ದೆಯನ್ನು ವಹಿಸಿಕೊಂಡಾಗ ಕೇವಲ ಎರಡು ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸುವುದಾಗಿ ಒಪ್ಪಿಕೊಂಡಿದ್ದೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮಹಿಳೆಯರ ಆರೋಗ್ಯ, ಶಿಕ್ಷಣ, ಆರ್ಥಿಕ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರನ್ನು ಪಕ್ಷಕ್ಕೆ ಕರೆತರಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಮುಖ್ಯವಾಗಿ ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ತಳಮಟ್ಟದಲ್ಲಿ ಮಹಿಳೆಯರ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುವುದನ್ನು ಕಣ್ಣಾರೆ ಕಂಡಿದ್ದೇನೆ" ಎಂದು ತಿಳಿಸಿದ್ದಾರೆ.
"ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈವರೆಗೂ ಒಬ್ಬರೇ ಒಬ್ಬ ಮಹಿಳಾ ಸಚಿವರೂ ಇಲ್ಲದಿರುವ ವಿಚಾರವನ್ನು ಮತ್ತೊಮ್ಮೆ ಪಕ್ಷದ ವರಿಷ್ಠರ ಗಮನಕ್ಕೆ ತರಲು ನಾನು ಬಯಸುತ್ತೇನೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ನಾನು ಮುಂದುವರಿಯುತ್ತೇನೆ, 2028ರ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸುತ್ತೇನೆ. ನೂತನ ಅಧ್ಯಕ್ಷೆ ನೇಮಕವಾಗುವವರೆಗೂ ಈ ಹುದ್ದೆಯಲ್ಲಿ ಮುಂದುವರೆಯುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆ ಕಾಪಾಡಿಕೊಳ್ಳಬೇಕು. ಸ್ಟಿಂಗ್  ಯಾರು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.  ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್ ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಕೆಪಿಎಸ್ ಸಿ ಹಗರಣದಲ್ಲಿ ಅನೇಕ ಸಚಿವರು ಸಿಲಕುತ್ತಾರೆ ಈ ತನಿಖೆ ನಡೆದರೆ ಸರ್ಕಾರ ಪತನವಾಗಬಹುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್,  ಕಬ್ಬು ಬೆಳೆಗಾರರ ಜೊತೆ ಮಾತನಾಡಲು ಬೆಳಗಾವಿಗೆ ಹೋಗುತ್ತಿದ್ದೇನೆ.  ರೈತರ ಪಾಪ ಬಹಳ ಶ್ರಮ ಪಡುತ್ತಿದ್ದಾರೆ  . ಅವರ ಪರಿಸ್ಥಿತಿ ನಮಗೆ ಅರ್ಥ ಆಗುತ್ತದೆ. ಬೇಕಾದಷ್ಟು ಸಮಸ್ಯೆ ಇದೆ ಎಂದರು.
ಕಬ್ಬುಬೆಳಗಾರರ ಜೊತೆ ಮಾತನಾಡಿ ಬೇಡಿಕೆಗಳನ್ನ ತಿಳಿದುಕೊಳ್ಳುತ್ತೇನೆ.  ನನ್ನ ಕೈಯಲ್ಲಿ ಸಹಾಯ ಮಾಡೋಕೆ ಸಾಧ್ಯವಿದ್ದರೆ ಮಾಡುತ್ತೇನೆ.  ಇದು ರಾಷ್ಟ್ರ ಮಟ್ಟದ ಸಮಸ್ಯೆ ಬರೀ ರಾಜ್ಯದ್ದು ಅಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಮೈಸೂರು, ಅ.೧೭,೨೦೨೬: ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ, ಐಎಎಸ್‌ ಅಧಿಕಾರಿ ಸಿ.ಶಿಖಾ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 28ಕ್ಕೆ ಮುಂದೂಡಿದೆ.
ನಗರದ ಮೂರನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ದೂರುದಾರರಾದ ಐಎಎಸ್ ಅಧಿಕಾರಿ ಸಿ.ಶಿಖಾ ಅವರು ವಿಚಾರಣೆಗೆ ಖುದ್ದು ಹಾಜರಾಗದ ಹಿನ್ನೆಲೆಯಲ್ಲಿ ಮುಂದಿನ ದಿನಾಂಕ ನಿಗದಿಯಾಗಿದೆ.
ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಶಿಖಾ:
ಪ್ರಸ್ತುತ ಕೇಂದ್ರ ಸೇವೆಯಲ್ಲಿರುವ ಸಿ.ಶಿಖಾ ಅವರು ದೆಹಲಿಯಲ್ಲಿದ್ದು, ವಿಚಾರಣೆಗೆ ಖುದ್ದು ಹಾಜರಾಗುವಂತೆ ದೂರವಾಣಿ ಮೂಲಕ ಕೋರಲಾಗಿತ್ತು. ಆದರೆ, ತಾವು ರಜೆಯ ನಿಮಿತ್ತ ಕೇರಳದಲ್ಲಿರುವುದಾಗಿ ತಿಳಿಸಿದ ಅವರು, ವಿಚಾರಣೆಗೆ ಹಾಜರಾಗಲು ಮತ್ತೊಂದು ದಿನಾಂಕ ನಿಗದಿಪಡಿಸುವಂತೆ ಕೋರಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದರು.
ಈ ಸಂಬಂಧ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ, ವಿಚಾರಣೆಯನ್ನು ಮುಂದೂಡುವಂತೆ ಪೊಲೀಸರು ಕೋರಿದರು. ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 28ಕ್ಕೆ ನಿಗದಿಪಡಿಸಿತು.
ಏನಿದು ಪ್ರಕರಣ?
2016ರಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಮುಖ್ಯಮಂತ್ರಿಗಳು ಮೈಸೂರಿನ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ವೇಳೆ, ಅಂದಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರು ಅವರನ್ನು ಸ್ವಾಗತಿಸಲು ತೆರಳಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ಹಾಗೂ ಇತರರು ಜಿಲ್ಲಾಧಿಕಾರಿ ಸಿ.ಶಿಖಾ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಸಿ.ಶಿಖಾ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ನಡೆದಿತ್ತು ಎನ್ನಲಾದ ಈ ಘಟನೆ, ಅಂದಿನ ದಿನಗಳಲ್ಲಿ ಗಮನ ಸೆಳೆದಿತ್ತು. ಪ್ರಕರಣದ ವಿಚಾರಣೆ ಇದೀಗ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ದೂರುದಾರರ ಸಾಕ್ಷ್ಯ ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳತ್ತ ಗಮನ ನೆಟ್ಟಿದೆ.
ಈಗಾಗಲೇ ಇಬ್ಬರು ಅಧಿಕಾರಿಗಳ ಸಾಕ್ಷ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂದಿನ ಮೈಸೂರು ನಗರ ಪಾಲಿಕೆ ಆಯುಕ್ತರಾಗಿದ್ದ ಸಿ.ಜೆ.ಬೆಟಸೂರಮಠ ಹಾಗೂ ಮೈಸೂರು ತಾಲ್ಲೂಕಿನ ತಹಸೀಲ್ದಾರ್ ನವೀನ್ ಜೋಸೆಫ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸರ್ಕಾರದ ಪರ ಸಾಕ್ಷ್ಯ ನುಡಿದಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರರಾದ ಸಿ.ಶಿಖಾ ಅವರ ಹಾಜರಾತಿ ಮತ್ತು ಸಾಕ್ಷ್ಯ ಮುಂದಿನ ವಿಚಾರಣೆಯಲ್ಲಿ ಮಹತ್ವ ಪಡೆಯುವ ಸಾಧ್ಯತೆಯಿದೆ. ನವೆಂಬರ್ 28ರಂದು ನಡೆಯಲಿರುವ ವಿಚಾರಣೆಯಲ್ಲಿ ಪ್ರಕರಣದ ಮುಂದಿನ ಪ್ರಕ್ರಿಯೆಗಳು ಯಾವ ಹಂತಕ್ಕೆ ತಲುಪಲಿವೆ ಎಂಬುದನ್ನು ಕಾದುನೋಡಬೇಕಿದೆ.
— Just Kannada, ಮೈಸೂರು
KEY WORDS:
ಈ ಕುರಿತು ಮಾತನಾಡಿದ  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸ್ಟಿಂಗ್ ಆಪರೇಷನ್ ಒಳ್ಳೆಯ ಬೆಳವಣಗೆ ಅಲ್ಲ. ಒಬ್ಬ ವ್ಯಕ್ತಿಯನ್ನ ಚುನಾವಣೆಯಲ್ಲಿ ಸೋಲಿಸಬೇಕು ಸ್ಟಿಂಗ್ ಆಪರೇಷನ್ ಮಾಡಿ ಹಿಂದೆ ಸರಿಸೋದು ಅಲ್ಲ ಎಂದರು.
ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಣೆ ಸಂಬಂಧ,   ಸಿಎಂ ಸ್ಟಿಂಗ್ ಅಪರೇಷನ್ ಬಗ್ಗೆ  ಪ್ರಸ್ತಾಪ ಮಾಡಿ ಸುಮ್ಮನಾಗಿದ್ದಾರೆ. ಆ ಐವರು ಸಚಿವರು ಯಾರು ಅಂತಾ ಹೇಳಲಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ನಾಗರಭಾವಿಯಲ್ಲಿರುವ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (NLSIU) ದ ದಕ್ಷಿಣ ಬ್ಲಾಕ್‌, ಸಭಾಂಗಣ ಹಾಗೂ ವಿದ್ಯಾರ್ಥಿ ಕೇಂದ್ರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
"ನ್ಯಾಷನಲ್ ಲಾ ಸ್ಕೂಲ್ ಸ್ಥಾಪನೆಯಲ್ಲಿ ಕರ್ನಾಟಕ ನೇತೃತ್ವ ವಹಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ತಮ್ಮ ವಿದ್ಯಾರ್ಥಿ ನಾಯಕತ್ವದ ದಿನಗಳಲ್ಲಿ ಈ ಸಂಸ್ಥೆಯ ಪ್ರಾರಂಭವನ್ನು ದೇಶಾದ್ಯಂತ ಅಪಾರ ಉತ್ಸಾಹದೊಂದಿಗೆ ಸಂಭ್ರಮಿಸಿದ್ದೆವು. ಈ ಪ್ರತಿಷ್ಠಿತ ಸಂಸ್ಥೆಯನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ಸದಾ ಸಿದ್ಧವಾಗಿದೆ" ಎಂದು ತಿಳಿಸಿದರು.
ಜಮೀನು ಮಂಜೂರಾತಿ, ಆರ್ಥಿಕ ನೆರವಿನ ಭರವಸೆ
"ಕ್ಯಾಂಪಸ್ ಮೂಲಸೌಕರ್ಯಗಳ ಅಗತ್ಯಗಳಿಗೆ ಭೂಮಿಯ ಕೊರತೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. 7 ಎಕರೆ ಆಗಿರಲಿ ಅಥವಾ 10 ಎಕರೆ ಆಗಿರಲಿ, ನಿಮಗೆ ಏನು ಅಗತ್ಯವಿದೆಯೋ ಅದನ್ನು ನೀಡಲು ಸರ್ಕಾರ ಬದ್ಧವಾಗಿದೆ. ಜಮೀನು ಮಂಜೂರಾತಿ ಹಾಗೂ ಆರ್ಥಿಕ ನೆರವು ಎರಡನ್ನೂ ಒದಗಿಸಲಾಗುವುದು" ಎಂದು ಅಭಯ ನೀಡಿದರು.
ಕುಲಪತಿಗಳು ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿಗಳು, "ಸಂಸ್ಥೆಯ ಈ ಮೂಲಸೌಕರ್ಯ ವಿಸ್ತರಣೆಯು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ಭವಿಷ್ಯದ ನಾಯಕರನ್ನು ರೂಪಿಸಲು ನೆರವಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚೆನ್ನೈನ ಆಸ್ಪತ್ರೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ದೇವಾ ಕೊನೆಯುಸಿರೆಳೆದಿದ್ದಾರೆ. ತಮಿಳು ತೆಲಗು ಕನ್ನಡ ಮಲೆಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಮಾರು 400ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕನ್ನಡದಲ್ಲಿ ಸಿಂಹಾದ್ರಿಯ ಸಿಂಹ,  ಅಮೃತ ವರ್ಷಿಣಿ,  ಕೋಟಿಗೊಬ್ಬ. ಕದಂಬ ಸಿನಿಮಾಗಳಿಗೆ ದೇವಾ ಅವರು ಕೆಲಸ ಮಾಡಿದ್ದಾರೆ. ಇದೀಗ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಆವೇಶ ಸಿಟ್ಟಿನಲ್ಲಿ ರೈತರು ಏನೋ ಮಾತನಾಡಿರುತ್ತಾರೆ. ಅದರ ಬಗ್ಗೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಮತ್ತೊಮ್ಮೆ ರೈತರು ಬಂದರೆ ಅವರ ಜೊತೆ ಚರ್ಚಿಸುತ್ತೇನೆ  ಎಂದರು.
ಹಬ್ಬದ ಸಮಯದಲ್ಲಿ ದಯವಿಟ್ಟು ರೈತರು ಮನೆಗೆ ಹೋಗಬೇಕು. ಮನೆಗೆಳಿಗೆ ಹೋಗಿ ಹಬ್ಬ ಆಚರಿಸುವಂತೆ ನಮ್ಮ ಕೇಂದ್ರ ಸರ್ಕಾರ ತಕ್ಷಣ ಕಮಿಟಿಯನ್ನ ರಾಜ್ಯಕ್ಕೆ ಕಳಿಸಲಾಗುತ್ತೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಪೊಲೀಸರ ಕಾರ್ಯಕ್ಷಮತೆಯಿಂದ ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಯ ಬಂಧನವಾಯ್ತು. ಇದೀಗ ವರ್ಷದ ಬಳಿಕ ಆರೋಪಿಯ ಕೃತ್ಯ ಸಾಬೀತಾಗಿದೆ. ಆತನಿಗೆ ಮರಣ ದಂಡನೆ ಶಿಕ್ಷೆ ಪ್ರಕಟವಾಗಿದೆ. ಸಿದ್ದಲಿಂಗಪುರ ನಿವಾಸಿ ಕಾರ್ತಿಕ್‌ ಅಲಿಯಾಸ್‌ ಗರಡಿ ಕೃತ್ಯ ಎಸಗಿದ ಅಪರಾಧಿ.
ಪೊಕ್ಸೋ ನ್ಯಾಯಾಲಯದ ನ್ಯಾಯಧೀಶ ಆನಂದ್‌ ಪಿ.ಹೂಗಾಡೆ ಪ್ರಕರಣದ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿದರು.
ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ಹಾಗೂ ಆರೋಪಿ ಪರ ಜಿಲ್ಲಾ ಕಾನೂನು ಸೇವಾ ಘಟಕದಿಂದ ನಿಯೋಜನೆಗೊಂಡಿದ್ದ ವಕೀಲ ನವೀನ್‌ ವಾದಿಸಿದ್ದರು.
ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ DNA ಪರೀಕ್ಷಾ ವರದಿ ಮತ್ತು ಪೊಲೀಸರು ಸಂಗ್ರಹಿಸಿರುವ ಹಲವು ಸಾಕ್ಷ್ಯಗಳು. ಇವೆಲ್ಲವೂ ಪ್ರಕರಣದ ತನಿಖೆಯಲ್ಲಿ ಅಪರಾಧಿ ಪತ್ತೆಗೆ ಪ್ರಮುಖ ದಾಖಲೆಗಳಾಗಿವೆ.
ಸಯ್ಯಾಜಿರಾವ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ, ಪಾದಚಾರಿಗಳು ರಸ್ತೆಯನ್ನು ಸುರಕ್ಷಿತವಾಗಿ ದಾಟಲು ಈ ಸಬ್‌ ವೇ ಅನುಕೂಲ ಕಲ್ಪಿಸಲಿದೆ. ಸಾರ್ವಜನಿಕರು ರಸ್ತೆ ದಾಟುವಾಗ ಸಬ್‌ವೇಯನ್ನು ಬಳಸುವ ಮೂಲಕ ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು.
ಸಬ್‌ ವೇಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸಲು ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲು ಕಸದ ಬುಟ್ಟಿಗಳನ್ನು ಅಳವಡಿಸಲಾಗಿದ್ದು, ಸಬ್‌ ವೇಯ ಗೋಡೆಗಳಿಗೆ ಆಕರ್ಷಕ ಚಿತ್ರಕಲೆಯ ಮೂಲಕ ಸೌಂದರ್ಯವರ್ಧನೆ ಮಾಡಲಾಗಿದೆ.
ಪ್ರಮುಖ ಸೌಲಭ್ಯಗಳು
- ಸುರಕ್ಷಿತ ಪಾದಚಾರಿ ಸಂಚಾರ: ಸಯ್ಯಾಜಿರಾವ್ ರಸ್ತೆಯನ್ನು ಸುರಕ್ಷಿತವಾಗಿ ದಾಟಲು ಅನುಕೂಲ.
- ಸಿಸಿಟಿವಿ ನಿಗಾ ವ್ಯವಸ್ಥೆ: ಸಾರ್ವಜನಿಕರ ಸುರಕ್ಷತೆಗೆ ಸಹಕಾರಿ.
- ಕಸದ ಬುಟ್ಟಿಗಳ ವ್ಯವಸ್ಥೆ: ಸ್ವಚ್ಛತೆ ಕಾಪಾಡಲು ಅನುಕೂಲ.
- ಗೋಡೆ ಚಿತ್ರಕಲೆ: ಸಬ್‌ವೇಯ ಸೌಂದರ್ಯ ಹೆಚ್ಚಿಸುವುದರೊಂದಿಗೆ ಆಕರ್ಷಕ ವಾತಾವರಣ ನಿರ್ಮಾಣ.
ಸಯ್ಯಾಜಿರಾವ್ ರಸ್ತೆಯನ್ನು ದಾಟಲು ಪಾದಚಾರಿ ಸಬ್‌ ವೇಯನ್ನು ಬಳಸಬೇಕು. ಸಬ್‌ವೇಯ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವ ಮೂಲಕ ಸ್ವಚ್ಛ ಹಾಗೂ ಸುರಕ್ಷಿತ ಮೈಸೂರು ನಿರ್ಮಾಣಕ್ಕೆ ಸಹಕರಿಸಬೇಕು. ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೆ ಮೈಸೂರು ಮಹಾನಗರ ಪಾಲಿಕೆ ಬದ್ಧವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯು ತಿಳಿಸಿದೆ.
ಕೆಆರ್ ಎಸ್ ನ ಬೃಂದಾವನ ಉದ್ಯಾನದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು.
"ಕಾವೇರಿ ಆರತಿಯು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಉಪಕಾರ ಸ್ಮರಣೆ ಮಾಡಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ತಾಯಿ ಜನ್ಮ ನೀಡಿದರೆ ಕಾವೇರಿ ತಾಯಿ ಅನ್ನ ನೀಡುತ್ತಿದ್ದಾಳೆ. ಕಾವೇರಿ ತಾಯಿಯ ಮಡಿಲಲ್ಲಿ ಮಗು ಬೆಳೆದರೆ, ಇಡೀ ಕರುನಾಡು ಬೆಳೆಯುತ್ತದೆ. ನಾವು ಕಾವೇರಿಯ ಅಭಿವೃದ್ಧಿಗೆ, ಪ್ರತಿ ಹನಿ ಉಳಿಸಲು ಹೋರಾಟ ಮಾಡಿಕೊಂಡು ಬಂದಿದ್ದೇವೆ" ಎಂದರು.
"ಕಾವೇರಿ ನಮ್ಮ ಸಂಸ್ಕೃತಿ, ಪ್ರಕೃತಿ ಹಾಗೂ ನಮ್ಮ ಬದುಕಿನ ದೊಡ್ಡ ಶಕ್ತಿ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನೀರು ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಉಳಿದರೆ ಕರುನಾಡು ಉಳಿಯುತ್ತದೆ ಎಂದು ನಾವೆಲ್ಲ ಒಪ್ಪಿಕೊಂಡಿದ್ದೇವೆ" ಎಂದು ಹೇಳಿದರು.
ಕಾವೇರಿ ಸಮೃದ್ಧಿಯ ಸಂಕೇತ
"ಚಾಮುಂಡೇಶ್ವರಿ ಶಕ್ತಿಯ ಸಂಕೇತವಾದರೆ ಕಾವೇರಿ ಸಮೃದ್ಧಿಯ  ಸಂಕೇತ. ನಮ್ಮ ನಾಡಿನ ಸಂಸ್ಕೃತಿಗೆ  ನಮನ ಸಲ್ಲಿಸಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿಯೂ ಎಲ್ಲಾ ಸರ್ಕಾರಗಳು, ಸಾರ್ವಜನಿಕರು,  ಇಲಾಖೆಗಳು  ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು" ಎಂದರು.
"ಜಲ ಎಲ್ಲರ ಜೀವ. ಜೀವ ಜಲಕ್ಕೆ ನಮನ ಸಲ್ಲಿಸುವ ಕೆಲಸವನ್ನು ಮಾಡಬೇಕು, ಉಪಕಾರ ಸ್ಮರಣೆ ಸಲ್ಲಿಸಬೇಕು. ಕಾವೇರಿ  ಹುಟ್ಟಿ, ಸಮುದ್ರ ಸೇರುವವರೆಗೂ ಅದೆಷ್ಟೋ ನಗರ, ಜನರು ಉದ್ಯಮಗಳಿಗೆ ರಕ್ಷಣೆಯಾಗಿದೆ" ಎಂದು ತಿಳಿಸಿದರು.
"ಕನ್ನಂಬಾಡಿ ಕಟ್ಟೆ 347 ಕಿ.ಮೀ ಉದ್ದ,  37147 ಎಕರೆ ಭೂಮಿಗೆ ನೀರಾವರಿಯು ಒದಗಿಸುತ್ತಿದೆ. ಹಿಂದೆ ನಾನು ಜಲ ಸಂಪನ್ಮೂಲ ಸಚಿವನಾದ್ದ ಸಂದರ್ಭದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಅಳತೆ ಮಾಡುವ ಕೆಲಸವನ್ನು ವಹಿಸಲಾಗಿತ್ತು. ಈಗಾಗಲೇ ಇದರ ಗುರುತನ್ನು ಕೂಡ ಮಾಡಲಾಗಿದೆ. ಕಳೆದ ವರ್ಷ 341 ಟಿಎಂಸಿ ನೀರು ಸಮುದ್ರದ ಪಾಲಾಯಿತು. 177 ಟಿಎಂಸಿ ತಮಿಳುನಾಡಿಗೆ ಹರಿಸಬೇಕಿತ್ತು . ಈ ವರ್ಷ  ದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ ರಾಜ್ಯದಲ್ಲಿ ಕೃಷ್ಣ ಅಣೆಕಟ್ಟು ಬಿಟ್ಟರೆ ಬೇರೆ ಯಾವ ಅಣೆಕಟ್ಟು ತುಂಬಿಲ್ಲ" ಎಂದರು.
ಅಣೆಕಟ್ಟಿನ ಹೂಳು ತೆಗೆಸಲಾಗುವುದು
"ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಆಂಧ್ರಪ್ರದೇಶ ತೆಲಂಗಾಣ ಹಾಗೂ ನಾನು ಸೇರಿ ಭೇಟಿ ಮಾಡಿದ ಸಂದರ್ಭದಲ್ಲಿ  ಕಾವೇರಿ ಮತ್ತು ತುಂಗಭದ್ರ ಜಲಾಶಯಗಳಿಂದ ಹೂಳು ತೆಗೆಯಲು ಟೆಂಡರ್ ಕರೆಯಲು ಸೂಚಿಸಿದ್ದಾರೆ.ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಹೂಳು ತೆಗೆಯುವ ಕಾರ್ಯಕ್ರಮ ಪ್ರಾರಂಭವಾಗಿದ್ದು, ಡ್ರಜ್ಜಿಂಗ್ ಮೆಶೀನ್ ತರಿಸಿ ಹೂಳು ತೆಗೆಸಿ, ಮರಳು ಹಾಗೂ ಮಣ್ಣನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ನಾನು ಹಾಗೂ ನೀರಾವರಿ ಸಚಿವರು ತೆಲಂಗಾಣಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ವೀಕ್ಷಿಸಿ ನೀರು ವ್ಯರ್ಥವಾಗದಂತೆ ಪ್ರಯತ್ನ ಮಾಡಲಾಗುವುದು" ಎಂದರು.
ಪರಂಪರೆ ಕಾಪಾಡಲು ಕಾವೇರಿ ಆರತಿ ಕಾರ್ಯಕ್ರಮ
"ಕಳೆದ ವರ್ಷ ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಹಲವಾರು ಟೀಕೆಗಳು ವ್ಯಕ್ತವಾಯಿತು. ಕೆಲವರು ನ್ಯಾಯಾಲಯಕ್ಕೂ ಹೋದರು. ಕಾವೇರಿ ಆರತಿ ಯೋಜನೆ ಅಡಿ 100 ಕೋಟಿ ಹಣವನ್ನು ಮೀಸಲಿಟ್ಟು, ಕೆಳ ಭಾಗದಲ್ಲಿ ತೆರೆದ ಸ್ಟೇಡಿಯಂ ನಿರ್ಮಿಸಿ ಪ್ರತಿ ವಾರ ಆರತಿ ನಡೆದು ಜನರಿಗೆ ಧಾರ್ಮಿಕ ಶ್ರದ್ಧೆ ಮೂಡಿಸಲು, ಪರಂಪರೆ ಕಾಪಾಡಲು ಪ್ರಯತ್ನಿಸಲಾಯಿತು." ಎಂದರು
ಟೀಕೆಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ
"ನಾನು ಟೀಕೆಗಳನ್ನು ಸ್ವಾಗತಿಸುವವನು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದು ನಂಬಿರುವವನು . ರಾಜಕಾರಣ ಮಾಡುವವರಿಗೆ ವೈರಿಗಳು ಇರಬೇಕು, ಟೀಕೆ ಮಾಡುವವರೂ ಇರಬೇಕು. ವೈರಿಗಳು ಇಲ್ಲದಿದ್ದರೆ ಎಚ್ಚರಿಕೆಯಿಂದ ಬದುಕು ಮತ್ತು ಆಳ್ವಿಕೆಯನ್ನು ನಡೆಸಲು ಸಾಧ್ಯವಿಲ್ಲ. ಟೀಕೆ, ಅವಹೇಳನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಬದುಕಿನಲ್ಲಿ ನನಗೆ ಕಷ್ಟವೂ, ಗೊತ್ತು ಸುಖವು ಗೊತ್ತು. ರಾಜ್ಯದ ಜನತೆಗೆ ಸೇವೆ ಮಾಡಲು ರಾಜ್ಯದ ಜನತೆ ನನ್ನ ಹಾಗೂ ಸಿದ್ದರಾಮಯ್ಯನವರ ನಾಯಕತ್ವದಲ್ಲಿ 136 ಸ್ಥಾನಗಳನ್ನು ಕೊಟ್ಟು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ" ಎಂದರು.
ರಾಜ್ಯದ ಅಭಿವೃದ್ಧಿಯನ್ನು ವಿರೋಧಿಸುವವರಿಗೆ ಕಾವೇರಿ ಸದ್ಬುದ್ಧಿ ಕೊಡಲಿ
"ರಾಜ್ಯದ ಅಭಿವೃದ್ಧಿಯನ್ನು  ವಿರೋಧ ಮಾಡುವವರಿಗೆ ಕಾವೇರಿ ತಾಯಿ ಸದ್ಬುದ್ಧಿಯನ್ನು ಕೊಡಲಿ" ಎಂದರು.
ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗ್ಗಲು ಸಾಧ್ಯವಿಲ್ಲ
"ಹಿಂದೆ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು 45 ಸಾವಿರ ಕೋಟಿ ರೂ.ಗಳಷ್ಟು  ಸಾಲ ಮನ್ನಾ ಮಾಡಿದ್ದರು. ನಾನು  ಗ್ಯಾರಂಟಿ ಯೋಜನೆಗಳ ಅಡಿ ಇದುವರೆಗೂ 160 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಕೊಟ್ಟು, ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಲಾಗಿದೆ. ಟೀಕೆ ಮಾಡುವವರು ಮಾಡಲಿ,  ಅಸೂಯೆ ಪಡುವವರು ಪಟ್ಟುಕೊಳ್ಳಲಿ. ನನ್ನನ್ನು ಕೆಲವರು ಕನಕಪುರದ ಬಂಡೆ ಎಂದು ಕರೆಯುತ್ತಾರೆ.  ಬಂಡೆ ಪ್ರಕೃತಿ, ಅದನ್ನು ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕೆತ್ತನೆ ಮಾಡಿ ದೇವಿಯನ್ನು ರೂಪಿಸಿರುವುದಕ್ಕೆ ಪೂಜೆ  ಮಾಡಲು ಸಾಧ್ಯವಾಗಿದೆ. ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗಲು ಸಾಧ್ಯವಿಲ್ಲ. ರಾಜ್ಯದ ಜನರ ಋಣವನ್ನು ತೀರಿಸಲು ಕಂಕಣಬದ್ಧನಾಗಿದ್ದೇನೆ. ಶಪಥ, ಸಂಕಲ್ಪವನ್ನು ಮಾಡಿದ್ದೇನೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಪಾದಯಾತ್ರೆ ಕೈಗೊಂಡಾಗ ಅನೇಕರು ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಎಲ್ಲರ ಪ್ರಾರ್ಥನೆಯಿಂದ ನಮ್ಮ ಅ ವಧಿಯಲ್ಲಿಯೇ ಸುಪ್ರೀಂ ಕೋರ್ಟ್ ಅಣೆಕಟ್ಟು ಕಟ್ಟಲು  ಅನುಮತಿಯನ್ನು ಕೊಟ್ಟಿದೆ" ಎಂದರು
ಕಟ್ಟಕಡೆಯ  ರೈತನಿಗೆ ನೀರು ಒದಗಿಸಲಾಗುತ್ತಿದೆ
"ನಮ್ಮ ವಿಚಾರಗಳು ಜನರ ಬದುಕಿಗೋಸ್ಕರವಾಗಿದೆ. ಇಡೀ ವಿಶ್ವ ಇಂದು ಬೆಂಗಳೂರಿನತ್ತ ನೋಡುತ್ತಿದ್ದು ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದೇವೆ. ಈಗ 6 ನೇ ಹಂತವನ್ನು ತಲುಪಿದೆ. ರೈತರಿಗೆ ನೀರು ಕೊಡಲು ಕಿಂಚಿತ್ತು ಸಮಸ್ಯೆಯಾಗದಂತೆ ಕಟ್ಟ ಕಡೆಯ ರೈತನಿಗೆ ನೀರು ಒದಗಿಸಿಕೊಂಡು ಬರುತ್ತಿದ್ದೇವೆ" ಎಂದರು.
"ಕಾವೇರಿಗೆ ಆರತಿ ಬೆಳಗುತ್ತಿರುವುದು ನಮ್ಮ ಪುಣ್ಯ. ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕೂಡ ಎಲ್ಲರ ಭಾಗ್ಯ"ಎಂದು ಹೇಳಿದರು
ಕಾವೇರಿ ಆರತಿ ಕರ್ನಾಟಕಕ್ಕೆ ಕೀರ್ತಿ
"ಮೈಸೂರಿನ ಶಕ್ತಿ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲು ಆರಾಧನೆ ನಡೆಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 3.87 ಕೋಟಿ  ಜನರಿಗೆ ಬದುಕು ನೀಡಿದೆ. ಕಾವೇರಿ ಆರತಿ ಕರ್ನಾಟಕಕ್ಕೆ ಕೀರ್ತಿ. ಮನುಷ್ಯತ್ವವನ್ನು ರಕ್ಷಣೆ ಮಾಡಲು ನಾವೆಲ್ಲರೂ ಸೇರಿದ್ದೇವೆ. ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಭಗವಂತನಲ್ಲಿ ಪ್ರಾರ್ಥನೆ ಮಾಡಿರುವ ಫಲವಾಗಿ ಕಾವೇರಿ ತುಂಬಿ ರಾಜ್ಯಕ್ಕೆ ಶಕ್ತಿ ಕೊಡಲಿ. ಕೊಡಗಿನಲ್ಲಿ ಕಾವೇರಿ ಹುಟ್ಟಿ ಸಮುದ್ರ ಸೇರುವವರೆಗೆ ಲಕ್ಷಾಂತರ ಜನರಿಗೆ ಬದುಕು ನೀಡುತ್ತಿದ್ದಾಳೆ. ಕಾವೇರಿ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ" ಎಂದರು.
ದಸರಾ ಅಂಗವಾಗಿ ಪೊಲೀಸ್ ಬ್ಯಾಂಡ್ ಗೆ ಚಾಲನೆ ನೀಡಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು, ಗಾಂಧಿನಗರದ ಅಂಬೇಡ್ಕರ್ ಪ್ರತಿಮೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಕಷ್ಡು ಹೆಣ್ಣು ಮಕ್ಕಳಿಗೆ ಅನ್ಯಾಯ ಆಯಿತು. ಒಂದು ಬಾರಿಯಾದರೂ ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರ? ನಮ್ಮ ಮನೆಯ ಮಗ ಸಾಕಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದ ದಯವಿಟ್ಟು ಕ್ಷಮಿಸಿ ಎಂದು ಯಾವತ್ತಾದರೂ ಅನ್ಯಾಯಕ್ಕೊಳಗಾದ ಹೆಣ್ಣು ಮಕ್ಕಳನ್ನು  ಕೇಳಿದ್ದಾರ  ಎಂದು ತಿರುಗೇಟು ನೀಡಿದರು.
ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಯಾರೂ ಮಾತನಾಡಬಾರದು ಎಂದು ನ್ಯಾಯಾಲಯದಲ್ಲಿ ಸ್ಟೇ ತಂದರು.  ಈಗ ಯಾಕೆ ಬೇರೆಯವರ ಬಗ್ಗೆ ಮಾತನಾಡಬೇಕು ಎಂದು ಪ್ರಶ್ನಿಸಿದರು.
ನಿಮ್ಮ ಮನೆಯವರು ತಪ್ಪು ಮಾಡಿದರೆ ಯಾರು ಏನೂ ಮಾತನಾಡಬಾರದು, ಯಾರೋ ಫಾಲ್ಸ್ ವೀಡಿಯೋ ಬಿಟ್ಟರು ಎಂದಾಕ್ಷಣ,  ಪ್ರಧಾನಿ ನರೇಂದರಮ್ರ ಮೋದಿವರೆಗೂ ಕಂಪ್ಲೇಂಟ್ ಕೊಡಬಹುದು. ನನ್ನ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ವೈಯಕ್ತಿಕ ನಿಂದನೆ ಮಾಡಬಹುದು. ನಿಮಗೆ ಯಾವ  ನೈತಿಕತೆ ಇದೆ ಕುಮಾರಸ್ವಾಮಿಯವರೇ ಎಂದು ಕೇಳಿದರು.
ಸ್ಟಿಂಗ್ ಆಪರೇಷನ್ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದ್ದು ಯಾವುದೇ ಉನ್ನತ ಮಟ್ಟದ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರಿಯಾಂಕ ಖರ್ಗೆ ಉತ್ತರಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಬಗ್ಗೆ ಮಾತನಾಡಿ ಅವರ ಘನತೆಗೆ, ಕುರ್ಚಿಗೆ ಅವರೇ ಧಕ್ಕೆ ತಂದು ಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೆಪಿಎಸ್ಸಿ ಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾನೇ ಮಾಸ್ಟರ್ ಮೈಂಡ್ ಎಂದು ಹೇಳಿದ್ದರು. ನನ್ನ ವಿಕೆಟ್ ಬೀಳುತ್ತದೆ ಎಂದರು. ಈಗ ಹೊಸ ವಿಚಾರ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ದೆಹಲಿಯಲ್ಲಿ ಮಾಡಲು ಏನೂ ಕೆಲಸ ಇಲ್ಲ, ರಾಜ್ಯಕ್ಕೆ ಬರಬೇಕೆಂದು ಕಾಯುತ್ತಿದ್ದಾರೆ.  ಇಲ್ಲಿ ನಾಯಕತ್ವ ಸಿಗುತ್ತಿಲ್ಲ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಅಸೂಹೆಗೆ ಮದ್ದಿಲ್ಲ,ಹಾಗಾಗಿ ಏನೊ ಒಂದು ಹೇಳಬೇಕು ಅದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಿನ್ನೆ ಪೊಲೀಸ್ ಕಮೀಷನರ್ ಕಚೇರಿ ಬಳಿಗೆ ಹೋಗಿ  ಊರವರನ್ನೆಲ್ಲಾ ಬಾಯಿಗೆ ಬಂದಾಗೆ ಬೊಯ್ಯೋದು ಬಿಟ್ಟು ನಮ್ಮ ಬಳಿ ಇಂತಹ ದಾಖಲೆ ಇದೆ ಎಂದು ನೀಡಿದ್ದರೆ ಮುಗಿದೇ ಹೋಗುತ್ತಿತ್ತು.  ವಿಚಾರಣೆಗೆ ಅವರ ಬಲಗೈ ಬಂಟರು, ಸಮೀಪದವರನ್ನು ಕರೆದರೆ ಇವರಿಗೇನಾಯಿತು. ನಾವೇನು ಇವರ ಕಡೆಯವರನ್ನು ಬಂಧಿಸಿದ್ದೇವ? ತನಿಖೆ ಮಾಡಬೇಕಾದರೆ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ‌ ಅದಕ್ಕೆ ಹೀಗೆ ಮಾಡಿ ಹಾಗೆ ಮಾಡಿ ಎಂದರೆ ಮಾಡಲು ಆಗುತ್ತದ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರ ಬಳಿ ಗೃಹ ಸಚಿವರ ಪಾತ್ರ ಇದಿಯಾ, ಸಿಎಂ, ಮಾಜಿ ಸಿಎಂ ಅವರ ಪಾತ್ರ ಇದಿಯಾ ಅಥವಾ ಬೇರೆಯವರ ಪಾತ್ರ ಇದಿಯಾ  ಎಂಬುದರ  ಬಗ್ಗೆ ದಾಖಲೆ ಇದ್ದರೆ ಕೊಡಲಿ. ಅದು ಬಿಟ್ಟು ತನಿಖೆಗೆ ಅವರನ್ನು ಕರೆಸಿಲ್ಲ ಇವರನ್ನು ಕರೆಸಿಲ್ಲ ಎನ್ನುತ್ತಾರಲ್ಲ, ನಾವು ಯಾರನ್ನು ಕರೆಸಿಲ್ಲ ಎಂಬುದು ಇವರಿಗೆ ಗೊತ್ತ,  ಸಾಕ್ಷಿ, ಆಧಾರ ಇಲ್ಲದೆ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಬೇಕು. ಕುರ್ಚಿಯ ಘನತೆ ನಿಮಗೆ ಇಲ್ಲ ಎಂದ ಮೇಲೆ ನಮ್ಮಂತವರು ನಿಮಗೆ ಯಾಕೆ ಮರ್ಯಾದರ ಕೊಡಬೇಕು ಎಂದು ಕೇಳಿದರು.
ಈ ಮುಂಚೆ  ಬಿಜೆಪಿಯವರಿಗೆ ಅಸ್ಥಿತ್ವ ಉಳಿಸಿಕೊಳ್ಳಲು ನಾನು ಬೇಕಿತ್ತು. ಈಗ  ಜೆಡಿಎಸ್ ನವರಿಗೂ ನಾನು ಬೇಕಾಗಿದೆ.‌ಹಾಗಾಗಿ ಜೆಡಿಎಸ್ ನವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಸಾವನ್ನು ನಾನು ಬಯಸಲಿಲ್ಲ, ಅವರು ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿದರು.‌ನಾನು ಅದೆ ರೀತಿ ಅವರ ವಿರುದ್ಧ ಮಾತನಾಡಿದರೆ ಅವರಿಗೆ ಏನಾಗಬಹುದು, ಹೃದಯಾಘಾತ ಆಗಬಹುದು ಎಂದಿದ್ದೇನೆ. ಯಾಕೆಂದರೆ ಮೂರು ಬಾರಿ ಶಸ್ತ್ರಚಿಕತ್ಸೆಗೆ ಒಳಗಾಗಿದ್ದಾರೆ. ಸಾವು ಯಾರ ಕೈಯಲ್ಲೂ ಇಲ್ಲ, ಭಗವಂತನ‌ ಕೈಯಲ್ಲಿದೆ.  ನಾವು ವಾಪಸ್ ಕೊಡುವ ಸುದ್ದಿಗೆ ಯಾಕೆ ಮತ್ತೆ ಆಸ್ಪತ್ರೆ ಸೇರುತ್ತೀರ ಎಂದರು.
ಕುಮಾರಸ್ವಾಮಿ ಅವರು ಮಾಡಿದ್ದನ್ನ ಉಣ್ಣುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ಲ, ಅವರು ಬಾಯಿಗೆ ಬಂದಾಗೆ ಮಾತನಾಡಿದರೆ ನಾವು ಕೈಕಟ್ಟಿ ಕೂರಬೇಕ? ಆರ್.ಎಸ್.ಎಸ್ ಅವರ ಆಳುಮಕ್ಕಳು ಅವರಾಗಿದ್ದಾರೆ ನಾವಲ್ಲ ಎಂದು ತಿರುಗೇಟು ನೀಡಿದರು.
ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಿ ಎಂದು ಮಾತು ಶುರು ಮಾಡಿದ ಕುಮಾರಸ್ವಾಮಿ ಅವರು; ಒಮ್ಮೆ ಒಬ್ಬರು ಸರಕಾರಿ ಉದ್ಯೋಗಕ್ಕೆ ನೇಮಕವಾದರೆ ಅವರಿಗೆ 35 ವರ್ಷ ಸೇವಾವಧಿ ಇರುತ್ತದೆ. ಆದರೆ ಪ್ರತೀ ಕುಟುಂಬಕ್ಕೆ ತಲಾ ಒಂದು ಉದ್ಯೋಗ ಕಲ್ಪಿಸುವ ಉದ್ದೇಶದಿಂದ 35 ವರ್ಷದ ಸೇವಾವಧಿ ಬದಲಿಗೆ 10ರಿಂದ 15 ಅಥವಾ 20 ವರ್ಷಕ್ಕೆ ಇಳಿಸಬೇಕು. ಇಷ್ಟು ಮಿತಿಯನ್ನು ಹಾಕುವ ಮೂಲಕ ಉದ್ಯೋಗಗಳನ್ನು ಎಲ್ಲರಿಗೂ ಕೊಡುವ ಪ್ರಯತ್ನ ಮಾಡಬಹುದು ಎಂದು ಸಚಿವ ಹೆಚ್‌ ಡಿಕೆ  ಹೇಳಿದರು.
ಕೆಲಸದಿಂದ ನಿವೃತ್ತಿಯಾಗುವ ಉದ್ಯೋಗಿ ನಿವೃತ್ತಿ ಆದ ನಂತರ ದೊರೆಯುವ ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳಿಗೆ ಅರ್ಹನಾಗಿರುತ್ತಾನೆ. ಇದರಿಂದ ಉದ್ಯೋಗ ಸಿಗದೇ ಇರುವವರಿಗೆ ಅವಕಾಶ ದೊರೆಯುತ್ತದೆ ಹಾಗೂ ನಿರುದ್ಯೋಗ ನಿವಾರಣೆಯಲ್ಲಿ ದೊಡ್ಡ ಪ್ರಯತ್ನ ಮಾಡಿದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನಾನು ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ. ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಇಂಥ ಯೋಚನೆ ಕಾರ್ಯರೂಪಕ್ಕೆ ಬಂದರೆ ಹೇಗೆ ಎಂದು ನಾನು ಆಲೋಚನೆ ಮಾಡುತ್ತಿದ್ದೇನೆ. ನನ್ನ ಪ್ರಕಾರ ಪ್ರತಿ ಮನೆಗೂ ಕನಿಷ್ಠ ಒಂದು ಸರ್ಕಾರಿ ಕೆಲಸವಾದರೂ ದೊರೆಯಬೇಕು. ನನ್ನ ಆಲೋಚನೆಯನ್ನು ಜನರ ಮುಂದೆ ಇರಿಸಿದ್ದೇನೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲಿ ಎಂದು ಸಚಿವ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ನವರಾತ್ರಿ ಹಬ್ಬದ ಸಂದರ್ಭವಿದು. ಈ ಒಳ್ಳೆಯ ಸಂದರ್ಭದಲ್ಲಿ ಯುವಜನರ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ಚಿಂತನೆ ಮಾಡುತ್ತಿದ್ದೇನೆ. ನೀವೆಲ್ಲರೂ ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಈ ಬಗ್ಗೆ ಚರ್ಚೆ ಮಾಡಿ, ಈ ಬಗ್ಗೆ ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮ್ಮಲ್ಲಿ ನಿರುದ್ಯೋಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಸರಕಾರಿ ಮಟ್ಟದಲ್ಲಿ ಸಮರ್ಥರಿಗೆ ಉದ್ಯೋಗ ನೀಡಲು ಆಗುತ್ತಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಪಾರದರ್ಶತವಾಗಿ, ನ್ಯಾಯ ಸಮ್ಮತವಾಗಿ ಅರ್ಹರನ್ನು ಆಯ್ಕೆ ಮಾಡಿ ಸರ್ಕಾರಿ ಸೇವೆಗೆ ಕಳಿಸಬೇಕಾದ ಕೆಪಿಎಸ್ಸಿ ಭ್ರಷ್ಟಾಚಾರದ ಕೂಪವಾಗಿದೆ. ಹಣಕ್ಕಾಗಿ ಉದ್ಯೋಗವನ್ನು ಮಾರಿಕೊಳ್ಳಲಾಗುತ್ತಿದೆ. ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಂಸ್ಥೆಗೆ ಹೋಗುವ ಅಧಿಕಾರಿಗಳು ಕೂಡ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಸಚಿವ ಹೆಚ್‌ ಡಿ ಕುಮಾರಸ್ವಾಮಿ ದೂರಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು, ಪಶುವೈದ್ಯ ಇಲಾಖೆಯ ನೇಮಕಾತಿ ಸೇರಿದಂತೆ ಅನೇಕ ನೇಮಕ ಪ್ರಕ್ರಿಯೆಗಳಲ್ಲಿ ಅಗಾಧವಾದ ಭ್ರಷ್ಟಾಚಾರ ನಡೆದಿದೆ. ಅಲ್ಲದೆ ಕೆಎಎಸ್ ಆಯ್ಕೆ ಪ್ರಕ್ರಿಯೆ ಭ್ರಷ್ಟಾಚಾರದ ಮಹಾಕೂಪವಾಗಿದೆ. ಇಲ್ಲಿ ಹಣದ ವ್ಯವಹಾರ ಸೇರಿದಂತೆ ಸ್ವಜನ ಪಕ್ಷಪಾತ, ಜಾತಿ ವ್ಯಾಮೋಹದಿಂದ ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕೆಪಿಎಸ್ಸಿ ಕಾರ್ಯವೈಖರಿ ಬಗ್ಗೆ ಯುವಜನರ ಆಕ್ರೋಶ
ಈ ಸಂದರ್ಭದಲ್ಲಿ ಅನೇಕ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಚಿವರಲ್ಲಿ ದೂರುಗಳನ್ನು ಹೇಳಿಕೊಂಡರು. ಪರೀಕ್ಷಾ ವಿಧಾನ, ತಪ್ಪು ತಪ್ಪಾಗಿ ಮುದ್ರಣವಾಗುವ ಪ್ರಶ್ನೆ ಪತ್ರಿಕೆಗಳು, ಒಂಎಂಆರ್ ಶೀಟುಗಳ ತಿದ್ದುಪಡಿ ಸೇರಿದಂತೆ ಅನೇಕ ಅಕ್ರಮಗಳನ್ನು ಎಸಗಲಾಗಿದೆ ಎಂದು ಹೇಳಿದರು.
ನಮಗೆ ಈ ಸರ್ಕಾರದ ಮೇಲೆ ನಂಬಿಕೆಯೇ ಸತ್ತುಹೋಗಿದೆ. ನೋಟಿಫಿಕೇಶನ್ ಮಾಡುತ್ತಾರೆ, ಆದರೆ ಓದುವುದಕ್ಕೆ  ಸಮಯವನ್ನೇ ಕೊಡುವುದಿಲ್ಲ. ಉತ್ತರ ಕರ್ನಾಟಕದಿಂದ ಬಂದು ಬೆಂಗಳೂರಿನಲ್ಲಿ ತಿಂಗಳಾನುಗಟ್ಟಲೆ ಕಷ್ಟಪಟ್ಟು ಓದುತ್ತಿದ್ದೇವೆ. ಪೀಜಿಗಳಿಗೆ ಅಣೆಕಟ್ಟಲಾಗಿದೆ ಸಂಕಷ್ಟದಲ್ಲಿದ್ದೇವೆ. ನಮ್ಮ ಜೊತೆ ಕೆಪಿಎಸ್ಸಿ ಚೆಲ್ಲಾಟ ಆಡುತ್ತಿದೆ ಎಂದು ಉತ್ತರ ಕರ್ನಾಟಕದ ಅಭ್ಯರ್ಥಿ ಒಬ್ಬರು ಆರೋಪಿಸಿದರು.
ಯಾವಾಗ ಯಾವ ನೋಟಿಫಿಕೇಶನ್ ಆಗುತ್ತದೆ? ಅದರ ಅರ್ಹತೆ ಮತ್ತು ಮಾನದಂಡಗಳು ಏನು ಎಂಬುದು ಬಗ್ಗೆ ಕೆಪಿಎಸ್ಸಿಗೆ ಅರಿವು ಇಲ್ಲ. ಪದೇ ಪದೇ ಗೊಂದಲ ಉಂಟು ಮಾಡುತ್ತಾರೆ. ನಾವು ಪರೀಕ್ಷೆಗೆ ತಯಾರಾಗುತ್ತಿದ್ದರೆ ಯಾವುದೋ ಒಂದು ದಾಖಲೆಯನ್ನು ವೆಬ್ಸೈಟ್ ನಲ್ಲಿ ಹಾಕಿ ಗೊಂದಲ ಉಂಟುಮಾಡುತ್ತಾರೆ. ಅದು ಸರಿ ಹೋಗಿ ಇನ್ನೇನು ಪರೀಕ್ಷೆ ಬರೆಯಬೇಕು ಎನ್ನುವ ಸಮಯಕ್ಕೆ ಯಾರೋ ಒಬ್ಬರು ನ್ಯಾಯಾಲಯಕ್ಕೆ ಹೋಗುತ್ತಾರೆ. ಅಲ್ಲಿಗೆ ನಾವು ಶ್ರಮಪಟ್ಟು ಓದಿದ್ಯಲ್ಲ ವ್ಯರ್ಥವಾಗುತ್ತದೆ ಎಂದು ಇನ್ನೊಬ್ಬ ಅಭ್ಯರ್ಥಿ ಅಳಲು ತೋಡಿಕೊಂಡರು.
ಕೆಪಿಎಸ್‌ಸಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಜವಾಬ್ದಾರಿ ಕೊಟ್ಟರು ಯಾವುದೇ ಉಪಯೋಗ ಆಗುವುದಿಲ್ಲ. ಅಲ್ಲಿಗೂ ಗ್ಯಾನೆಂದ್ರ ಅವರಂತಹ ಅಪ್ರಾಮಾಣಿಕ ಅಧಿಕಾರಿಗಳು ಬಂದರೆ ಏನಾಗುತ್ತದೆ? ಸರ್ಕಾರದ ಮನಸ್ಥಿತಿ ಬದಲಾಗದೇ ಇರುವುದರಿಂದ ಅಧಿಕಾರಿಗಳು ಕೂಡ ಭ್ರಷ್ಟರಾಗುತ್ತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಬಡ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅವಕಾಶಗಳು ಸಿಗುತ್ತಿಲ್ಲ. ಕೆಪಿಎಸ್ಸಿಯಲ್ಲಿ ಕೂತಿರುವ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು ಮತ್ತು ಅವರ ಜೊತೆ ಸಂಬಂಧ ಹೊಂದಿರುವ ದಲ್ಲಾಳಿಗಳು ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದರು.
ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ; ಬೆಂಗಳೂರು ಎಲ್ಲರದ್ದು
ಉತ್ತರ ಕರ್ನಾಟಕದ ಮಂದಿ ಬೆಂಗಳೂರಿಗೆ ಬಂದು ಇಲ್ಲೇ ಇದ್ದು ಬಿಡುತ್ತಾರೆ, ಇಲ್ಲಿಂದ ವಾಪಸ್ ಹೋಗುವುದೇ ಇಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೊಟ್ಟ ಹೇಳಿಕೆಯಿಂದ ನಮಗೆ ನೋವಾಗಿದೆ. ಇಲ್ಲಿ ಕರ್ನಾಟಕ ಎನ್ನುವುದು ಒಂದು. ನಮ್ಮ ಭಾಷೆ ಒಂದೇ. ಉತ್ತರ ಮತ್ತು ದಕ್ಷಿಣ ಎನ್ನುವ ಪ್ರಶ್ನೆಯೇ ಇಲ್ಲ. ಬೆಂಗಳೂರು ಮಹಾನಗರ ನಮ್ಮೆಲ್ಲರದ್ದು. ಯಾರೋ ಒಬ್ಬರಿಗೆ ಸೀಮಿತವಾದ ನಗರವಲ್ಲ. ಹಾಗೆ ನೋಡಿದರೆ ಬೆಂಗಳೂರು ನಗರ ಅಭಿವೃದ್ಧಿ ಹೊಂದಿದೀಯ ಹೊರತು, ಬೆಂಗಳೂರು ಅಕ್ಕಪಕ್ಕದ ಅನೇಕ ಹಳ್ಳಿಗಳು ಉತ್ತರ ಕರ್ನಾಟಕದ ಹಳ್ಳಿಗಳಂತೆ ತೀರಾ ಹಿಂದುಳಿದಿವೆ ಎಂದು ಯಾದಗಿರಿಯ ವಿದ್ಯಾರ್ಥಿನಿ ಒಬ್ಬರು ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಜೆ.ಕೆ. ಮೈದಾನದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ಇವರ ವತಿಯಿಂದ ಆಯೋಜಿಸಿದ್ದ 'ರೈತ ದಸರಾ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ಹೇಳಿದಂತೆ ನಿಜವಾದ ಭಾರತ ಇರುವುದು ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ, ದೇಶವೇ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಶೇಕಡಾ 46ರಷ್ಟು ಉದ್ಯೋಗ ಸೃಷ್ಟಿಯಾಗುವುದು ಕೃಷಿಯಿಂದಲೇ ಮತ್ತು ಶೇಕಡಾ 18ರಷ್ಟು ಜಿಡಿಪಿ ಕೃಷಿಯಿಂದ ಬರುವುದರಿಂದ ರಾಷ್ಟ್ರದ ಆರ್ಥಿಕತೆಯಲ್ಲಿ ಕೃಷಿಗೆ ತನ್ನದೇ ಆದ ಮಹತ್ವವಿದೆ ಎಂದು ಅವರು ವಿವರಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ಸ್ಮರಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಯಾವುದೇ ಸರ್ಕಾರ ಅಥವಾ ಪಕ್ಷ ಅಧಿಕಾರಕ್ಕೆ ಬಂದರೂ ಕೃಷಿ ಕಾಯಕ ನಿರಂತರವಾಗಿ ನಡೆಯುತ್ತಲೇ ಇರಬೇಕು, ಈ ಹಿನ್ನೆಲೆಯಲ್ಲಿ ಕೃಷಿಕರೇ ನಿಜವಾದ ಕಾಯಕ ಯೋಗಿಗಳು ಎಂದು ಅಭಿಪ್ರಾಯಪಟ್ಟರು.
ಬರ ಪರಿಹಾರ ಹಾಗೂ ಕೃಷಿ ಉತ್ತೇಜನಕ್ಕೆ ಒತ್ತು ನೀಡಿದ್ದು
ರಾಜ್ಯ ಸರ್ಕಾರದ ವತಿಯಿಂದ ರೈತರಿಗೆ ಮೊದಲ ಹಂತದಲ್ಲಿ 1,250 ಕೋಟಿ ರೂಪಾಯಿ ಬರ ಪರಿಹಾರವನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಕೇಂದ್ರ ಸರ್ಕಾರವೂ ಕೂಡ ಸೂಕ್ತ ನೆರವು ನೀಡಬೇಕು ಹಾಗೂ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದರು.
ರೈತರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.
ರೈತ ದಸರಾ ಕಾರ್ಯಕ್ರಮದ ಅಂಗವಾಗಿ 40 ಕೃಷಿ ಮಳಿಗೆಗಳನ್ನು ಉದ್ಘಾಟಿಸಲಾಗಿದ್ದು. ಆಧುನಿಕ ಕೃಷಿ ತಂತ್ರಜ್ಞಾನದ ಕುರಿತು ಸಾಂಸ್ಕೃತಿಕ ತಂಡಗಳು ರೈತರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.
ವಿಶೇಷವಾಗಿ ಹಳ್ಳಿಕಾರ್ ಹಸು ತಳಿ ಪ್ರದರ್ಶನವಿದ್ದು , ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ರೈತರು ಉತ್ಸಾಹದಿಂದ ಭಾಗವಹಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ "ಹೊನ್ನಾರು" ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ, ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ರೈತರು ಹಾಗೂ ಜಿಲ್ಲೆಯ ಪ್ರಗತಿಪರ ರೈತ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್. ಬಸವಂತಪ್ಪ, ಪಿ.ಎಂ. ನರೇಂದ್ರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ರೈತ ದಸರಾ ಉಪ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಡಿ.ಎಂ, ಕಾರ್ಯಾಧ್ಯಕ್ಷ ಕೆ.ಎಚ್. ರವಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇಲ್ಲಿನ ಖನಿಜ ಭವನದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶುಕ್ರವಾರ ಯೋಜನೆಯ ಪರಾಮರ್ಶನಾ ಸಭೆ ನಡೆಸಿ ಸಚಿವ ಎಂ.ಬಿ ಪಾಟೀಲ್‌ ಮಾತನಾಡಿದರು. ಕ್ವಿನ್ ಸಿಟಿ ಯೋಜನೆ ನಮ್ಮ ಸರಕಾರದ ಕನಸಿನ ಕೂಸಾಗಿದೆ. ಇದರ ಸಾಕಾರಕ್ಕಾಗಿ ಕೈಗಾರಿಕಾ ಇಲಾಖೆಯು ಪ್ರತ್ಯೇಕ ತಂಡವನ್ನೇ ರಚಿಸಿ, ಇಡೀ ತಂಡದ ಸಿಬ್ಬಂದಿ ಯೋಜನಾ ಪ್ರದೇಶದಲ್ಲೇ ಕಾರ್ಯನಿರತವಾಗಬೇಕು. ಅಂದರೆ ಭೂಸ್ವಾಧೀನ, ಸಂಪರ್ಕ ರಸ್ತೆ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದಾರೆ.
ಕ್ವಿನ್ ಸಿಟಿ ಪ್ರದೇಶಕ್ಕೆ ಜಾಗತಿಕ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಕಾನೂನು ಶಾಲೆಗಳು, ಐಐಎಸ್ಸಿ ತರಹದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ನಾವೀನ್ಯತಾ ಸಂಸ್ಥೆಗಳು, ನವೋದ್ಯಮಗಳು ಬಂದು ಹೂಡಿಕೆ ಮಾಡಲಿವೆ. ಅಂದ ಮೇಲೆ ನಾವು ಇಲ್ಲಿ ಒದಗಿಸುವ ಸೌಕರ್ಯಗಳು ಕೂಡ ವಿಶ್ವದರ್ಜೆಯದೇ ಆಗಿರಬೇಕು. ಆದ್ದರಿಂದ ಯೋಜನೆಯ ವಿನ್ಯಾಸ ಸಂಸ್ಥೆಯ ಜತೆ ಸಮನ್ವಯ ಸಾಧಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಇಲ್ಲಿಗೆ ಬರುವ ಹೂಡಿಕೆದಾರರಿಗೆ ಉತ್ಕೃಷ್ಟ ವಸತಿ ಸೌಕರ್ಯ, ಕಾಮನ್ ಫೆಸಿಲಿಟಿ ಸೆಂಟರ್, ಕ್ರೀಡಾ ಸಂಕೀರ್ಣ, ಸಂಪರ್ಕ ರಸ್ತೆಗಳು, ಉದ್ಯಾನ, ವಿದ್ಯುತ್ ಸಂಪರ್ಕ ಮುಂತಾದ ಮೂಲಸೌಕರ್ಯಗಳನ್ನು ಕೊಡಬೇಕಾಗಿದೆ. ಇವುಗಳನ್ನು ಸಮರೋಪಾದಿಯಲ್ಲಿ ಮುಗಿಸಲು ಅಗತ್ಯವೆನಿಸಿದರೆ ಮತ್ತೊಂದು ಚೀಫ್ ಎಂಜಿನಿಯರ್ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ವಿವರಿಸಿದ್ದಾರೆ.
ಒಟ್ಟಾರೆ ಯೋಜನೆಯು 5 ಸಾವಿರ ಎಕರೆ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಇಲ್ಲಿಗೆ ಬರುವವರಲ್ಲಿ‌ ಕೆಲವರು ಅವರೇ ತಮ್ಮ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು. ಇನ್ನು ಕೆಲವರು ಬಿಲ್ಡ್-ಟು-ಸೂಟ್ ಮಾದರಿಯ ವ್ಯವಸ್ಥೆಯನ್ನು ಬಯಸಬಹುದು. ಮತ್ತೆ ಕೆಲವರು ನಿರ್ಮಾಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಕೆಐಎಡಿಬಿ ಇವೆಲ್ಲಕ್ಕೂ ಸಿದ್ಧವಾಗಿರಬೇಕು. ಒಟ್ಟಿನಲ್ಲಿ ಐದು ತಿಂಗಳಲ್ಲಿ ಗರಿಷ್ಠ ಮಟ್ಟದ ಪ್ರಗತಿಯನ್ನು ಸಾಧಿಸಲೇಬೇಕು ಎಂದು ಅವರು ಗುರಿ ನಿಗದಿಪಡಿಸಿದ್ದಾರೆ.
ಹೂಡಿಕೆದಾರರಿಗೆ ಯೋಜನೆಯ ವೈಶಿಷ್ಟ್ಯವನ್ನು ಮನದಟ್ಟು ಮಾಡಿಕೊಟ್ಟು, ತ್ವರಿತವಾಗಿ ಅವರಿಗೆ ನಿವೇಶನ ಒದಗಿಸಬೇಕು. ನಿಧಾನ ಮಾಡಿದರೆ ಬಂಡವಾಳ ಹೂಡುವವರು ಬೇರೆ ಕಡೆಗೆ ಹೋಗುತ್ತಾರೆ. ಎರಡನೆಯ ಹಂತದ ಕೆಲಸಗಳನ್ನು ಕೂಡ ಬೇಗನೆ ಕೈಗೆತ್ತಿಕೊಳ್ಳಬೇಕು. ಒಟ್ಟಾರೆಯಾಗಿ ಇಲ್ಲಿ 50 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದು ಬರುವಂತೆ ಎಲ್ಲರೂ ಶ್ರಮಿಸಬೇಕು ಎಂದು ಪಾಟೀಲರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ವಿಶೇಷ ಜಿಲ್ಲಾಧಿಕಾರಿ ರಘುನಂದನ್, ಮುಖ್ಯ ಎಂಜಿನಿಯರ್ ವೀರಭದ್ರಯ್ಯ ಉಪಸ್ಥಿತರಿದ್ದರು.‌
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ನಡೆದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸ್ವಾಗತ ಹಾಗೂ ನಿಕಟಪೂರ್ವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
"ಈ ಮೊದಲು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ರಮಾದೇವಿಯವರೊಂದಿಗೆ ಕೆಲಸ ಮಾಡಿದ್ದೇವೆ. ಈಗ ಡಾ. ಸುಧಾ ಯಾದವ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿದೆ. ಹೊಸ  ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ. ಜನ್ಮದಿನದಂದೇ ಅವರು ರಾಜ್ಯಪಾಲರಾಗಿ  ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ" ಎಂದು ಶುಭ ಕೋರಿದರು.
"ನಿಕಟ ಪೂರ್ವ ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರೊಂದಿಗೆ ಐದು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರು ನಮ್ಮೊಂದಿಗೆ ಸಹಕರಿಸಿದ್ದಾರೆ" ಎಂದು ಹೇಳಿದರು.
"ಕರ್ನಾಟಕ ತನ್ನ ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಗೆಹ್ಲೋಟ್ ಅವರ ಅವಧಿಯಲ್ಲಿ ಅವರಿಗೆ ರಾಜ್ಯದ ಉತ್ತಮ ಆಡಳಿತ, ಸಂಸ್ಕೃತಿ, ಪರಂಪರೆ ಹಾಗೂ ರಾಜ್ಯದ ಜನರ  ಕುರಿತು ಪರಿಚಯವಾಗಿದೆ. ಇಂದು ಅವರು ಅಧಿಕಾರವನ್ನು ಡಾ. ಸುಧಾ ಯಾದವ್ ಅವರಿಗೆ ಹಸ್ತಾಂತರ ಮಾಡಿದ್ದಾರೆ" ಎಂದರು.
"ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ  ಗೃಹ ಸಚಿವ ಅಮಿತ್ ಶಾ ಅವರು ನೂತನ  ರಾಜ್ಯಪಾಲರ ನೇಮಕದ ಬಗ್ಗೆ ನನಗೆ ದೂರವಾಣಿಯ ಮೂಲಕ ತಿಳಿಸಿದರು. ರಾಜ್ಯಪಾಲರ ನಿರ್ಧಾರಗಳನ್ನು ರಾಜ್ಯ ಸರ್ಕಾರ ಬಹುತೇಕ ಸ್ವೀಕಾರ ಮಾಡಿದೆ ಎಂದು ಅವರಿಗೆ  ತಿಳಿಸಿದ್ದೇನೆ" ಎಂದರು.
"ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬವಾಗಿರುವ  ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸಬೇಕು" ಎಂದು ಸಿಎಂ ಡಿಕೆ ಶಿವಕುಮಾರ್ ನೂತನ ರಾಜ್ಯಪಾಲರಿಗೆ ಆಹ್ವಾನಿಸಿದರು.
ರಾಜ್ಯದ ಜನರ ಜೀವನ ಸುಧಾರಣೆಗೆ ಮಾರ್ಗದರ್ಶನ
"ಗೆಹ್ಲೋಟ್ ಅವರನ್ನು ಅನೇಕ ವಿಷಯಗಳ ಬಗ್ಗೆ ನಾವು ಸಾಕಷ್ಟು ತೊಂದರೆ ನೀಡಿದ್ದರೂ ಅವರು ಸರ್ಕಾರಕ್ಕೆ ಬೆಂಬಲ ನೀಡಿದ್ದಲ್ಲದೆ, ರಾಜ್ಯದ ಜನರ ಜೀವನ ಸುಧಾರಣೆ ಮಾಡುವ ನಿಟ್ಟಿನಲ್ಲಿ  ಮಾರ್ಗದರ್ಶನವನ್ನು ಕೂಡ ಮಾಡಿದ್ದರು. ಕರ್ನಾಟಕ ಆರ್ಥಿಕ, ತಾಂತ್ರಿಕ, ಉತ್ತಮ ಆಡಳಿತ ಸೇರಿದಂತೆ  ಎಲ್ಲಾ ವಲಯಗಳಲ್ಲಿಯೂ ದೇಶಕ್ಕೆ ಬಹುದೊಡ್ಡ ಶಕ್ತಿ ಮತ್ತು ಕೊಡುಗೆ ನೀಡುತ್ತಿದೆ" ಎಂದರು.
"ರಾಜ್ಯದ ಅಧಿಕಾರಿ ವರ್ಗವೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಆಡಳಿತ ವ್ಯವಸ್ಥೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದು,  ನಿಮ್ಮ ಸಹಕಾರಕ್ಕೆ ಧನ್ಯವಾದಗಳು" ಎಂದರು.‌
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಹಳ ಪರಿವರ್ತನೆಯಾಗಿದೆ.  ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಬಿಲ್‌ ಗಾಗಿ ಹೋರಾಡುತ್ತಿದ್ದರು.  ಎಥೆನಾಲ್‌ ಆರಂಭವಾದ ಮೇಲೆ ರೈತರಿಗೆ ನಿರಂತರವಾಗಿ ಪಾವತಿ  ಮಾಡಲಾಗುತ್ತಿದೆ. ಕಾಂಗ್ರೆಸ್‌ ಅಧಿಕಾರ ನೀಡಿದಾಗ ಎಥೆನಾಲ್‌ ಮಿಶ್ರಣ 1.5% ಇತ್ತು.  ದೇಶದಲ್ಲಿ 38 ಕೋಟಿ ಲೀಟರ್‌ ಎಥೆನಾಲ್‌ ಖರೀದಿ ಆಗುತ್ತಿತ್ತು,   ಇವಾಗ 1200 ಕೋಟಿ ಲೀಟರ್‌ ಎಥೆನಾಲ್‌ ಖರೀದಿಸುತ್ತಿದ್ದೇವೆ. ಕಬ್ಬಿನಿಂದ ಉತ್ಪಾದನೆ ಆಗುತ್ತಿರುವ  ಎಥೆನಾಲ್‌ ಖರೀದಿ ಮಾಡುತ್ತಿದ್ದೇವೆ. ಎಂದರು.
ಎಥೆನಾಲ್‌ ಖರೀದಿಯಲ್ಲಿ ರಾಜ್ಯ ಸರ್ಕಾರ ತಮ್ಮ ಜಿಎಸ್‌ ಟಿ ತೆಗೆದುಕೊಳ್ತಾರೆ. ಕಬ್ಬು ತೂಕದಲ್ಲಿ ಆಗುತ್ತಿರುವ ಮೋಸ ತಡೆಯುವ ಕೆಲಸ ಮಾಡುತ್ತಿಲ್ಲ.  ಹರಿಯಾಣ, ಪಂಜಾಬ್‌, ಉತ್ತರ ಖಂಡ್‌ ನಲ್ಲಿ ಎಸ್‌ ಎಪಿ ಕೊಟ್ಟಿದ್ದಾರೆ.  ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಎಎಸ್‌ ಪಿ ಕೊಟ್ಟಿಲ್ಲ.  ಎಂಎಸ್‌ ಪಿ ಕೊಡಬೇಕೆಂದು ಕಬ್ಬು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.  ನಾವು ಈಗಾಗಲೇ ಸಮಿತಿ ರಚಿಸಿದ್ದೇವೆ ಸೋಮವಾರ ಸಭೆ ನಡೆಯಲಿದೆ. ತುರ್ತು ನಿರ್ಣಯ ಕೈಗೊಳ್ಳುತ್ತಾರೆ. ಉಳಿದ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನ ನಿಯೋಜನೆ ಮಾಡಿದ್ದೇವೆ.  ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌, ಹೆಚ್‌ ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿಲ್ಲ. ನಾನು ಯಾವುದಕ್ಕೂ ಉತ್ತರ ಕೊಡಲ್ಲ. ಕಾಲವೇ ಉತ್ತರಿಸುತ್ತೇ. . ಗೃಹ ಇಲಾಖೆಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಅವರು ನೋಡುತ್ತಾರೆ ಎಂದರು.
ಕೆಆರ್‌ ಎಸ್‌ ನಲ್ಲಿ ಕಾವೇರಿ ಆರತಿ ಇದೆ ನಾನು ಹೋಗುತ್ತಿದ್ದೇನೆ. ಇಂದು ಖುಷಿಯ ದಿನ ನೂತನ ರಾಜ್ಯಪಾಲರು ಅಧಿಕಾರ ಸ್ವೀಕರಿಸಿದ್ದಾರೆ.  ನಿಕಟಪೂರ್ವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಬೀಳ್ಕೊಡುಗೆ ನೀಡಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು.