ನವದೆಹಲಿ:ಏ-20:(www.justkannada.in)ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ನಿಮಗೆ ಏನುಬೇಕಾದರೂ ಹೇಳುವ ಸ್ವಾತಂತ್ರ್ಯವಿದೆ ಎಂದುಕೊಂಡಿರುವುರಾ ಎಂದು ಕಿಡಿಕಾರಿದೆ.

ಕಳೆದ ವರ್ಷ ದೆಹಲಿಯ ಯಮುನಾ ನದಿಯ ತೀರದಲ್ಲಿ ಮೂರು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಪರಿಸರಕ್ಕೆ ಹಾನಿ ಉಂಟಾಗಿದ್ದರೆ, ಅದು ಸರ್ಕಾರ ಹಾಗೂ ಕೋರ್ಟ್ ಹೊಣೆ, ಏಕೆಂದರೆ ಕಾರ್ಯಕ್ರಮ ನಡೆಯಲು ಅನುಮತಿ ಕೊಟ್ಟವರೇ ಅವರು ಎಂದು ಹೇಳಿದ್ದರು.

ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕೋರ್ಟ್, ಮನಸೋಇಚ್ಛೆ ಹೇಳಿಕೆ ನೀಡಲು ನಿಮಗೆ ಸ್ವಾತಂತ್ರ್ಯವಿದೆ ಎಂದು ಕೊಂಡಿದ್ದೀರಾ? ಎಂದು ಗುಡುಗಿದೆ. ಯಮುನಾ ನದಿ ಪರಿಸರ ಏನಾದರೂ ಹಾಳಾಗುವುದಕ್ಕೆ ದಂಡ ಹಾಕುವುದಾದರೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಎನ್ ಜಿಟಿಗೇ ದಂಡ ವಿಧಿಸಬೇಕು. ಒಂದು ವೇಳೆ ಯಮುನಾ ನದಿಗೆ ಹಾನಿಯುಂಟಾಗಲಿದೆ ಎನ್ನುವುದಾದರೆ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಗೆ ತಡೆ ನೀಡಬಹುದಿತ್ತು ಎಂದು ರವಿಶಂಕರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಿಡಿ ಕಾರಿರುವ ಎನ್ ಜಿಟಿ ನಿಮಗೆ ಜವಾಬ್ದಾರಿಯ ಪ್ರಜ್ಞೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆಯನ್ನು ಎನ್ ಜಿಟಿ ಮೇ 7ಕ್ಕೆ ಮುಂದೂಡಿದೆ.
ರವಿಶಂಕರ್ ಅವರ ಆರ್ಟ್ ಅಫ್ ಲಿವಿಂಗ್ ಏರಫ್ಡಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನಡಿ ಪಾತ್ರವು ಸಂಪೂರ್ಣವಾಗಿ ನಾಶಗೊಂಡಿದೆ. ಈ ಹಾನಿ ಸರಿಪಡಿಸಲು ಕನಿಷ್ಠ 10 ವರ್ಷಗಳ ಅವಧಿ ಮತ್ತು ಸುಮಾರು 42 ಕೋಟಿ ರೂ ಅಗತ್ಯವಿದೆ ಎಂದು ತಜ್ನರ ತಂಡವೊಂದು ಎನ್ ಜಿಟಿಗೆ ವರದಿ ಸಲ್ಲಿಸಿತ್ತು. ನದಿ ತೀರದಲ್ಲಿ 7 ಎಕರೆ ವಿಶಾಲ ವೇದಿಕೆಯನ್ನೊಳಗೊಂಡಂತೆ 1,000 ಎಕರೆ ಪ್ರದೇಷದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಧಾನಿ ಮೋದಿ ಈ ಕಾರ್ಯಕ್ರಮ ಉದ್ಘಾಟಿಸಿದ್ದರು.

You Have No Sense Of Responsibility, NGT Says,Sri Sri Ravi Shankar