ಬೆಳಗಾವಿ,ಮಾ,20,2017(www.justkannada.in): ಯರಗಟ್ಟಿಯನ್ನ  ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಯರಗಟ್ಟಿ ತಾಲೂಕು ಹೋರಾಟ ಸಮಿತಿವತಿಯಿಂದ   ಯರಗಟ್ಟಿ ಪಟ್ಟಣ ಸಂಪೂರ್ಣ ಬಂದ್ ಆಚರಣೆ ಮಾಡಲಾಯಿತು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣವನ್ನ ಸರ್ಕಾರ ಹೊಸ ತಾಲೂಕು ಘೋಷಣೆ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶಗೊಂಡಿರುವ  ಯರಗಟ್ಟಿ ತಾಲೂಕು ಹೋರಾಟ ಸಮಿತಿಯ ಕಾರ್ಯಕರ್ತರು ಇಂದು ಯರಗಟ್ಟಿ ಬಂದ್ ಗೆ ಕರೆ ನೀಢಿದ್ದಾರೆ.

ಹೀಗಾಗಿ ಯರಗಟ್ಟಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದು, ಕಾರ್ಯಕರ್ತರು ಬೆಳಗಾವಿ -ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Key words: Yaragatti -center -town – Belgaum -bandh