ಹೈದರಾಬಾದ್, ನವೆಂಬರ್ 14 (www.justkannada.in): ಅನುಷ್ಕಾ ಶೆಟ್ಟಿ ತಮ್ಮ ಮೊದಲ ಕ್ರಷ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೆ ತನ್ನ 36ನೇ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಅನುಷ್ಕ ನಿಮ್ಮ ಮೊದಲ ಕ್ರಷ್ ಯಾರು? ಎಂದು ಅಭಿಮಾನಿ ಕೇಳಿ ಪ್ರಶ್ನೆಗೆ ಅನುಷ್ಕಾ ರಾಹುಲ್ ದ್ರಾವಿಡ್ ನನ್ನ ಮೊದಲ ಕ್ರಷ್ ಎಂದು ಉತ್ತರಿಸಿದ್ದಾರೆ.

ದ್ರಾವಿಡ್ ಅವರಲ್ಲಿರುವ ತಾಳ್ಮೆ, ಬ್ಯಾಟಿಂಗ್, ನಡವಳಿಕೆ, ನಾಯಕತ್ವ ಗುಣವನ್ನು ನೋಡಿ ಅನುಷ್ಕಾ ಶೆಟ್ಟಿ ಇಷ್ಟಪಟ್ಟಿದ್ದರಂತೆ. ರಾಜಮೌಳಿ ನಿರ್ದೇಶನದ ಬಾಹುಬಲಿಯ ನಂತರ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವೆ ಅನೇಕ ಗಾಸಿಪ್ ಗಳು ಈ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿತ್ತು . ಆದರೆ ಪ್ರಭಾಸ್ ಈ ಹಿಂದೆ ನಮ್ಮಿಬ್ಬರ ಮಧ್ಯೆ ಯಾವುದೇ ಲವ್ ಇಲ್ಲ ಎಂದು ಹೇಳಿಕೆ ನೀಡಿ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.