Dasara- 2021 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

MYSORE DASARA: ಜಂಬೂಸವಾರಿ ಅ.12 ಕ್ಕೆ ;18 ಆನೆಗಳ ʼ ಗಜ ಪಡೆʼ ಶಾರ್ಟ್‌ ಲಿಸ್ಟ್‌ ರೆಡಿ..!
It is proposed to finalize 18 elephants, including 14 elephants and an additional four elephants, who will take part in the Jumbo Savary procession this time. These elephants will enter Mysuru on August 9 or 11. The first batch will have nine elephants.

ಮೈಸೂರು, ಜು.20,2024: (www.justkannada.in news)  ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಗಜಪಡೆ ಆಯ್ಕೆಗೆ ಚಾಲನೆ.

ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 14 ಆನೆ, ಹೆಚ್ಚುವರಿ ನಾಲ್ಕು ಆನೆ ಸೇರಿದಂತೆ 18 ಆನೆಗಳನ್ನು ಅಂತಿಮಗೊಳಿಸಲು ಉದ್ದೇಶಿಸಲಾಗಿದೆ. ಈ ಆನೆಗಳು ಆಗಸ್ಟ್ 9 ಅಥವಾ 11 ರಂದು ಮೈಸೂರು ಪ್ರವೇಶಿಸಲಿದೆ. ಮೊದಲ ತಂಡದಲ್ಲಿ 9 ಆನೆಗಳು ಬರಲಿವೆ.

ಈ ಸಾಲಿನ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಅ.೧೨ರಂದು ನಡೆಯಲಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವ ವಿಜೃಂಭಣೆಯಿಂದ  ಆಚರಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಹೆಚ್ಚಿನ ತರಬೇತಿ, ನೀಡುವುದಕ್ಕಾಗಿ ೬೦ ದಿನ ಮುಂಚಿತವಾಗಿ ಆನೆಗಳನ್ನು ಕರೆತರಲು ಉದ್ದೇಶಿಸಲಾಗಿದೆ.

ಈಗಾಗಲೇ ನಾಗರಹೊಳೆ ಅರಣ್ಯ ವ್ಯಾಪ್ತಿಯ ಮತ್ತಿಗೋಡು, ಭೀಮನಕಟ್ಟೆ, ದೊಡ್ಡಹರವೆ, ಕೊಡಗಿನ ದುಬಾರೆ, ಬಂಡೀಪುರದ ರಾಂಪುರ ಕ್ಯಾಂಪ್‌ಗೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಬಿ.ಎಂ.ಶರಣಬಸಪ್ಪ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ತೆರಳಿ ಪಶುವೈಧ್ಯರೊಂದಿಗೆ ಒಟ್ಟು ೨೨ ಆನೆಗಳನ್ನು ಪರಿಶೀಲನೆ ನಡೆಸಿದೆ. ಅವುಗಳಲ್ಲಿ ೧೮ ಆನೆಗಳ ಪಟ್ಟಿ ಸಿದ್ಧಪಡಿಸಿ, ೧೪ ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ. ಉಳಿದ ೪ ಆನೆ ಕಾಯ್ದಿರಿಸಲಾಗಿದೆ.

ಮೊದಲ ತಂಡದಲ್ಲಿ ೯ ಆನೆ:

ಆಯ್ಕೆ ಮಾಡಿರುವ ೧೪ ಆನೆಗಳಲ್ಲಿ ಮೊದಲ ತಂಡದಲ್ಲಿ ೯ ಆನೆಗಳನ್ನು ಗಜಪಯಣದ ಮೂಲಕ ಕರೆತರಲಾಗುತ್ತಿದೆ. ಮೊದಲ ತಂಡದಲ್ಲಿ ಮತ್ತಿಗೋಡು ಕ್ಯಾಂಪ್‌ನಿಂದ ಗಜಪಡೆಯ ನಾಯಕ, ಅಂಬಾರಿ ಆನೆ ಅಭಿಮನ್ಯು(೫೮), ಭೀಮ, ಹೊಸ ಆನೆ ಏಕಲವ್ಯ(೩೯), ಭೀಮನಕಟ್ಟೆ ಕ್ಯಾಂಪ್‌ನಿಂದ ವರಲಕ್ಷ್ಮೀ(೬೮), ದುಬಾರೆ ಕ್ಯಾಂಪ್‌ನಿಂದ ಧನಂಜಯ(೪೧), ಗೋಪಿ(೪೨), ಕಂಜನ್(೨೫), ರಾಮಾಪುರ ಕ್ಯಾಂಪ್‌ನಿಂದ ರೋಹಿತ(೨೨), ಲಕ್ಷ್ಮೀ (೨೩) ಆನೆಗಳು ಸಾಂಸ್ಕೃತಿಕ ನಗರಿಗೆ ಆಗಮಿಸಲಿವೆ.

ಎರಡನೇ ತಂಡದಲ್ಲಿ ದುಬಾರೆ ಕ್ಯಾಂಪ್‌ನಿಂದ ಪ್ರಶಾಂತ(೫೧), ಸುಗ್ರೀವ(೪೨), ಮತ್ತಿಗೋಡು ಕ್ಯಾಂಪ್‌ನಿಂದ ಮಹೇಂದ್ರ(೪೧), ದೊಡ್ಡಹರವೆಯಿಂದ  ಲಕ್ಷ್ಮೀ(೫೩), ರಾಂಪುರ ಕ್ಯಾಂಪ್‌ನಿಂದ ಹಿರಣ್ಯ(೩೭) ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಕರೆತರಲು ಉದ್ದೇಶಿಸಲಾಗಿದೆ.

ಕಾಯ್ದಿರಿಸಿದ ಆನೆಗಳು: ಈ ಬಾರಿ ೧೪ ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆಯಾದರೂ, ಹೆಚ್ಚುವರಿಯಾಗಿ ೪ ಆನೆಗಳನ್ನು ಕಾಯ್ದಿರಿಸಲಾಗಿದೆ. ಅರಮನೆಯಲ್ಲಿ ಬೀಡುಬಿಟ್ಟ ದಸರಾ ಗಜಪಡೆಯಲ್ಲಿ ಯಾವುದಾದರೂ ಆನೆಗೆ ಅನಾರೋಗ್ಯ ಸಮಸ್ಯೆ ಕಾಡಿದರೆ, ಅದಕ್ಕೆ ಪರ್ಯಾಯವಾಗಿ ಬಳಕೆ ಮಾಡಲು ಹಾಗೂ ಭವಿಷ್ಯದಲ್ಲಿ ದಸರಾ ಆನೆಗಳನ್ನು ಸಜ್ಜುಗೊಳಿಸಲು ನಾಲ್ಕು ಆನೆಗಳನ್ನು ಕಾಯ್ದಿರಿಸಲಾಗಿದೆ. ಅವುಗಳಲ್ಲಿ ಅವುಗಳಲ್ಲಿ ದುಬಾರೆ ಕ್ಯಾಂಪ್‌ನಿಂದ ಅನುಭವಿ ಪ್ರಶಾಂತ(೪೯), ಅಯ್ಯಪ್ಪ(೧೩), ರಾಮಾಪುರ ಕ್ಯಾಂಪ್‌ನಿಂದ ಪಾರ್ಥಸಾರಥಿ(೧೯) ಹಾಗೂ ಮಾಲಾದೇವಿ(೩೭) ಆನೆಗಳನ್ನು ಆಯ್ಕೆ ಮಾಡಿ ಕಾಯ್ದಿರಿಸಲಾಗಿದೆ. ಕೆಲವರು ಅರಣ್ಯ ಇಲಾಖೆಗೆ ಸಲಹೆ ನೀಡಿದ್ದು, ಕಾಯ್ದಿರಿಸಿದ್ದ ಆನೆಗಳಲ್ಲಿ ಹೊಸ ಆನೆಗಳನ್ನು ಮೈಸೂರಿಗೆ ತಂದು ಇತರೆ ಆನೆಗಳೊಂದಿಗೆ ತರಬೇತಿ ನೀಡಿದರೆ, ಭವಿಷ್ಯದಲ್ಲಿ ದಸರಾ ಆನೆ ಸಜ್ಜುಗೊಳಿಸಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇನ್ನು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸಧ್ಯಕ್ಕೆ ಮೊದಲ ತಂಡದಲ್ಲಿ ೯, ಎರಡನೇ ತಂಡದಲ್ಲಿ ೫ ಆನೆ ಮೈಸೂರಿಗೆ ಬರುವುದು ಖಚಿತವಾಗಿದೆ.

KEY WORDS: MYSORE DASARA, Jumbo Savary, to be held on, Oct. 12, A shortlist of 18 elephants, is ready.

SUMMARY:

ಮತ್ತಿಗೋಡು ಕ್ಯಾಂಪ್ ನಲ್ಲಿ‌ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ‌

It is proposed to finalize 18 elephants, including 14 elephants and an additional four elephants, who will take part in the Jumbo Savary procession this time. These elephants will enter Mysuru on August 9 or 11. The first batch will have nine elephants.

The post MYSORE DASARA: ಜಂಬೂಸವಾರಿ ಅ.12 ಕ್ಕೆ ;18 ಆನೆಗಳ ʼ ಗಜ ಪಡೆʼ  ಶಾರ್ಟ್‌ ಲಿಸ್ಟ್‌ ರೆಡಿ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದಸರಾ ಮೈಸೂರಿಗರಿಗೆ ಎಷ್ಟೊಂದು ದುಸ್ತರ : ‘ ಬಿಲ್ಡಪ್ ‘ ಗಳ ಭಾರದಲ್ಲಿ ನಲುಗುತ್ತಿದೆಯಾ ಮೈಸೂರು..!
ಮೈಸೂರು, ಅಕ್ಟೋಬರ್ 19, 2021, (www.justkannada.in): ಸ್ವಚ್ಛ ನಗರ, ಸಾಂಸ್ಕೃತಿಕ ನಗರ, ಅರಮನೆಗಳ ನಗರಿ , ಸುಗಂಧ ಕಡ್ಡಿಗಳು ಹಾಗೂ ಗಂಧದ ನಗರ, ಪಾರಂಪರಿಕ ನಗರ, ಹಸಿರು ನಗರ, ಸಾಂಸ್ಕೃತಿಕ ರಾಜಧಾನಿ ಹಾಗೂ ಪ್ರವಾಸಿ ತಾಣ… ಹೀಗೆ ಹಲವಾರು ‘ ಬಿಲ್ಡಪ್ ‘ ಗಳ ತೂಕದಡಿ ಮೈಸೂರು ನಗರ ದಸರಾ ಸಂದರ್ಭದಲ್ಲಿ ತತ್ತರಿಸುತ್ತಿರುವಂತೆ ಭಾಸವಾಗುತ್ತಿದೆ.

ಹಲವಾರು ಸಕರಾತ್ಮಕ ಬ್ರ್ಯಾಂಡ್ ಗಳಿಂದ ಗುರುತಿಸಿಕೊಂಡಿರುವ ಮೈಸೂರು ನಗರ, ವಾಸ್ತವದಲ್ಲಿ ತನ್ನ ಸ್ವಂತ ನಾಮಾಂಕಿತ ಹಾಗೂ ಗುರುತುಗಳ ತೂಕದ ಅಡಿ ತತ್ತರಿಸುತ್ತಿದೆ. “ದಸರಾ ಮಹೋತ್ಸವದ ಸಮಯದಲ್ಲಿ ಪ್ರವಾಸಿಗರ ಮನರಂಜಿಸಲು ಹಾಗೂ ನಗರಕ್ಕೆ ಅಂಟಿಕೊಂಡಿರುವ ‘ಸುಳ್ಳು’ ಹೆಮ್ಮೆಯನ್ನು ತೋರ್ಪಡಿಸಲು ಮೈಸೂರಿನ ಸಾಮಾನ್ಯ ಜನರು ಕಷ್ಟಗಳನ್ನು ಅನುಭವಿಸಬೇಕಾಗುತ್ತಿದೆ.

ಕಳೆದ ಶುಕ್ರವಾರ, ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮದ ಬಳಿಕ ಮೈಸೂರಿನಲ್ಲಿ ವರುಣನ ಆರ್ಭಟ ಹಾಗೂ ಬೃಹತ್ ವಾಹನಗಳ ಸಂಚಾರ ದಟ್ಟಣೆ ಮೈಸೂರಿನ ನಿಜ ಸ್ವರೂಪದ ದರ್ಶನ ಮಾಡಿಸಿತು. ಪರಿಣಾಮ ಮೈಸೂರಿಗರು ಪರದಾಡಬೇಕಾಯಿತು. ಕೋವಿಡ್-೧೯ ಸಾಂಕ್ರಾಮಿಕದ ಬಿಕ್ಕಟ್ಟಿನಿಂದಾಗಿ ಈ ಬಾರಿ ಸರಳ ದಸರಾ ಆಚರಿಸಲಾಯಿತಾದರೂ ಸಹ ಮೈಸೂರಿನ ನಿವಾಸಿಗಳು ಈ ಮಟ್ಟಿಗಿನ ಕಷ್ಟಗಳನ್ನು ಎದುರಿಸಬೇಕಾದುದು ವಿಪರ್ಯಾಸ.

ಮಳೆಯಿಂದಾಗಿ ಮೈಸೂರಿನ ಬಹುಪಾಲು ಜನ ನಿಭಿಡ ರಸ್ತೆಗಳು ಜಲಾವೃತ್ತಗೊಂಡಿದ್ದವು, ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಹಬ್ಬವಿರಲಿ ಅಥವಾ ಸಾಮಾನ್ಯ ದಿನವಾಗಲೀ ಮೈಸೂರಿನ ಸಾಮಾನ್ಯ ಜನರು ದೈನಂದಿನ ಬದುಕು ಸಾಗಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು.

ದೀಪಾಲಂಕಾರವೆಂಬ ಭ್ರಮಾಲೋಕ :

ಮೈಸೂರು ನಗರದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದಿದ್ದರೂ ಸರಿ, ಅಧಿಕಾರಿಗಳು ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಅವೈಜ್ಞಾನಿಕ ದೀಪಾಲಂಕಾರದ ಹೆಸರಿನಲ್ಲಿ ಹಲವು ರಸ್ತೆಗಳು ಹಾಗೂ ಚರಂಡಿಗಳೇ ಕಣ್ಮರೆಯಾಗಿವೆ.

ಮೈಸೂರು ‘ ವೆಲ್ ಪ್ಲಾನ್ಡ್ ಸಿಟಿ ಹಾಗೂ ಸ್ವಚ್ಛ ನಗರ ‘ ಎನ್ನುವುವಾದರೆ, ಮಳೆ ಬಂದಾಗ ರಸ್ತೆಗಳ ಮೇಲೆ ನೀರೇಕೆ ನಿಲ್ಲುತ್ತದೆ,..? ಏಕೆ ಅಷ್ಟು ಪ್ರಮಾಣದಲ್ಲಿ ಹರಿಯುತ್ತಿರುತ್ತದೆ.? ಮಳೆನೀರು, ಚರಂಡಿ ನೀರಿನ ಜೊತೆ ಸೇರಿ ಮನೆಗಳಿಗೆ ಏಕೆ ನುಗ್ಗುತ್ತದೆ..?

ಪ್ರವಾಸಿ ತಾಣ ಎನಿಸಿಕೊಂಡಿರುವ ಕಾರಣದಿಂದಾಗಿ ಮೈಸೂರಿಗರು ಎದುರಿಸಬೇಕಾಗುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಅಂದರೆ, ಅಗತ್ಯ ವಸ್ತುಗಳ ದರಗಳಲ್ಲಿ ತೀವ್ರ ಹೆಚ್ಚಳ ಹಾಗೂ ಕೆಲ ಆಟೊ ಮತ್ತು ಟ್ಯಾಕ್ಸಿಗಳ ಚಾಲಕರಿಂದ ಸುಲಿಗೆ. ಅಂಬಾವಿಲಾಸ ಅರಮನೆಯ ಬಳಿಯೇ ನಗರ ಬಸ್ ನಿಲ್ದಾಣ ಇರುವ ಕಾರಣದಿಂದಾಗಿ, ದಸರಾ ಸಮಯದಲ್ಲಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಜನತೆ ಬದಲಿ ಸಂಚಾರ ವ್ಯವಸ್ಥೆ ಅವಲಂಭಿಸುವುದು ಅನಿವಾರ್ಯ.

ಸಂಚಾರಿ ಸಿಗ್ನಲ್‌ಗಳ ಬಳಿ ಭಿಕ್ಷಕರು ಹಾಗೂ ಮಂಗಳಮುಖಿಯರ ಉಪಟಳವೂ ಹೆಚ್ಚಾಗಿರುತ್ತದೆ. ಫುಟ್‌ಪಾತ್‌ಗಳ ಮೇಲೆ ಓಡಾಡುವವರು ಹಾಗೂ ಪ್ರವಾಸಿಗರಿಗೆ ಕಾಟ ನೀಡುತ್ತಾರೆ. ಇದರ ಜತೆಗೆ ಕೆಲ ಪುಂಡುಪೋಕರಿಗಳು ವುವುಜೆಲಾ (ತುತ್ತೂರಿ) ಕರ್ಕಶ ಶಬ್ಧದ ಮೂಲಕ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ. ಇದು ಎಷ್ಟರ ಮಟ್ಟಿಗೆ ಅಂದ್ರೆ, ಮೈಸೂರು ನಗರ ಪೊಲೀಸ್ ಆಯುಕ್ತರೇ ವುವುಜೆಲಾ ಬಳಕೆ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸುತ್ತಾರೆ ಅಂದ್ರೆ ನೀವೆ ಅರ್ಥ ಮಾಡಿಕೊಳ್ಳಿ..!

key words : Mysore-reeling-under-weight-of-its-own-buildups-Karnataka-bjp-government

The post ದಸರಾ ಮೈಸೂರಿಗರಿಗೆ ಎಷ್ಟೊಂದು ದುಸ್ತರ : ‘ ಬಿಲ್ಡಪ್ ‘ ಗಳ ಭಾರದಲ್ಲಿ ನಲುಗುತ್ತಿದೆಯಾ ಮೈಸೂರು..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯಶಸ್ವಿಯಾಗಿ ಎರಡನೇ ಇನ್ನಿಂಗ್ಸ್ ಪೂರ್ಣಗೊಳಿಸಿದ ಅಭಿಮನ್ಯು..!
ಮೈಸೂರು, ಅ.15, 2021 : (www.justkannada.in news) : ಕಳೆದ ವರ್ಷವ್ಷಟೆ ಅಂಬಾರಿ ಆನೆಯ ಪಟ್ಟಕ್ಕೇರಿದ್ದ ಅಭಿಮನ್ಯು, ತನ್ನ ಕರ್ತವ್ಯ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಗಜರಾಜ ಅಭಿಮನ್ಯು ಅಂಬಾರಿ ಹೊತ್ತು ಅರಮನೆ ಆವರಣದಲ್ಲಿ ರಾಜಗಾಂಬಿರ್ಯದಿಂದ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿ ಸಾಥ್ ನೀಡಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆಯೇ ಈ ಬಾರಿ ತಾಯಿಯೂ ಸಹ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಅಂಬಾ ವಿಲಾಸ ಅರಮನೆ ಆವರಣದ 400 ಮೀಟರ್ ನಲ್ಲಿ ಮೆರವಣಿಗೆ ಸಾಗಿತು.

ಪ್ರತಿ ವರ್ಷ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಮೆರವಣಿಗೆ ವೀಕ್ಷಿಸಲು ಸರಕಾರ ಕೇವಲ 500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿತ್ತಾದರೂ, ಸಾವಿರಾರು ಮಂದಿ ಅರಮನೆ ಆವರಣದಲ್ಲಿ ಜಮಾಯಿಸಿದ್ದದ್ದು ವಿಶೇಷ.

30 ನಿಮಿಷಗಳಲ್ಲಿ ಮುಕ್ತಾಯ:

ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಬಹಳ ಸರಳವಾಗಿ ನಡೆಯಿತು. ಕೇವಲ 30 ನಿಮಿಷಗಳಲ್ಲಿ ಜಂಬೂ ಸವಾರಿ (Jambu Savari) ಕೊನೆಗೊಂಡಿತು. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯ ಮೇಲೆ ಸರ್ವಾಲಂಕಾರ ಭೂಷಿತಳಾಗಿ ವಿರಾಜಿತಳಾದ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಅರಮನೆಯ ಆವರಣದಲ್ಲಿ ಸಾಗಿತು.

key words : mysore-dasara-festival-simple-dasara-karnataka

The post ಯಶಸ್ವಿಯಾಗಿ ಎರಡನೇ ಇನ್ನಿಂಗ್ಸ್ ಪೂರ್ಣಗೊಳಿಸಿದ ಅಭಿಮನ್ಯು..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

4th simple Dasara Mahotsav concludes successfully
Mysuru, October 15, 2021 (www.justkannada.in): aThe historic Mysuru Dasara which has a rich history of more than 400 years was celebrated in a simple manner this year due to the COVID-19 Pandemic. This is the fourth time Dasara is being celebrated in a simple manner.

Earlier three times the historic Dasara celebrations were held in a simple way. The Dasara celebrations were held in a simple way in 1993 due to the situation in the state over the Cauvery river water sharing row. Again in the year 2002, the same was followed due to the drought situation and kidnap of matinee idol Dr. Rajkumar the Dasara celebrations were low.

With a view of not stopping the Dasara Mahotsav as per the traditions, it was held in a very simple way in 2020 due to the COVID-19 Pandemic. The Jambu Savari was restricted only inside the palace premises which had ended within 23 minutes.

This year also the Dasara Mahotsav was maintained in a low way as the pandemic has still not come under complete control. The main attraction of the Dasara Mahotsav the ‘Jambu Savari’ was restricted only inside the palace premises. Only 500 people were allowed to see the procession.

The Jambu Savari was aired live on TV, Information Department’s official Facebook page, and online news portals.

Keywords: Mysuru Dasara/ historic/ world-famous/ Jambu Savari/ palace premises/ conclude

The post 4th simple Dasara Mahotsav concludes successfully appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೆರಗು ತಂದ ಕಲಾತಂಡಗಳ ಪ್ರದರ್ಶನ. ಕಣ್ಮನ ಸೆಳೆದ ಸ್ತಬ್ದಚಿತ್ರಗಳು.
ಮೈಸೂರು,ಅಕ್ಟೋಬರ್,15,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ  ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆ ಸರಳವಾಗಿ ನಡೆಯಿತು. ಸಿಂ ಬಸವರಾಜ ಬೊಮ್ಮಾಯಿ ಅವರು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ 750 ಕೆಜಿ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು  ರಾಜಗಾಂಭೀರ್ಯದಿಂದ ಹೆಜ್ಜೆ  ಹಾಕಿದನು. ಕೊರೋನಾ ಹಿನ್ನೆಲೆ ಕಳೆದ ಬಾರಿಯಂತೆ ಈ ಬಾರಿಯೂ ಸರಳ ದಸರಾ ಆಚರಣೆ ಮಾಡಲಾಯಿತು.  ಈ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ಅರಮನೆ ಅಂಗಳಕ್ಕೆ ಸೀಮಿತವಾಗಿದ್ದು,  ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ತಾಯಿ ಚಾಮುಂಡೇಶ್ವರಿ ಕಂಗೊಳಿಸಿದಳು. ತಾಯಿ ಚಾಮುಂಡೇಶ್ವರಿಯನ್ನ ಭಕ್ತರು ನೋಡಿ ಕಣ್ತುಂಬಿಕೊಂಡರು.

ಕ್ಯಾಪ್ಟನ್ ಅಭಿಮನ್ಯ 2ನೇ ಬಾರಿ ಅಂಬಾರಿ ಹೊತ್ತು ಹೆಜ್ಜೆ  ಹಾಕಿದ್ದು, ಅಕ್ಕಪಕ್ಕದಲ್ಲಿ ಚೈತ್ರ, ಕಾವೇರಿ ಆನೆಗಳು ಸಾಥ್ ನೀಡಿದವು. ನಿಶಾನೆ ಆನೆಯಾಗಿ ಧನಂಜಯ ನೌಪತ್ ಆನೆಯಾಗಿ  ಗೋಪಾಲಸ್ವಾಮಿ ಅಶ್ವತ್ಹಾಮ ಹೆಜ್ಜೆ  ಹಾಕಿದರು.

ಕಣ್ಮನ ಸೆಳೆದ ಸ್ತಬ್ದಚಿತ್ರಗಳು, ಕಲಾತಂಡಗಳ ಅದ್ಬುತ ಪ್ರದರ್ಶನ.

ಜಂಬೂ ಸವಾರಿ ಮೆರವಣಿಗೆಯಲ್ಲಿ 6 ಸ್ತಬ್ದಚಿತ್ರಗಳು ಹಾಗೂ 12 ಪ್ರಕಾರಗಳ 23 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ‘ಮೈಸೂರಿನಲ್ಲಿ ಸೂರು’ ಬಗ್ಗೆ ಮುಡಾ ತಯಾರಿಸಿರುವ ಸ್ತಬ್ಧಚಿತ್ರ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ವತಿಯಿಂದ  ‘ಬೇಡ ನನಗೆ  ಕೊಡಲಿ ನೆರಳನೇಕೆ ಕೊಡಲಿ’ ಎಂದು ಬಿಂಬಿಸುವ ಸ್ತಬ್ದಚಿತ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ  ‘ಸಮಗ್ರ ಕೃಷಿ’ ಸ್ತಬ್ಧಚಿತ್ರ, ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ  ಕೋವಿಡ್ ಮುಕ್ತ ಕರ್ನಾಟಕ ಸ್ತಬ್ಧಚಿತ್ರ, ಮೈಸೂರು ದಸರಾ ಉಪಸಮಿತಿಯಿಂದ  ಆಜಾದಿ ಕಾ ಅಮೃತ ಮಹೋತ್ಸವ ಸ್ತಬ್ದಚಿತ್ರ,  ಮೈಸೂರು ಅರಮನೆಯ ವಾದ್ಯಗೋಷ್ಠಿ ಸ್ತಬ್ಧಚಿತ್ರ ಕಣ್ಮನ ಸೆಳೆದವು.

ಮೆರವಣಿಗೆಗೆ ಕಲಾ ತಂಡಗಳು ಮೆರಗು ನೀಡಿದ್ದು, 12 ಪ್ರಕಾರಗಳ 23 ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ.  ವೀರಗಾಸೆ ,ಡೊಳ್ಳು ಕುಣಿತ, ವಾದ್ಯಗೋಷ್ಠಿ  ಎಲ್ಲವೂ ಮೆರವಣಿಗೆಯಲ್ಲಿ ನೋಡುಗರನ್ನ ತನ್ನತ್ತ ಸೆಳೆಯುತ್ತಿವೆ. ಒಟ್ಟಾರೆ ಈ ಬಾರಿಯೂ ಸರಳ ದಸರಾವಾದರೂ ಸಹ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಿತು.

Key words: mysore- dasara 2021- jamboo ride-tablo

The post ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಮೆರಗು ತಂದ ಕಲಾತಂಡಗಳ ಪ್ರದರ್ಶನ. ಕಣ್ಮನ ಸೆಳೆದ ಸ್ತಬ್ದಚಿತ್ರಗಳು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯಶಸ್ವಿಯಾಗಿ ಮುಕ್ತಾಯಗೊಂಡ 4 ನೇ ಸರಳ ದಸರಾ ಮಹೋತ್ಸವ..
ಮೈಸೂರು, ಅ.15, 2021 : (www.justkannada.in news ) ನಾಲ್ಕುನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಲ ಕಾರಣಗಳಿಗೆ ಈ ವರ್ಷವೂ ಸೇರಿ ಈ ತನಕ 4 ಸಲ ಸರಳವಾಗಿ ಆಚರಣೆಗೊಂಡಿದೆ.

ಇದಕ್ಕೂ ಮೊದಲು 3 ಬಾರಿ ಸರಳ ದಸರಾ ಆಚರಿಸಲಾಗಿತ್ತು. ಮೊದಲಿಗೆ 1993 ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಆದ್ದರಿಂದ ಆಗ ಸರಳ ದಸರಾ ಆಚರಣೆಗೆ ಸರಕಾರ ತೀರ್ಮಾನಿಸಿತ್ತು. ಆ ನಂತರ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, 2002 ರಲ್ಲಿ ವರನಟ ಡಾ.ರಾಜ್ ಕುಮಾರ್ ಅಪಹರಣ, ಬರಗಾಲದಿಂದ ದಸರಾ ಆಚರಣೆ ಸರಳವಾಗಿ ನಡೆಯಿತು.

ಆದಾದ ನಂತರ ಈಗ ಅಂದರೆ, 2020 ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಂಪ್ರದಾಯ ಬಿಡಬಾರದು ಎಂಬ ಸಲುವಾಗಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಅರಮನೆ ಆವರಣಕ್ಕೆ ಮಾತ್ರ ಜಂಬೂಸವಾರಿ ಸಿಮೀತವಾಗಿತ್ತು. ಕೇವಲ 23 ನಿಮಿಷಗಳಲ್ಲಿ ಜಂಬೂ ಸವಾರಿ (Jambu Savari) ಕೊನೆಗೊಂಡಿತ್ತು.

ಆದರೆ ಮಹಾಮಾರಿ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ವರ್ಷವೂ ಸಹ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಅರಮನೆಗೆ ಮಾತ್ರ ಸಿಮೀತಗೊಳಿಸಲಾಗಿತ್ತು. ಜತೆಗೆ ಕೇವಲ 500 ಮಂದಿಗೆ ಮಾತ್ರ ಮೆರವಣಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ಪರಿಣಾಮ ಈ ಬಾರಿ ದಸರಾ ಜಂಬೂ ಸವಾರಿ ಸಂಭ್ರಮವನ್ನು ಟಿವಿ, ವಾರ್ತಾ ಇಲಾಖೆಯ ಫೇಸ್ ಬುಕ್ ಪೇಜ್ ಹಾಗೂ ಆನ್ ಲೈನ್ ನ್ಯೂಸ್ ಪೋರ್ಟಲ್ ಗಳ ಮೂಲಕವೇ ಜನತೆ ಕಣ್ತುಂಬಿಕೊಳ್ಳಬೇಕಾಯಿತು.

key words : Mysore-dasara-jamboosavari-simple-dasara-Karnataka

ENGLISH SUMMARY….

4th simple Dasara Mahotsav concludes successfully

Mysuru, October 15, 2021 (www.justkannada.in): aThe historic Mysuru Dasara which has a rich history of more than 400 years was celebrated in a simple manner this year due to the COVID-19 Pandemic. This is the fourth time Dasara is being celebrated in a simple manner.

Earlier three times the historic Dasara celebrations were held in a simple way. The Dasara celebrations were held in a simple way in 1993 due to the situation in the state over the Cauvery river water sharing row. Again in the year 2002, the same was followed due to the drought situation and kidnap of matinee idol Dr. Rajkumar the Dasara celebrations were low.

With a view of not stopping the Dasara Mahotsav as per the traditions, it was held in a very simple way in 2020 due to the COVID-19 Pandemic. The Jambu Savari was restricted only inside the palace premises which had ended within 23 minutes.

This year also the Dasara Mahotsav was maintained in a low way as the pandemic has still not come under complete control. The main attraction of the Dasara Mahotsav the ‘Jambu Savari’ was restricted only inside the palace premises. Only 500 people were allowed to see the procession.

The Jambu Savari was aired live on TV, Information Department’s official Facebook page, and online news portals.

Keywords: Mysuru Dasara/ historic/ world-famous/ Jambu Savari/ palace premises/ conclude

The post ಯಶಸ್ವಿಯಾಗಿ ಮುಕ್ತಾಯಗೊಂಡ 4 ನೇ ಸರಳ ದಸರಾ ಮಹೋತ್ಸವ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ದಸರಾ: ಶುಭಮೀನ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ.
ಮೈಸೂರು,ಅಕ್ಟೋಬರ್,15,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಸಿಗಲು ಕ್ಷಣಗಣನೆ ಆರಂಭವಾಗಿದ್ದು ಈ ನಡುವೆ ಅರಮನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಾಂಪ್ರದಾಯದಂತೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.

ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಶುಭ ಮೀನ ಲಗ್ನದಲ್ಲಿ ಜೋಡಿ ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದರು. ಈ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅತ್ಯಂತ ಭಕ್ತಿ ಭಾವದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಕೆ ಮಾಡಿದ್ದೇನೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುವೆ ಎಂದು ತಿಳಿಸಿದರು.

Key words: Mysore Dasara –  CM Basavaraja Bommai -worshiped -Nandidhwaja.

The post ಮೈಸೂರು ದಸರಾ: ಶುಭಮೀನ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕ್ಯಾಪ್ಟನ್ ಅಭಿಮನ್ಯುವಿಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಅಲಂಕಾರ: ಅಂಬಾರಿ ಕಟ್ಟುವ ಕಾರ್ಯ ಆರಂಭ.
ಮೈಸೂರು,ಅಕ್ಟೋಬರ್,15,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದ್ದು ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಸಿಂಗಾರ ಮಾಡಲಾಗಿದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಆರು ಆನೆಗಳು ಪಾಲ್ಗೊಳ್ಳುತ್ತಿದ್ದು  ಎಲ್ಲಾ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಕತ್ತಿನ ಘಂಟೆ, ಕಾಲಿನ ಘಂಟೆ, ಸಿರಿಯಿಂದ ಸಿಂಗಾರ ಮಾಡಲಾಗಿದ್ದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಗಜಪಡೆ ಸಿದ್ಧವಾಗಿವೆ.ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಿದೆ.

750 ಕೆಜಿ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ಅಕ್ಕಪಕ್ಕದಲ್ಲಿ ಕಾವೇರಿ, ಚೈತ್ರ ಆನೆಗಳು ಸಾಥ್ ನೀಡಲಿದ್ದು, ನಿಶಾನೆ ಆನೆಯಾಗಿ ಧನಂಜಯ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಶ್ವತ್ಹಾಮ ಕೂಡ ಸಾಥ್ ನೀಡಲಿದ್ದಾನೆ.

ಇನ್ನು ಚಿನ್ನದ ಅಂಬಾರಿಗೆ ಪುಷ್ಪಗಳಿಂದ ಅಲಂಕರಿಸಲಿದ್ದು , ತಾಯಿ ಚಾಮುಂಡೇಶ್ವರಿ ಅಂಬಾರಿಯಲ್ಲಿ ಕಂಗೊಳಿಸಲಿದ್ದಾಳೆ. ಈ ವೇಳೆ ಭಕ್ತರು ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇನ್ನು ಈ ಬಾರಿ ಅರಮನೆ ಅಂಗಳಕ್ಕಷ್ಟೆ ಮೆರವಣಿಗೆ ಸೀಮಿತವಾಗಿದ್ದು, ಕೇವಲ 500 ಮಂದಿ ಮಾತ್ರ ಜಂಬೂ ಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ.

Key words: Jumbo ride- mysore dasara-Abhimanyu – Colors

The post ಕ್ಯಾಪ್ಟನ್ ಅಭಿಮನ್ಯುವಿಗೆ ಬಣ್ಣಗಳಿಂದ ಚಿತ್ರ ಬಿಡಿಸಿ ಅಲಂಕಾರ: ಅಂಬಾರಿ ಕಟ್ಟುವ ಕಾರ್ಯ ಆರಂಭ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇಂದಿನಿಂದ 9 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ- ಸುತ್ತೂರು ಮಠದಲ್ಲಿ ಸಿಎಂ ಬೊಮ್ಮಾಯಿ ಘೋಷಣೆ.
ಮೈಸೂರು,ಅಕ್ಟೋಬರ್,15,2021(www.justkannada.in):  ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಗರದೆಲ್ಲೆಡೆ ದೀಪಾಲಂಕಾರ ಮಾಡಲಾಗಿದ್ದು ವಿದ್ಯುತ್ ದೀಪಗಳಿಂದ ಅರಮನೆ ನಗರಿ ಕಂಗೊಳಿಸಿದೆ. ಈ ಮಧ್ಯೆ ಇಂದಿನಿಂದ 9 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಇಂದು ನಡೆಯಲಿರುವ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.

ನಾಡಿನಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ. ನಾಡನ್ನ ಸುಭೀಕ್ಷವಾಗಿ ಇಡುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ. ದೀಪಾಲಂಕಾರ ವಿಸ್ತರಣೆಗೆ ಬೇಡಿಕೆ ಹೆಚ್ಚಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಹೆಚ್ಚು ಜನ ಬಂದು ದೀಪಾಲಂಕಾರ ವೀಕ್ಷಣೆ ಮಾಡಿದ್ದಾರೆ. ಹಾಗಾಗಿ ದಸರಾ ದೀಪಾಲಂಕಾರ ವಿಸ್ತರಣೆ ಮಾಡಲಾಗಿದೆ. ಮುಂದಿನ ಒಂಬತ್ತು ದಿನಗಳ ಕಾಲ ದೀಪಾಲಂಕಾರ  ಇರಲಿದೆ. ಸಾಧ್ಯವಾದ್ರೆ ಇಂದು ರಾತ್ರಿ ದೀಪಾಲಂಕಾರ ವೀಕ್ಷಿಸುವೆ. ಕುಟುಂಬ ಸಮೇತ ದೀಪಾಲಂಕಾರ ವೀಕ್ಷಣೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: mysore –dasara- Lighting -extension – 9 days -CM Bommai -Announced

The post ಇಂದಿನಿಂದ 9 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ- ಸುತ್ತೂರು ಮಠದಲ್ಲಿ ಸಿಎಂ ಬೊಮ್ಮಾಯಿ ಘೋಷಣೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಜಂಬೂ ಸವಾರಿಗೆ ಕ್ಷಣಗಣನೆ: ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಸಜ್ಜು: ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್.
ಮೈಸೂರು,ಅಕ್ಟೋಬರ್.15,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐತಿಹಾಸಿಕ ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ಚಿನ್ನದ ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ಸಜ್ಜಾಗಿದ್ದಾನೆ.

ದಸರಾ ಜಂಬೂ ಸವಾರಿ ಮೆರವಣಿಗೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್, ಅಭಿಮನ್ಯು ಅಂಡ್ ಟೀಂ ಜಂಬೂ ಸವಾರಿ ಮೆರೆವಣಿಗೆ ಸಜ್ಜಾಗಿವೆ. ಈ ಬಾರಿ ಯಶಸ್ವಿಯಾಗಿ ಮೆರವಣಿಗೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಆನೆಗಳಿಗೆ ಬಣ್ಣ ಹಚ್ಚುವ ಕಾರ್ಯ ಬೆಳಗ್ಗೆಯಿಂದನೇ ನಡೆಯುತ್ತಿದೆ. ಮಧ್ಯಾಹ್ನ 2.30  ಬಳಿಕ ಅಂಬಾರಿ ಕಟ್ಟುವ ಕಾರ್ಯ ಶುರುವಾಗಲಿದೆ. ಮೆರವಣಿಗೆಯ ಒಂದು ಗಂಟೆ ಮುಂಚಿತವಾಗಿ ಅಂಬಾರಿ ನೀಡುವಂತೆ ಕೇಳಲಾಗಿದೆ. ಶ್ರೀರಂಗಪಟ್ಟಣದ ಘಟನೆಯಿಂದ ಇನ್ನು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಆನೆ ಹತ್ತಿರದಲ್ಲಿ ಬಣ್ಣದ ಕಾಗದ ಚಿಮ್ಮುವ ಪಟಾಕಿ ಸಿಡಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಮುಂಜಾಗ್ರತೆಯಾಗಿ ಅರವಳಿಕೆ ಚುಚ್ಚು ಮದ್ದು ತಜ್ಞ ವೈದ್ಯರ ತಂಡ ಕೂಡ ಸಜ್ಜಾಗಿದ್ದಾರೆ. ಯಾವುದೇ ತೊಂದರೆ ಇಲ್ಲದೆ ಮೆರವಣಿಗೆ ಯಶಸ್ವಿಯಾಗಿ ನಡೆಯಲಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

Key words: Countdown – Jumbo ride- Captain Abhimanyu – Team – DCF -Karikalan, – preparation

The post ಜಂಬೂ ಸವಾರಿಗೆ ಕ್ಷಣಗಣನೆ: ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಸಜ್ಜು: ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.