ಮತ್ತೆ ಒಂದಾದ ದಿಗಂತ್-ನಿಧಿ ಸುಬ್ಬಯ್ಯ ಜೋಡಿ!

Promotion

ಬೆಂಗಳೂರು, ಸೆಪ್ಟೆಂಬರ್ 20, 2022 (www.justkannada.in): ದಿಗಂತ್ ಮತ್ತು ನಿಧಿ ಸುಬ್ಬಯ್ಯ ಜೋಡಿ ಮತ್ತೆ ಒಂದಾಗಿದೆ. ಪಂಚರಂಗಿ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಡು ಗಮನ ಸೆಳೆದ ಈ ಜೋಡಿ ಬಹಳ ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಡೈರೆಕ್ಟರ್ ಗುರುದತ್ ಗಾಣಿಗ ಒಂದಷ್ಟು ವಿಷಯಗಳನ್ನ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ. ನಿಧಿ ಈ ಚಿತ್ರದಲ್ಲಿ ದಿಗಂತ್ ಪಾತ್ರಕ್ಕೆ ಪೇರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

12 ವರ್ಷದ ಬಳಿಕ ಈ ಕಲಾವಿದರು ನಮ್ಮ ಚಿತ್ರದ ಮೂಲಕವೇ ಜೋಡಿ ಆಗಿದ್ದಾರೆ ಅನ್ನೋದೇ ವಿಶೇಷ ಅಂತಲೇ ಗುರುದತ್ ಗಾಣಿಗ ಹೇಳಿಕೊಂಡಿದ್ದಾರೆ.

ಈ ಚಿತ್ರದ ಮುಹೂರ್ತ ಬೆಂಗಳೂರಿನ ದೇವಸ್ಥಾನದಲ್ಲಿ ನೆರವೇರಿದೆ. ಬಳಿಕವೇ ಚಿತ್ರೀಕರಣದಲ್ಲೂ ಸಿನಿಮಾ ತಂಡ ಮಗ್ನವಾಗಿದ್ದು, ನಿಧಿ ಸುಬ್ಬಯ್ಯ ಅವರ ಪಾತ್ರದ ಪ್ರಮುಖ ಸೀನ್​​ಗಳನ್ನ ಬೆಂಗಳೂರಿನ ಅಪಾರ್ಟ್​ಮೆಂಟ್​ ನಲ್ಲಿ ಚಿತ್ರೀಕರಣ ಮಾಡುತ್ತಿದೆ.