ಮನಸ್ಸಿನಿಂದ ಕೆಟ್ಟ ನೆನಪುಗಳನ್ನೂ ‘Delete’ ಮಾಡಬಹುದು! ಟೊರಾಂಟೋ ವಿವಿ ಮಹಿಳಾ ವಿಜ್ಞಾನಿ ಸಂಶೋಧನೆ

0
1152

ಟೊರಾಂಟೋ, ಏಪ್ರಿಲ್ 08 (www.justkannada.in): ಮೆದುಳಿನಿಂದ ಕೆಟ್ಟ ನೆನಪುಗಳನ್ನು ತೊಡೆದು ಹಾಕುವಂತಹ ನೂತನ ಸಂಶೋಧನೆಯನ್ನು ಟೊರಾಂಟೋ ವಿಶ್ವವಿದ್ಯಾಲಯದ ಹಿರಿಯ ಮಹಿಳಾ ವಿಜ್ಞಾನಿ ಪ್ರೊಫೆಸರ್ ಶೀನಾ ಜೋಶ್ಲಿನ್ ಮಾಡಿದ್ದಾರೆ.

ಹೌದು. ಅದೆಷ್ಟೋ ವರ್ಷಗಳ ಹಿಂದೆ ನಡೆದ ದುಃಖಕರ ವಿಚಾರ ಜೀವಮಾನ ಪೂರ್ತಿ ಕಾಡುತ್ತಿರುತ್ತದೆ. ಇಂತಹ ಕೆಟ್ಟ ನೆನಪುಗಳನ್ನು ಮರೆಯುವಂತಿದ್ದರೆ ಎಂದು ಹಲವು ಬಾರಿ ಯೋಚಿಸಿರುತ್ತೇವೆ. ಇದೀಗ ಅದೂ ಸಾಧ್ಯವಾಗಿದೆ. ಬೋಸ್ಟನ್​ನಲ್ಲಿ ನಡೆದ ವಿಶ್ವ ವಾರ್ಷಿಕ ವಿಜ್ಞಾನ ಸಮಾವೇಶದಲ್ಲಿ ತಮ್ಮ ಸಂಶೋಧನೆಯನ್ನು ಶೀನಾ ಜೋಶ್ಲಿನ್ ಬಹಿರಂಗಪಡಿಸಿದ್ದಾರೆ.

ನೆನಪುಗಳು ಮೆದುಳಿನಲ್ಲಿ ನ್ಯೂರಾನ್​ನ ಒಂದು ಸಣ್ಣ ನೆಟ್​ವರ್ಕ್​ನಲ್ಲಿ ಸಂಗ್ರಹವಾಗುತ್ತದೆ. ಇದನ್ನು ಎನ್ಗ್ರಾಮ್ಸ್ ಎಂದು ಕರೆಯುತ್ತಾರೆ. ಮೆದುಳಿನಲ್ಲಿರುವ ಕೋಟ್ಯಂತರ ನ್ಯೂರಾನ್​ಗಳಲ್ಲಿ ಕೆಲವಲ್ಲಿ ಮಾತ್ರ ಕೆಟ್ಟ ನೆನಪುಗಳು ಸಂಗ್ರಹವಾಗಿರುತ್ತವೆ. ಇಂತಹ ನ್ಯೂರಾನ್​ಗಳನ್ನು ಕಂಡುಹಿಡಿದು ನಾಶಪಡಿಸಲು ಸಾಧ್ಯವಿದೆ ಎಂದು ಶೀನಾ ಹೇಳಿದ್ದಾರೆ. ಸದ್ಯ ಸರ್ಜರಿ ಮೂಲಕ ಇದನ್ನು ತೆಗೆದುಹಾಕಲಾಗುತ್ತದೆ.

ಆದರೆ ಮಾತ್ರೆಯ ಮೂಲಕ ನಾಶಪಡಿಸುವ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇಲಿಗಳ ಮೇಲೆ ನಡೆಸಿರುವ ಪ್ರಯೋಗಗಳು ಯಶಸ್ವಿಯಾಗಿದ್ದು, ಮನುಷ್ಯರ ಮೇಲಿನ ಪ್ರಯೋಗಗಳನ್ನು ಆರಂಭಿಸಲಾಗಿದೆ. ಇಂತಹ ಸಂಶೋಧನೆಗೆ ಪ್ರೇರಣೆಯಾಗಿದ್ದು ಶೀನಾರ ಸ್ನೇಹಿತೆಯಂತೆ. ತನ್ನ ಸಂಶೋಧನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂಬ ಅನುಮಾನ ಶೀನಾ ಅವರಿಗಿದೆ.