ಇಬ್ಬರು ಡ್ರಗ್ ಪೆಡ್ಲರ್ ಬಂಧನ: 4 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ…

ಬೆಂಗಳೂರು,ಸೆಪ್ಟಂಬರ್,18,2020(www.justkannada.in): ಡ್ರಗ್ಸ್ ಜಾಲದ ಮೇಲೆ ಬೆಂಗಳೂರು ಸಿಸಿಬಿ ಮಾದಕ ದ್ರವ್ಯ ನಿಗ್ರಹ ತಂಡ ದಾಳಿ ನಡೆಸಿಇಬ್ಬರು ಡ್ರಗ್ ಪೆಡ್ಲರ್ ಗಳನ್ನ ಬಂಧಿಸಿ ಸುಮಾರು 4 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.jk-logo-justkannada-logo

ಜಾನ್ ನಿಕೋಲಸ್ (21), ಇರ್ಫಾನ್ ಶೇಖ್( 29) ಬಂಧಿತ ಆರೋಪಿಗಳು. ಬಂಧಿತರ ಬಳಿ ಇದ್ದ 4 ಲಕ್ಷ ಮೌಲ್ಯದ ಟಿಹೆಚ್ ಸಿ(50) ಜೆಲ್ಲಿಗಳು, 34 ಎಕ್ಸಟಸಿ ಪಿಲ್ಸ್ ಗಳು ಮತ್ತು 27 ಎಲ್ ಎಸ್ ಡಿ ಸ್ಟ್ರಿಪ್ಸ್ ಗಳು 2 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ್ದ ಒಂದು ಡಸ್ಟನ್ ಕಾರನ್ನ ವಶಕ್ಕೆ ಪಡೆಯಲಾಗಿದೆ.two-drug-peddlers-detained-4-lakhs-worth-drugs-seized

ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂ.ಜಿ ರಸ್ತೆಯ ಆರ್ ಎಸ್ ಐ ಕಾಂಪೌಂಡ್ ಬಳಿ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಮಾದಕ ವಸ್ತುಗಳನ್ನ ಇಟ್ಟುಕೊಂಡು ಸಾರ್ವಜನಿಕವಾಗಿ  ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು.  ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

Key words: Two -drug peddlers- detained- 4 lakhs worth –drugs- seized.