ಬೆಂಗಳೂರು, ಜನವರಿ 12 (www.justkannada.in): ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ ಜ.16ರಿಂದ ಪುಸ್ತಕದಂಗಡಿಗಳಲ್ಲಿ ದೊರೆಯಲಿದೆ. ಜತೆಗೆ ಕಿಂಗ್ಸ್ ಮಾರ್ಟ್ ಆನ್ ಲೈನ್ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲೂ ಕೊಳ್ಳಬಹುದು.

ಹೌದು. ಡಾ.ಎಸ್‌.ಎಲ್‌. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಗೆ ಸಿದ್ಧವಾಗಿದ್ದು, ವಾಲ್ಮೀಕಿ ರಾಮಾಯಣದ ಕಥೆಯನ್ನು ಆಧರಿಸಿ ರಚಿತವಾಗಿರುವ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ.writer-sl-bhyrappa-new-novel-uttarakaanda-release-on-jan-16-u-can-book-at-kingsmart-online-portal

ಸುಮಾರು ಎರಡು ವರ್ಷಗಳ ಹಿಂದೆ ಅವರ ‘ಯಾನ’ ಕಾದಂಬರಿ ಪ್ರಕಟವಾಗಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿತ್ತು. ನಲವತ್ತು ವರ್ಷಗಳ ಹಿಂದೆ ‘ಪರ್ವ’ ಕಾದಂಬರಿಯಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯ ಪಾತ್ರದ ಮೂಲಕ ಮಹಾಭಾರತವನ್ನು ಪುನರ್‌ ವ್ಯಾಖ್ಯಾನಿಸಿದ್ದರು. ಇದೀಗ ‘ಉತ್ತರಕಾಂಡ’ದಲ್ಲಿ ಸೀತೆಯ ಪಾತ್ರದ ಮೂಲಕ ರಾಮಾಯಣದ ಅರ್ಥಕ್ಕೆ ಹೊಸದಾದ ಆಯಾಮ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಸಾಹಿತ್ಯ ಭಂಡಾರ ಪ್ರಕಟಿಸಿರುವ ಈ ಹೊಸ ಕಾದಂಬರಿ 336 ಪುಟಗಳಿದ್ದು, ಪ್ರತಿಯ ಬೆಲೆ ರೂ. 375. ಆನ್ ಲೈನ್ ಮೂಲಕವೂ ಇದನ್ನು ಬುಕ್ ಮಾಡಬಹುದು. ಕಿಂಗ್ಸ್ ಮಾರ್ಟ್ ಆನ್ ಲೈನ್ ಮಾರ್ಟಲ್ ಗೆ ಭೇಟಿ ನೀಡಿ ಪುಸ್ತಕವನ್ನು ಕೊಳ್ಳಬಹುದು. ಇದಕ್ಕಾಗಿ ಈ ಲಿಂಕ್ ಬಳಸಬಹುದು.

www.kingsmart.co.in/in/p/Uttarakaanda-ಉತ್ತರಕಾಂಡ-paper-back-SL-Byrappa/184