ಅಮೃತ ಸಿಂಚನ – 9: ಸೌಂದರ್ಯ ಅಶಾಶ್ವತ

ಅಮೃತ ಸಿಂಚನ – 9

ಸೌಂದರ್ಯ ಅಶಾಶ್ವತ

ಮೈಸೂರು,ಡಿಸೆಂಬರ್,26,2020(www.justkannada.in):  ವಾರದ ಹಿಂದೆ ಆ ಹುಡುಗಿ ದಂತದ ಗೊಂಬೆಯಂತಿದ್ದಳು. ಆ ಬಳುಕುವ ಶರೀರವೇನು,ಆ ಸುಂದರವಾದ ಮೊಗವೇನು, ಅವಳ ದಟ್ಟ ಕೂದಲಿನ ಉದ್ದ ಜಡೆಯೇನು – ಎಂತಹವರೂ ಇನ್ನೊಮ್ಮೆ ನೋಡಬೇಕು ಅನ್ನಿಸುವಂತಹ ರೂಪವತಿ ಅವಳು.Teachers,solve,problems,Government,bound,Minister,R.Ashok

ಯಾವನೋ ತಲೆಕೆಟ್ಟ ಯುವಕ ಅವಳನ್ನು ಮೋಹಿಸೆಂದು ಪೀಡಿಸುತ್ತಿದ್ದ. ಅವಳು ಒಲ್ಲೆ ನೆನ್ನುತ್ತಿದ್ದಳು. ಇವನಿಗೆ ಸಿಟ್ಟು ಬಂತು. “ನನಗಿಲ್ಲ ನಿನ್ನ ಸೌಂದರ್ಯ ಇನ್ನಾರಿಗೂ ದಕ್ಕಬಾರದು” ಅಂದುಕೊಂಡು ಅದೆಲ್ಲಿಂದಲೋ ಅರ್ಧ ಲೀಟರಿನಷ್ಟು ಆಸಿಡ್ ತಂದು ಅವಳ ಮುಖದ ಮೇಲೆ ಎರಚಿಯೇ ಬಿಟ್ಟ!

ಈಗ ಈ ಸುಂದರಿಯ ಮುಖ ನೋಡಿದ ಮಕ್ಕಳು ಹೆದರಿ ಕಿಟಾರನೆ ಕಿರುಚಿ ಕೊಳ್ಳುವಂತಹ ಭಯಂಕರ ರೂಪಕ್ಕೆ ತಿರುಗಿದೆ. ಅಂದರೆ, ಈ ಸೌಂದರ್ಯವೆಂಬುದು ಅರ್ಧ ಲೀಟರು ಆಸಿಡ್ ಗೆ ಆಹುತಿಯಾಗಿಬಿಟ್ಟಿದೆ!Amrita sinchana - 9.-Beauty - impermanent.

ಆಸಿಡ್ ಬೀಳುವುದಕ್ಕೂ ಮೊದಲು ಮುಖದಲ್ಲಿ ಸೌಂದರ್ಯವನ್ನು ಹೊರಸೂಸಲು ಏನೆಲ್ಲ ಮೂಲಧಾತುಗಳು ಇದ್ದವೋ ಅವವೇ ಮೂಲಧಾತುಗಳು ಈಗಲೂ ಇವೆ. ಆದರೆ, ಅವು ಗೊತ್ತಾದ ಜಾಗದಲ್ಲಿ ಗೊತ್ತಾದ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಮುಖವು ವಿಕಾರವಾಗಿ ಕಾಣಿಸುತ್ತಿದೆ!

ಹುಡುಗಿಯ ಮುಖಕ್ಕೆ ಆಸಿಡ್ ಎರಚಿದ ಭೂಪ ಸತ್ತು ಇನ್ನೊಂದು ಜನ್ಮ ಪಡೆದು ಹುಟ್ಟುವಾಗಲೇ ವಿಕಾರ ರೂಪಿಯಾಗಿ ಹುಟ್ಟುತ್ತಾನೆ. ಆಗ ಯಾವ ಯುವತಿಯೂ ಅವನನ್ನು ವಿವಾಹವಾಗಲು ಇಷ್ಟಪಡಲಾರಳು! ವ್ಯವಸ್ಥೆಯೇ ಹಾಗಿದೆ, ಬೇವಿನ ಬೀಜ ಬಿತ್ತಿ ಮಾವಿನ ಫಲ ಪಡೆಯಲು ಸಾಧ್ಯವಿಲ್ಲ ಎಂಬ ವಿಚಾರವು ಸಾಮಾನ್ಯನೊಬ್ಬನಿಗೂ ಗೊತ್ತು. ಈ ಗುಟ್ಟು ಪಾಪ ಅವನಿಗೆ ಗೊತ್ತಿಲ್ಲ!

– ಜಿ. ವಿ. ಗಣೇಶಯ್ಯ.

 

Amrita sinchana – 9.-Beauty – impermanent.