ಅಮೃತ ಸಿಂಚನ – 6: ನಾಯಿಪಾಡು ಎಷ್ಟು ಕಾಲ?

ಅಮೃತ ಸಿಂಚನ – 6

ನಾಯಿಪಾಡು ಎಷ್ಟು ಕಾಲ?

ಹೀಗೆಯೇ ಒಂದು ಸಾರಿ ಯೋಚಿಸುತ್ತಿದ್ದಾಗ ನಮ್ಮ ಮನೆಯಲ್ಲಿದ್ದ ಒಂದು ನಾಯಿಯ ನೆನಪಾಯಿತು. ಅದು ಮರಿ ಹಾಕಿ ಒಂದೆರಡು ವರ್ಷಗಳಲ್ಲೇ ಸತ್ತು ಹೋಯಿತು. ಅದರ ಮರಿಗಳನ್ನು ಯಾರು ಯಾರೋ ಎತ್ತಿಕೊಂಡು ಹೋದರು.Teachers,solve,problems,Government,bound,Minister,R.Ashok

ಬೀದಿನಾಯಿಗಳಂತೂ ತುತ್ತಿನ ಚೀಲ ತುಂಬಿಸಿಕೊಳ್ಳಲು ಗೊತ್ತುಗುರಿಯಿಲ್ಲದೆ ಅಲೆಯುತ್ತಿರುತ್ತವೆ. ಇನ್ನು ಅವುಗಳಿಗೆ ಕಾಯಿಲೆ ಏನಾದರೂ ಬಂತು ಅಂದರೆ ಅವುಗಳನ್ನು ದೇವರೇ ಕಾಪಾಡಬೇಕು. ಯಾರೂ ಹತ್ತಿರಕ್ಕೆ ಕೂಡ ಸೇರಿಸಿಕೊಳ್ಳದೆ “ಛೀ, ಥೂ” ಅನ್ನಿಸಿಕೊಳ್ಳುವ ಕಜ್ಜಿ ನಾಯಿಗಳನ್ನು ನೀವು ನೋಡಿರಬೇಕಲ್ಲವೇ?

ಹಲವು ನಾಯಿಗಳು 12ರಿಂದ 15 ವರ್ಷಗಳವರೆಗೂ ಬದುಕಿರುವುದುಂಟು. ನಾಯಿಯೊಂದರ ಗರಿಷ್ಠ ವಯೋಮಿತಿ 20 ವರ್ಷ ಅನ್ನುತ್ತಾರೆ.

ಆಲೋಚಿಸಿದರೆ ಆಶ್ಚರ್ಯವಾಗುತ್ತದೆ, ದೇವರು ಎಂತಹ ದಯಾಮಯಿ ಅಂತ. ನಮ್ಮ ಹಾಗೆಯೇ ನಾಯಿಗಳೂ
80 ರಿಂದ 100 ವರ್ಷಗಳ ಕಾಲ ಬದುಕುವಂತಿದ್ದಿದ್ದರೆ ಅವುಗಳ ಗತಿ ಏನಾಗಬೇಕು? ಹೇಳಿಕೇಳಿ “ನಾಯಿಪಾಡು” ಎಂಬ ಮಾತು ಜನಜನಿತವಾಗಿದೆ. ಹತ್ತು ಹನ್ನೆರಡು ವರ್ಷಗಳು ಬದುಕಿಯೇ ಅವುಗಳದ್ದು “ನಾಯಿಪಾಡು.” ಇನ್ನು 80 – 100 ವರ್ಷ ಬದುಕುವುದು ಸಾಧ್ಯವಾಗಿದ್ದಿದ್ದರೆ? ಆಗ ಅವುಗಳ ಪಾಡನ್ನು ಯೋಚಿಸಲಿಕ್ಕೇ ಭಯವಾಗುತ್ತದೆ.

ದೇವರು ಖಂಡಿತ ದಯಾಮಯಿ. ನಾಯಿಗಳಿಗೆ ದೀರ್ಘಾಯಸ್ಸು ಕೊಟ್ಟಿಲ್ಲ. ಹಾಗಾಗಿ ಅವುಗಳ ಪಾಡು ಅಲ್ಪಕಾಲಿಕ ಮಾತ್ರ. ಕೆಲವು ಕೀಟಗಳಿಗಂತೂ ಕೆಲವು ನಿಮಿಷಗಳು ಮಾತ್ರ ಆಯಸ್ಸು ಕೊಟ್ಟು ದೇವರು ಕೃಪೆ ತೋರಿದ್ದಾನೆ!

– ಜಿ. ವಿ. ಗಣೇಶಯ್ಯ.