ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪೂಜೆ ಸಲ್ಲಿಕೆ: ಗಜ ಪಯಣಕ್ಕೆ ಕ್ಷಣಗಣನೆ…

0
363
Worshiping -mysore dasara- Elephants- Countdown -gajapayana

ಮೈಸೂರು,ಆ.12,2017(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ 2017ರ ಗಜಪಯಣ ಚಾಲನೆಗೆ ಕ್ಷಣಗಣನೆ ಆರಂಭವಾಗಿದ್ದು, ಆನೆಗಳಿಗೆ ಪೂಜೆ ಸಲ್ಲಿಕೆ ಮಾಡಲಾಗಿದೆ.Worshiping -mysore dasara- Elephants- Countdown -gajapayana

ಹುಣಸೂರಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಗಜಪಯಣ ಆನೆಗಳಿಗೆ ಪೂಜೆ ಸಲ್ಲಿಸಲಾಗಿದ್ದು, ನಂತರ ಗಜ ಪಯಣಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಚಾಲನೆ ಬಳಿಕ ಗಜಪಡೆಗಳ ಮೆರವಣಿಗೆ ಆರಂಭವಾಗಲಿದ್ದು ದಸರಾ ವೆಬ್ ಸೈಟ್ ಹಾಗೂ ಕಿರುಚಿತ್ರವೊಂದು ಬಿಡುಗಡೆಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾವುತರು ಹಾಗೂ ಕಾವಾಡಿಗಳಿಗೆ ಗಣ್ಯರು ತಾಂಬೂಲ ನೀಡಲಿದ್ದಾರೆ. ಮೊದಲ ತಂಡದಲ್ಲಿ ಅರ್ಜುನ, ಬಲರಾಮ, ಭೀಮ, ಅಭಿಮನ್ಯು, ಗಜೇಂದ್ರ, ಕಾವೇರಿ ವರಲಕ್ಷ್ಮಿ, ವಿಜಯ ಆನೆಗಳು ಆಗಮಿಸಲಿವೆ.

key words:Worshiping -mysore dasara- Elephants- Countdown -gajapayana