ಮೇ 13ರಿಂದ ಮೂರನೇ ಮಹಾಯುದ್ಧ: ನಿಜವಾಗಲಿದೆಯೇ ದೇವದೂತನ ಭವಿಷ್ಯವಾಣಿ..?

0
1361

ಟೆಕ್ಸಾಸ್:ಏ-21:(www.justkannada.in)ಈ ಹಿಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಜಯಶಾಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದು ಸುದ್ದಿಯಲ್ಲಿದ್ದ ಸ್ವಯಂ ಘೋಷಿತ ದೇವದೂತ, ಈಗ ಮೂರನೇ ಮಹಾಯುದ್ಧದ ಬಗ್ಗೆಯೂ ಭವಿಷ್ಯ ನುಡಿದಿದ್ದು, ಮೇ 13ರಂದು 3ನೇ ಮಹಾಯುದ್ಧ ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿಸಿದ್ದಾನೆ.

ಅಮೆರಿಕ, ರಷ್ಯ ಮತ್ತು ಉತ್ತರ ಕೊರಿಯ ನಡುವೆ ಸಮರೋತ್ಸಾಹದ ಮಾತುಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಟೆಕ್ಸಾಸ್ ದೇವದೂತ ಕ್ಲೇರ್‌ವೊಯಾಂಟ್‌ ಹೊರೇಶಿಯೋ ವಿಲೇಗಾಸ್‌ ನ ಈ ಭವಿಷ್ಯವಾಣಿ ಆತಂಕಕ್ಕೆ ಕಾರಣವಾಗಿದೆ.

ಮೂರನೇ ಜಾಗತಿಕ ಯುದ್ಧ’ ನಿರ್ದಿಷ್ಟವಾಗಿ ಯಾವ ದಿನಾಂಕದಂದು ಆರಂಭಗೊಳ್ಳುತ್ತದೆ ಎಂದು ತನಗೆ ತಿಳಿದಿದೆ. ನಾನು ಬೈಬಲ್‌ ಮತ್ತು ವಿಶ್ವದ ಇತರ ಕೆಲವು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದ್ದೇನೆ; ಹಾಗಾಗಿ ಈ ವಿಶ್ವದಲ್ಲಿ ಯಾವ ದಿನಾಂಕದಂದು ಪರಮಾಣು ಸಮರ ಸ್ಫೋಟಗೊಳ್ಳುತ್ತದೆ ಎಂದು ನನಗೆ ಗೊತ್ತಿದೆ’ ಎಂದು ಹೇಳಿಕೊಂಡಿದ್ದಾನೆ. ಈ ಸ್ವಯಂ ಘೋಷಿತ ದೇವದೂತ 2015ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಅವರೇ ಗೆಲ್ಲುತ್ತಾರೆ ಎಂದು ಈತ ಈ ಹಿಂದೆ ಭವಿಷ್ಯ ನುಡಿದಿದ್ದ. ಅಲ್ಲದೇ ಟ್ರಂಪ್‌ ಅವರು ಉಜ್ವಲವಾಗಿ ಹೊಳೆದು ಬೆಳಗುವ ಅರಸನಾಗಿ ಮೂಡಿ ಬರಲಿದ್ದಾರೆ ಮತ್ತು ಅವರೇ ಮೂರನೇ ಮಹಾ ಯುದ್ಧಕ್ಕೆ ಕಾರಣರಾಗುತ್ತಾರೆ ಎಂದು ಹೇಳಿದ್ದ.

ಟ್ರಂಪ್‌ ಸಿರಿಯಾ ಮೇಲೆ ಆಕ್ರಮಣ ಮಾಡುತ್ತಾರೆ ಮತ್ತು ಇದರ ಫ‌ಲವಾಗಿ ರಶ್ಯ, ಉತ್ತರ ಕೊರಿಯ ಮತ್ತು ಚೀನ ಮೂರನೇ ಮಹಾ ಯುದ್ಧಕ್ಕೆ ಪಾದಾರ್ಪಣೆ ಮಾಡುತ್ತವೆ ಎಂದೂ ವಿಲೇಗಾಸ್‌ ಹೇಳಿದ್ದ

ವಿಲೇಗಾಸ್‌ ಪ್ರಕಾರ ಇದೇ ವರ್ಷ ಮೇ 13 – ಕ್ರಿಸ್ತನ ತಾಯಿ, ವರ್ಜಿನ್‌ ಮೇರಿ , ಅಂದರೆ ಅವರ್‌ ಲೇಡಿ ಆಫ್ ಫಾತಿಮಾ ಧರೆಗಿಳಿದು ಬಂದ ನೂರನೇ ವರ್ಷಾಚರಣೆಯ ದಿನ – ಅಂದು ಮೂರನೇ ಮಹಾ ಯುದ್ಧ ಸ್ಫೋಟಗೊಳ್ಳುತ್ತದೆ.

ಈ ವರ್ಷ ಮೇ 13ರಿಂದ ಅಕ್ಟೋಬರ್‌ 13ರ ತನಕ ನಡೆಯುವ ಮೂರನೇ ಮಹಾ ಯುದ್ಧವು ವಿಶ್ವದಲ್ಲಿ ಅಪಾರ ಪ್ರಮಾಣದ ಸಾವು, ನೋವು, ಆಘಾತ, ನಾಶ ನಷ್ಟವನ್ನು ಉಂಟು ಮಾಡಲಿದೆ. ಅಮೆರಿಕದ ಹಿಟ್‌ ಲಿಸ್ಟ್‌ನಲ್ಲಿ ಇರುವ ಮುಂದಿನ ದೇಶ ಉತ್ತರ ಕೊರಿಯ ಎನಿಸಲಿದೆ ಎಂದು ಹೇಳಿದ್ದಾನೆ.

World War III will begin on May 13,Mystic Predicts Exact Day