ಅಮೃತ ಸಿಂಚನ – 14 : ಅಂತರಗಳು

ಅಮೃತ ಸಿಂಚನ – 14

ಅಂತರಗಳು

ಮೈಸೂರು,ಜನವರಿ,5,2021(www.justkannada.in):

ಅದಿಕಾಲದಲ್ಲಿ ಯಾವುದೋ ಒಂದು ಧರ್ಮವಿದ್ದಿತು. ಆದರೆ ಅದೊಂದು ಧರ್ಮ ಅಂತ ಜನರಿಗೆ ಗೊತ್ತಿರಲಿಲ್ಲ!

ನಂತರ ಕಾಲಾನುಕ್ರಮದಲ್ಲಿ ವಿವಿಧ ರೀತಿಯ ಮತಗಳು ಹುಟ್ಟಿಕೊಂಡವು.

ಕೆಲವರೆಂದರು, “ಎಲ್ಲ ಮತಗಳ ಗುರಿ ಒಂದೇ. ಎಲ್ಲ ಮತಗಳು ಹೇಳುವ ಸತ್ಯ ಒಂದೇ” ಅಂತ.

ಕೆಲವೊಮ್ಮೆ ಅವರುಗಳು ಹೇಳಿದ್ದು ಸರಿ ಇರಬಹುದು ಎನ್ನಿಸಿತು. ಏಕೆಂದರೆ, ಮೂಲ ಧರ್ಮದ ಅಭಿಪ್ರಾಯಗಳನ್ನು ಬೇರೊಂದು ವಿಧದಲ್ಲಿ ಈ ಮತಗಳು ಹೇಳುತ್ತಿದ್ದವು. ಎಲ್ಲೋ ಅಲ್ಲೊಂದು ಇಲ್ಲೊಂದು ಅಭಿಪ್ರಾಯ ಭೇದವಿದ್ದಿರಬಹುದು.jk-logo-justkannada-mysore

“ಮೂಲ ಧರ್ಮದ ಅಭಿಪ್ರಾಯಗಳನ್ನೇ ಈ ಮತಗಳು ಪ್ರತಿಪಾದಿಸುವುದಾದರೆ ಅವುಗಳ ಅಗತ್ಯವಾದರೂ ಏನು? ಮೂಲ ಧರ್ಮವನ್ನೇ ಅನುಸರಿಸಹುದಲ್ಲ?”ಅಂತ ಯಾರೂ ಪ್ರಶ್ನಿಸಲಿಲ್ಲ!

ಕೊನೆಗೆ ನೋಡಿ, ಹಲವರು ಹೇಳುವಂತೆ, ಎಲ್ಲ ಮತಗಳ ಅಭಿಪ್ರಾಯ, ಗುರಿಗಳು ಒಂದೇ ಆಗಿದ್ದು, ಮೂಲ ಧರ್ಮದ ಆಶಯಕ್ಕೆ ವ್ಯತಿರಿಕ್ತವಾಗಿ ಇಲ್ಲದಿದ್ದರೂ, ಒಂದು ಅನಾಹುತವಂತೂ ನಡೆದೇ ಹೋಯಿತು. ಪ್ರತಿ ಮತದ ಸುತ್ತ ಗೋಡೆ – ಕಂದಕಗಳು ಏರ್ಪಟ್ಟವು!

“ನಮ್ಮ ನಿಮ್ಮ ಅಭಿಪ್ರಾಯಗಳು, ಗುರಿಗಳು ಒಂದೇ ಇರಬಹುದು. ಆದರೆ, ನೀವೇ ಬೇರೆ, ನಾವೇ ಬೇರೆ” ಅನ್ನುವಂತಹ ಸಂಕುಚಿತ ಮನೋಭಾವ ಬೆಳೆಯಿತು.

“ನಿಮ್ಮ ಮತಾಚಾರ್ಯ ಹೇಳಿದ್ದು ಸತ್ಯವೇ ಇರಬಹುದು, ಆದರೆ ನಿಮ್ಮ ಮತದಲ್ಲಿ ಇದ್ದುಕೊಂಡೇ ಆ ಸತ್ಯವನ್ನು ಒಪ್ಪಿಕೊಂಡರೆ ನಿಮಗೆ ಸದ್ಗತಿಯಿಲ್ಲ. ಅದೇ ಸತ್ಯವನ್ನು ನಮ್ಮ ಮತಕ್ಕೆ ಸೇರಿಕೊಂಡು ನೀವು ಒಪ್ಪಿಕೊಳ್ಳಬೇಕು. ಆಗಲೇ ನಿಮಗೆ ಸದ್ಗತಿ”- ಎಂಬಂತಹ ವಿಚಿತ್ರ ವಾದವನ್ನು ಎಲ್ಲ ಮತದವರೂ ಜನರ ಮುಂದಿಟ್ಟರು.

“ಈ ಮಾತು ಸತ್ಯವಿರಲೂ ಬಹುದು” ಅಂತಂದುಕೊಂಡು ಹಲವರು ಮತಾಂತರಗೊಳ್ಳತೊಡಗಿದರು.Amrita sinchana-- Gaps

“ಅಯ್ಯೋ, ನಮ್ಮ ಮತದವರೆಲ್ಲಾ ಹೀಗೆ ಬೇರೊಂದು ಮತಕ್ಕೆ ಸೇರಿಕೊಂಡರೆ ನಮ್ಮ ಮತೀಯರ ಸಂಖ್ಯೆ ಕಡಿಮೆಯಾಗುತ್ತದಲ್ಲ!” ಎಂಬ ಭಯದಿಂದ ಮತ – ಮತಗಳ ನಡುವೆ ದ್ವೇಷ, ಹೊಡೆದಾಟ ಪ್ರಾರಂಭವಾಯಿತು.

ಈ ರೀತಿ ಹೋರಾಟಗಳನ್ನು ನಿರ್ಮಿಸಿ ಜನಸಂಖ್ಯಾ ನಿಯಂತ್ರಣಕ್ಕೆ ದಾರಿ ಮಾಡಿಕೊಟ್ಟ ಮತಚಾರ್ಯರಗಳಿಗೆ ಜಯವಾಗಲಿ!

ಜಿ. ವಿ. ಗಣೇಶಯ್ಯ.