ವಿದ್ಯುತ್ ದೀಪಗಳಿಂದ ಜಗಮಗಿಸುವ ಮೈಸೂರಿನ ‘ ಡ್ರೋನ್ ದರ್ಶನ ‘ ಕ್ಕೆ ಮುಂದಾಗಿದೆ ಸೆಸ್ಕಾಂ..!

 

ಮೈಸೂರು,ಅ,13,2021 (www.justkannada.in news ): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವ ಸಂಭ್ರಮ ಮನೆ ಮಾಡಿದ್ದು ನಗರದೆಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ದೀಪಾಲಂಕಾರದ ಸೊಬಗನ್ನು ಶಾಶ್ವತವಾಗಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಸೆಸ್ಕಾಂ ಮುಂದಾಗಿದೆ.

ಸಾರ್ವಜನಿಕರಿಗೆ ದಸರಾ ದೀಪಾಲಂಕಾರ ವೀಕ್ಷಣೆಗಾಗಿ ರಾತ್ರಿ ಹತ್ತು ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಜನರು ಆಗಮಿಸಿ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಅರಮನೆ ನಗರಿಯನ್ನ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಮೈಸೂರಿನ ಈ ಸೊಬಗನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಸೆಸ್ಕಾಂ ಮುಂದಾಗಿದೆ. ಅದಕ್ಕಾಗಿ ದೀಪಾಲಂಕಾರವನ್ನು ವೀಡಿಯೋ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಪರಿಣಾಮ ನಿನ್ನೆ (ಮಂಗಳವಾರ ) ಮಾತ್ರ ರಾತ್ರಿ ಒಂದು ಗಂಟೆಯಿಂದ ಎರಡು ಗಂಟೆಯವರೆಗೂ ನಗರದ ಸಯ್ಯಾಜಿರಾವ್ ರಸ್ತೆ ಮತ್ತು ಅರಸು ರಸ್ತೆಯಲ್ಲಿ ವಿದ್ಯುತ್ ದೀಪ ಝಗಮಗಿಸಿವೆ.

ನಗರದ ಪ್ರಮುಖಬೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ರಾತ್ರಿ ಹತ್ತು ಗಂಟೆಯವರೆಗೆ ಮಾತ್ರ ದೀಪಗಳನ್ನು ಬೆಳಗಿಸಲು ಅನುಮತಿ ನೀಡಲಾಗಿದೆ. ಆದರೆ ನಿನ್ನೆ ಮಾತ್ರ ಚೆಸ್ಕಾಂ ನ ಡಾಕ್ಯುಮೆಂಟೇಷನ್ ಗಾಗಿ ರಾತ್ರಿ ಒಂದು ಗಂಟೆವರೆಗೆ ವಿದ್ಯುತ್ ದೀಪಗಳು ಬೆಳಗಿದ್ದು, ಇದರ ಚಿತ್ರೀಕರಣಕ್ಕಾಗಿ ಡ್ರೋಣ್ ಸಹ ಹಾರಾಟ ನಡೆಸಿವೆ.

ಈ ಬಗ್ಗೆ ‘ ಜಸ್ಟ್ ಕನ್ನಡ’ ಜತೆ ಮಾತನಾಡಿದ ಚೆಸ್ಕಾಂ ಜನರಲ್ ಮ್ಯಾನೇಜರ್ ಮುನಿಗೋಪಾಲ್ ರಾಜು ಅವರು ಹೇಳಿದಿಷ್ಟು…

ಇಲಾಖೆ ವತಿಯಿಂದ ವಿದ್ಯುತ್ ದೀಪಾಲಂಕಾರ ಡಾಕ್ಯುಮೆಂಟೇಷನ್ ಮಾಡಬೇಕಾಗಿದೆ. ಮಳೆ ಮತ್ತು ಟ್ರಾಫಿಕ್ ಇಲ್ಲದ ವೇಳೆ ವಿದ್ಯುತ್ ದೀಪಾಲಂಕಾರ ಸೆರೆ ಹಿಡಿಯಬೇಕಾಗಿದೆ. ಆದರೆ ರಾತ್ರಿ ವೇಳೆ ಹೆಚ್ಚಾಗಿ ಜನರು ದೀಪಾಲಂಕಾರ ವೀಕ್ಷಿಸಲು ಆಗಮಿಸುತ್ತಾರೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿ ವಿದ್ಯುತ್ ದೀಪಾಲಂಕಾರ ಸೆರೆ ಹಿಡಿಯಲು ತೊಂದರೆಯಾಗುತ್ತದೆ. ಹೀಗಾಗಿ ಟ್ರಾಫಿಕ್ ಕಡಿಮೆಯಾದ ಬಳಿಕ ವೃತ್ತಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಕೆಲ ಸಮಯಗಳ ಕಾಲ ವಿದ್ಯುತ್ ದೀಪಗಳನ್ನ ಬೆಳಗಿಸಲು ಸೆಸ್ಕಾಂಗೆ ಸೂಚಿಸಲಾಗಿತ್ತು ಎಂದರು.

key words : Mysore-dasara-lighting-drone-shooting-cescom-Karnataka