ಅರಮನೆಯಲ್ಲಿ ರಾಜವಂಶಸ್ಥರ ಸಾಂಪ್ರದಾಯಿಕ ಖಾಸಗಿ ದರ್ಬಾರ್

ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ಮೈಸೂರು ಅರಮನೆಯಲ್ಲಿ ನವರಾತ್ರಿ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಖಾಸಗಿ ದರ್ಬಾರ್ ಸೇರಿದಂತೆ ನಾನಾ ಧಾರ್ಮಿಕ ವಿಧಾನಗಳನ್ನು ರಾಜವಂಶಸ್ಥ ಯದುವೀರ ಒಡೆಯರ್ ನೆರವೇರಿಸುತ್ತಿದ್ದಾರೆ.

ಇಲ್ಲಿದೆ ಅದರ ಸಕ್ಷಿಪ್ತ ಮಾಹಿತಿ…

* ಮುಂಜಾನೆ‌ 5.10ರಿಂದ 5.30ರೊಳಗೆ ರತ್ನ ಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನಡೆಯಿತು.

*ಬೆಳಿಗ್ಗೆ 8.05ರಿಂದ 8.30ರೊಳಗೆ ಚಾಮುಂಡಿ ತೊಟ್ಟಿಯಲ್ಲಿ ಖಾಸಗಿ ದರ್ಬಾರ್ ನಡೆಸಲಿರುವ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ಮಾಡಲಾಯಿತು.

*ವಾಣಿವಿಲಾಸ ದೇವರಮನೆಯಲ್ಲಿ ರಾಜಕುಮಾರಿ ತ್ರಿಷಿಕಾಕುಮಾರಿ ಅವರಿಗೂ ಕಂಕಣ ಧಾರಣೆ, ಬಳಿಕ ಚಾಮುಂಡಿ ತೊಟ್ಟಿಗೆ ಆಗಮನ…

*ಬೆಳಿಗ್ಗೆ 9.30ಕ್ಕೆ ಸವಾರ್ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನ. ಬೆಳಿಗ್ಗೆ 9.50ರಿಂದ 10.35ರೊಳಗೆ ಕಳಸಪೂಜೆ ಮತ್ತು ರಾಜವಂಶಸ್ಥರ ಸಿಂಹಾಸನಾರೋಹಣ ಬಳಿಕ 30 ನಿಮಿಷಗಳ ಕಾಲ ನಡೆಯಲಿರುವ ಖಾಸಗಿ ದರ್ಬಾರ್

*ಖಾಸಗಿ ದರ್ಬಾರ್ ನಂತರ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಉತ್ಸವ