ಶಿಲ್ಪಾ ಶೆಟ್ಟಿ ತೆಲುಗು ರಿಮೇಕ್ ಚಿತ್ರದ ಮೂಲಕ ಬಿಗ್ ಸ್ಕ್ರೀನ್’ಗೆ ರೀ ಎಂಟ್ರಿ !

Promotion

ಬೆಂಗಳೂರು, ಜೂನ್ 11, 2020 (www.justkannada.in): ಶಿಲ್ಪಾ ಶೆಟ್ಟಿ ತೆಲುಗು ರಿಮೇಕ್ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಕಾಣಸಿಗಲಿದ್ದಾರೆ.

2018ರಲ್ಲಿ ರಿಲೀಸ್ ಆಗಿದ್ದ ಶ್ರೀರಾಮ್ ರಾಘವನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಅಂಧಾಧುನ್ ಸಿನಿಮಾದಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ. ಪಿಯಾನೋ ನುಡಿಸುವ ಓರ್ವ ಅಂಧ ಮತ್ತು ಅಕ್ರಮ ಸಂಬಂಧಕ್ಕೆ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿಯ ಥ್ರಿಲಿಂಗ್ ಸ್ಟೋರಿ ಇದಾಗಿತ್ತು.

ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿ ತಬು, ರಾಧಿಕಾ ಆಪ್ಟೆ, ನಟ ಆಯುಷ್ಮಾನ್ ಖುರಾನಾ ಬಣ್ಣ ಹಚ್ಚಿದ್ದರು.
ಇದೀಗ ಈ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ನಟಿ ತಬು ಪಾತ್ರವನ್ನ ಈ ಚಿತ್ರದಲ್ಲಿ ಶಿಲ್ಪಾಶೆಟ್ಟಿ ನಿಭಾಯಿಸಲಿದ್ದಾರಂತೆ.