ಸರಸದ ಉತ್ತುಂಗಕ್ಕೇರಲು ಈ 5 ಆಸನಗಳು ಸಹಕಾರಿ…

0
3016
yoga-sex-life-doctor-expert-mysore

 

ಮೈಸೂರು, ಜ.24, 2018 : (www.justkannada.in news) ಗಂಡಸರ ಗಂಡಸ್ತನಕ್ಕೆ ಕುತ್ತು ಬರುತ್ತಿದೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆ ಚರ್ಚೆಗೆ ಗ್ರಾಸವಾಗುತ್ತಿದೆ. ಗಂಡಸರ ‘ಪುರುಷತ್ವ’ ದಿನೇದಿನೇ ಕಡಿಮೆಯಾಗುತ್ತಾ ಸಾಗಿದೆ ಅನ್ನೋ ಆತಂಕವನ್ನು ಜನತ್ತಿನ ಅನೇಕ ಪ್ರಮುಖ ವೈದ್ಯರ ಸಂಶೋಧನೆಗಳು ತಿಳಿಸಿವೆ. ಇದಕ್ಕೆ ಜೀವನ ಶೈಲಿಯಲ್ಲಿನ ಬದಲಾವಣೆ, ವ್ಯಾಯಾಮದ ಕೊರತೆ, ಆಲಸಿ ಜೀವನ ವಿಧಾನ, ಅತಿಯಾದ ಆಹಾರ ಸೇವನೆ ಮುಂತಾದವು ಕಾರಣ ಎನ್ನಲಾಗುತ್ತಿದೆ.

yoga-sex-life-doctor-expert-mysore

ಇಷ್ಟು ಮಾತ್ರವಲ್ಲದೇ ಜೀವನ ಶೈಲಿಯಿಂದ ಬರುವ ರೋಗಗಳಾದ ಡಯಾಬಿಟಿಸ್, ಬ್ಲಡ್ಪ್ರೆಶರ್ ಮುಂತಾದವು ಕೂಡ ಪುರುಷತ್ವ ಕುಂದಲು ಪ್ರಮುಖ ಕಾರಣಗಳಾಗಿವೆ ಎಂದೂ ಹೇಳಲಾಗಿದೆ. ಈ ಎರಡು ಪ್ರಮುಖ ಸಮಸ್ಯೆಗಳಿಂದ ಉಂಟಾಗುವ ಹೃದಯದ ತೊಂದರೆ, ಬೊಜ್ಜು ಮೈ ಮುಂತಾದವುಗಳು ಶಿಶ್ನದ ನಿಮಿರುವಿಕೆಯ ತೊಂದರೆಗೆ ದಾರಿ ಮಾಡಿಕೊಡುತ್ತವೆ.
ಈ ತೊಂದರೆ ನಿವಾರಣೆಗೆ ಕೆಲವು ಪ್ರಮುಖ ವ್ಯಾಯಾಮಗಳು ಅದರಲ್ಲೂ ಸೊಂಟದ ಭಾಗದ, ಪೃಷ್ಟಭಾಗದ ವ್ಯಾಯಾಮಗಳು ಶೇ. 40ರಷ್ಟು ಜನರಲ್ಲಿ ಶಿಶ್ನದ ನಿಮಿರುವಿಕೆ ಗಮನಾರ್ಹವಾಗಿ ಸುಧಾರಿಸಲು ನೆರವಾಗುತ್ತವೆ ಎಂದು ಬ್ರಿಟನ್ನಲ್ಲಿ ನಡೆದ ಅಧ್ಯಯನದಲ್ಲಿ ತಿಳಿದು ಬಂದಿದೆ.

ಕೆಲವು ಯೋಗಾಸನಗಳು ಕೂಡ ಪೃಷ್ಠದ ಮಾಂಸಖಂಡಗಳಿಗೆ ವ್ಯಾಯಾಮ ನೀಡಿ ಲೈಂಗಿಕ ಸಮಸ್ಯೆಗಳನ್ನು ಪರಿಹರಿಸುತ್ತವೆ ಎಂದೂ ಹೇಳಲಾಗಿದೆ. ಯೋಗಾಸನ ಭಂಗಿಗಳಾದ ಉತ್ಥಾನಪಾದಾಸನ, ನೌಕಾಸನ ಮತ್ತು ಪಶ್ಚಿಮೋತ್ಥಾಸನ ಮುಂತಾದವು ನಿಮಿರುವಿಕೆಯ ತೊಂದರೆ ನಿವಾರಣೆಗೆ ನೆರವಾಗುತ್ತವೆ. ಯೋಗದ ಹಲವು ಭಂಗಿಗಳು ಈ ಸಮಸ್ಯೆ ನಿವಾರಣೆ ನೆರವಾಗುವುದು ನಿರೂಪಿತವಾಗಿದೆ. ಇದಕ್ಕೆ ಸೂಕ್ತ ತಜ್ಞರಿಂದ ಸಲಹೆ, ಮಾರ್ಗದರ್ಶನ ಪಡೆಯಬೇಕಷ್ಟೇ.

yoga-sex-life-doctor-expert-mysore

ಇನ್ನು ಏರೋಬಿಕ್ ವ್ಯಾಯಾಮಗಳು, ಬಿರುಸಿನ ನಡಿಗೆ, ಜಾಗಿಂಗ್, ಈಜು ಮುಂತಾದ ಹೃದಯ ಬಡಿತದ ದರ ಹೆಚ್ಚಿಸುವ ವ್ಯಾಯಾಮಗಳು ಕೂಡ ಈ ಮೇಲಿನ ತೊಂದರೆ ನಿವಾರಿಸುವಲ್ಲಿ ನೆರವಾಗುತ್ತವೆೆಂದೂ ಎನ್ನಲಾಗಿದೆ.
ವಾರದಲ್ಲಿ ನಾಲ್ಕರಿಂದ ಐದು ದಿನಗಳಕಾಲ ಈ ಮೇಲಿನ ವ್ಯಾಯಾಮಗಳನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಕೈಗೊಳ್ಳುವುದರಿಂದ ಬಹಳ ಉಪಯೋಗವಾಗುತ್ತದೆ.

yoga-sex-life-doctor-expert-mysore

ಆದರೆ ಮುಖ್ಯವಾಗಿ ಹೇಳ ಬೇಕಾಗಿರುವುದಿಷ್ಟೇ. ನಿಮಿರುವುಕೆಯ ಸಮಸ್ಯೆ ಇತರೆ ಎಲ್ಲ ಆರೋಗ್ಯ ತೊಂದರೆಗಳಂತೆ ಒಂದು ವೈದ್ಯಕೀಯ ತೊಂದರೆಯಷ್ಟೇ. ಇದನ್ನು ಮರೆ ಮಾಚುವುದಕ್ಕಿಂತ, ನಾಚಿಕೆ ಪಡುತ್ತ ಒಳಗೊಳಗೆ ಅನುಭವಿಸುವುದಕ್ಕಿಂತ, ಪರಿಣತರ ಸಲಹೆ ತೆಗೆದುಕೊಂಡು ಸರಳ ಜೀವನ ಶೈಲಿಯ ಬದಲಾವಣೆ ಮತ್ತು ವ್ಯಾಯಾಮಗಳಿಂದ ಸೂಕ್ತ ಲಾಭ ಪಡೆದುಕೊಳ್ಳುವುದು ಉತ್ತಮ.
Tags : yoga-sex-life-doctor-expert-mysore