ಧ್ರುವ-ಪ್ರೇಮ್ ಕಾಂಬಿನೇಶನ್’ನ ‘ಕೆಡಿ’ ಟೈಟಲ್ ರಿವೀಲ್

Promotion

ಬೆಂಗಳೂರು, ಅಕ್ಟೋಬರ್ 21, 2022 (www.justkannada.in):ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ.

ʻಕೆಡಿ ʼಎಂದು ಸಿನಿಮಾಗೆ ಟೈಟಲ್‌ ಇಡಲಾಗಿದೆ. ʻದಿ ಡೆವಿಲ್‌ʼ ಎಂಬ ಅಡಿ ಬರಹ ಕೂಡ ಇದೆ. ವಿಶೇಷ ಎಂದರೆ ಪರಭಾಷಾ ಖ್ಯಾತನಾಮ ನಟರು ಟೈಟಲ್ ರಿಲೀಸ್ ಮಾಡಿದ್ದಾರೆ.

ʻಸತ್ತರೆ ವೀರ ಮರಣ, ಗೆದ್ದರೆ ಸಿಂಹಾಸನ, ಯುದ್ಧ ಶುರು ಮಾಡಣʼ ಎಂಬ ಮಾಸ್‌ ಡೈಲಾಗ್‌ ಮೂಲಕ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ.

ಸಂಜಯ್ ದತ್ ಮೊದಲಾದ ಪರಭಾಷೆಯ ಸ್ಟಾರ್​ಗಳು ಆಗಮಿಸಿ ಈ ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ.